ಮುಂಡರಗಿ

ಇತಿಹಾಸ ಅರಿತುಕೊಂಡು ದೇಶಭಕ್ತಿ ಬೆಳೆಸಿಕೊಳ್ಳುವಂತೆ ಶಾಸಕ ಲಮಾಣಿ ಕರೆ

ಇತಿಹಾಸ ಅರಿತುಕೊಂಡು ದೇಶಭಕ್ತಿ ಬೆಳೆಸಿಕೊಳ್ಳುವಂತೆ ಶಾಸಕ ಲಮಾಣಿ ಕರೆ

ಮುಂಡರಗಿ:  ಭಾರತದ ಸ್ವಾತಂತ್ರ-್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂತಹ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವದರ ಜೊತೆಗೆ ಇತಿಹಾಸವನ್ನು ಅರಿತುಕೊಂಡು  ದೇಶಭಕ್ತಿಯನ್ನು ಬೆಳೆಸಿಕೊಳ್ಳುವಂತೆ ಶಾಸಕರಾದ ರಾಮಣ್ಣ ಲಮಾಣಿ ನುಡಿದರು. 

ಮುಂಡರಗಿ ಪುರಸಭೆ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ತಾಲೂಕಾಡಳಿತ ಮುಂಡರಗಿ ಇವರ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜರುಗಿದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸ್ವಾತಂತ್ರ ಅನ್ನುವದು ಅನೇಕ ಮಹನೀಯರ ತ್ಯಾಗ ಬಲಿದಾನದ ಸಂಕೇತವಾಗಿದೆ. ಈ ತ್ಯಾಗ ಬಲಿದಾನಗಳಿಂದ ದೊರೆತ ಸ್ವಾತಂತ್ರವನ್ನು ಕಾಪಾಡಿಕೊಳ್ಳುವದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಸ್ವಾತಂತ್ರ-್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಪ್ರತಿಯೊಬ್ಬರಲ್ಲೂ ದೇಶಭಕ್ತಿಯನ್ನು ಜಾಗೃತಗೊಳಿಸಬೇಕು. ಭಾರತ ಸ್ವಾತಂತ್ರ-್ಯ ಹೋರಾಟದಲ್ಲಿ ಮುಂಡರಗಿಯ ಭೀಮರಾಯರ ಇತಿಹಾಸವನ್ನು ಎಲ್ಲರಿಗೂ ಪರಿಚಯಿಸುವ ಕಾರ್ಯವಾಗಬೇಕಾಗಿದೆ.ಇಂದಿನ ಯುವಕರು ದೇಶಾಭಿಮಾನ ಬೆಳೆಸಿಕೊಂಡು ದೇಶಕ್ಕಾಗಿ ತಮ್ಮದೇ ಕೊಡುಗೆ ನೀಡುವದರ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ ರಾಮಣ್ಣ ಲಮಾಣಿ ತಿಳಿಸಿದರು. 

ಸ್ವಾಮಿ ವಿವೇಕಾನಂದ ಯೂಥ ಮೂವಮೆಂಟನ ಪ್ರಾದೇಶಿಕ ಮುಖ್ಯಸ್ಥರಾದ ಜಯಂತ ಕೆ.ಎಸ್‌. ಮಾತನಾಡಿ ಸ್ವಾತಂತ್ರ-್ಯದ ಕಿಚ್ಚನ್ನು ಹಚ್ಚಿ ದ ಸವಿ ನೆನಪಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇಂದಿನ ಯುವಕರು ದೇಶದ ನೈಜ ಇತಿಹಾಸವನ್ನು ಅರಿತುಕೊಳ್ಳಲು ಮುಂದಾಗುವಂತೆ ತಿಳಿಸಿದರು. ಭಾರತದ ಸ್ವಾತಂತ್ರ-್ಯಕ್ಕಾಗಿ ಅನೇಕ ಮಹಾನರು ಹೊರಾಡಿದ್ದು ಇವರ ಬಗ್ಗೆ ಹೆಚ್ಚಿನವರ ಬಗ್ಗೆ ಇಂದಿನ ಯುವ ಜನತೆಗೆ ತಿಳಿಸಿಕೊಡಬೇಕಾಗಿರುವದು ಅತೀ ಅವಶ್ಯಕವಾಗಿದೆ. ಸ್ವಾತಂತ್ರ ಸಂಗ್ರಾಮ ಪ್ರಾರಂಭಕ್ಕೂ ಮುನ್ನ ಮುಂಡರಗಿಯ ಭೀಮರಾಯರು, ನರಗುಂದದ ಬಾಬಾಸಾಹೇಬರು ಗ್ರಾಮ ಗ್ರಾಮಗಳಲ್ಲಿ ಸ್ವಾತಂತ್ರದ ಕಿಚ್ಚನ್ನು ಹಚ್ಚಿದ್ದರು.  

ಭಾರತದ ಮೇಲೆ ಅನೇಕರು ದಾಳಿ ಮಾಡುವದರ ಮೂಲಕ ತಮ್ಮ ಪ್ರಭುತ್ವ ಸಾಧಿಸಲು ಪ್ರಯತ್ನಿಸಿದರು. ಆದರೆ ನಮ್ಮ ಸ್ವಾತಂತ್ರ ಹೋರಾಟಗಾರರು ಅವರನ್ನು ಒಂದು ದಿನವು ಅವರನ್ನು ನೆಮ್ಮದಿಯಾಗಿ ಇರಲು ಬಿಡಲಿಲ್ಲ. ಅಂದಿನ ನಮ್ಮ ಸ್ಚಾತಂತ್ರ-್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಇಂದು ಸ್ವಾತಂತ್ರ ಅನುಭವುಸುತ್ತಿರುವ ನಾವೆಲ್ಲರೂ ಸ್ವಾತಂತ್ರದ ಹಕ್ಕಿನೊಂದಿಗೆ ನಮ್ಮ ಆದ್ಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುವದರ ಜೊತೆಗೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ತಿಳಿಸಿದರು. ಭಾರತ ಇಂದು ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳುವ ಕಾರ್ಯಕ್ಕೆ ಇಂದಿನ ಯುವ ಪೀಳಿಗೆ ಮುಂದಾಗಬೇಕು. ನಮ್ಮ ಅನೇಕ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳಿಂದಾಗಿ ನಾವು ಅನುಭವಿಸುತ್ತಿರುವ ಸ್ವಾತಂತ್ರ-್ಯವನ್ನು ಕಾಪಾಡಿಕೊಳ್ಳುವದು ಇಂದಿನ ಪ್ರತಿ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಭಾರತದ ನೈಜ ಇತಿಹಾಸವನ್ನು ಅರಿತುಕೊಳ್ಳುವದರ ಮೂಲಕ ಸಧೃಡ ಭಾರತ ನಿರ್ಮಾಣಕ್ಕೆ ಮುಂದಾಗುವಂತೆ ಕರೇ ನೀಡಿದರು. 

ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವರು ಮಾತನಾಡಿ ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ದೇಶಾವಗಿದೆ. ಭಾರತವು ಸ್ವಾತಂತ್ರಕ್ಕೂ ಮುನ್ನ ಅನೇಕರ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದ ಸಮಯದಲ್ಲಿ ಅನೇಕ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದಾಗಿ ಭಾರತ ಸ್ವಾತಂತ್ರ ಹೊಂದಿದ್ದು ಸ್ವಾತಂತ್ರ-್ಯಕ್ಕಾಗಿ ಹೋರಾಡಿದ ಮಹನಿಯರೆಲ್ಲರನ್ನು ಸ್ಮರಿಸುವದು ನಮ್ಮೆಲ್ಲರ ಕಾರ್ಯವಾಗಿದೆ. ಅಲ್ಲದೇ ಪ್ರತಿಯೊಬ್ಬರು ದೇಶ ಭಕ್ತಿ ಬೆಳೆಸಿಕೊಳ್ಳುವದರ ಜೊತೆಗೆ ಮಕ್ಕಳಿಗೂ ಭಾರತದ ಇತಿಹಾಸದ ಮಹತ್ವ ತಿಳಿ ಹೇಳಲು ತಿಳಿಸಿದರು. 

ಭೀಮರಾಯರ ವಂಶಸ್ಥರಾದ ವಿ.ಎಲ್‌.ನಾಡಗೌಡರ ಮಾತನಾಡಿ ಭಾರತದ ಸ್ವಾತಂತ್ರ ಹೋರಾಟದಲ್ಲಿ ಭೀಮರಾಯರು ತಮ್ಮ 2000 ಸೈನಿಕರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ರೋಚಕ ಕತೆಯನ್ನು ಮೆಲಕು ಹಾಕಿದರು. ಸ್ವಾತಂತ್ರ-್ಯಕ್ಕಾಗಿ ಹೊರಾಡಿದಂತಹ ತೆರೆಮರೆಯಲ್ಲಿರುವ ಸ್ವಾತಂತ್ರ-್ಯ ಹೋರಾಟಗರ ಇತಿಹಾಸವನ್ನು ಮುನ್ನೆಲೆಗೆ ತರುವದರ ಜೊತೆಗೆ ಭಾರತದ ಇತಿಹಾಸವನ್ನು ತಿರುಚದೇ ಅದರ ಅಮಗ್ರ ಅಧ್ಯಯನಗೊಳಿಪಡಿಸಲು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮುಂಡರಗಿ ಪುರಸಭೆ  ಉಪಾದ್ಯಕ್ಷ ಶಿವಣ್ಣ ಚಿಕ್ಕಣ್ಣವರ, ವಿ.ಎಲ್‌.ನಾಡಗೌಡರ,ಪುರಸಭೆ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು,ವಿಧ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು. ತಹಶೀಲ್ದಾರ ಆಶಪ್ಪ ಪೂಜಾರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. 

ಇದಕ್ಕೂ ಮುನ್ನ ಭಾರತಾಂಭೆಯ ಭಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ವಾತಂತ್ರೋವ್ಸದ ಅಮೃತ ಮಹೊತ್ಸವದ ಸವಿ ನೆನಪಿನ ಶಿಲಾ ಫಲಕ ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಚಿಸಲಾದ ದೇಶಾಭಿಮಾನದ ಕಿಚ್ಚು ಬಡದೆಬ್ಬಿಸುವ ಸಾಕ್ಷ-್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ನೆರೆದ ಅತಿಥಿ ಸಾರ್ವಜನಿಕರಿಗೆ  ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅಣ್ಣಿಗೇರಿ ಜಿ.ಎಸ್‌.ಅವರು ಸಂಕಲ್ಪ ವಿಧಿ ಬೋಧಿಸಿದರು. ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಗೌರವಿಸಲಾಯಿತು. 

ಮುಂಡರಗಿಯ ಕರ್ನಾಟಕ ಜಾನಪದ ಕಲಾ  ತಂಡದವರು ನಾಡಗೀತೆ ಪ್ತಚುರ ಪಡಿಸಿದರು. ಕು. ನಯನಾ ಅಳವಂಡಿ ದೇಶ ಭಕ್ತಿ ಗೀತೆ ಹಾಗೂ ರಾಷ್ಟ್ರ ಗೀತೆ ಪ್ರಚುರ ಪಡಿಸಿದರು. ಅರಸನಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ಆಕರ್ಷಷಕ ಮೆರವಣಿಗೆ:ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಗದಗ, ತಾಲೂಕಾಡಳಿತ ಮುಂಡರಗಿ ಇವರ ಸಂಯೋಗದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆಯ ಹಾಗೂ ಮುಂಡರಗಿ ಭೀಮರಾಯರ ಭಾವಚಿತ್ರಕ್ಕೆ ತಹಶೀಲ್ದಾರ ಆಶಪ್ಪ ಪೂಜಾರ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ​‍್ಿಸಿ ಜಕ್ಕಲಿಕೆ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಉಪಾಧ್ಯಕ್ಷ ಶಿವಣ್ಣ ಚಿಕ್ಕಣ್ಣವರ,ಪುರಸಭೆ ಸದಸ್ಯರು. ತಾಲಕೂ ಮಟ್ಟದ ಅಧಿಕಾರಿಗಳು, ಹಾಜರಿದ್ದರು. 

ತಹಶೀಲ್ದಾರ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆಯು ಮುಂಡರಗಿಯ ವಿವಿಧ ಬಡಾವಣೆಗಳ ಮೂಲಕ ಸಾಗಿ ಪುರಸಭೆ ಆವರಣ ತಲುಪಿತು. ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು, ಶಾಲಾ ಕಾಲೇಜು, ಎನ್‌.ಸಿ.ಸಿ.,ಸ್ಕೌಟ್ಸ ಮತ್ತು ಗೈಡ್ಸ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಥ ನೀಡಿದರು. 


ಸುದ್ದಿ ಓದಿ