ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ಶಾಸಕ ಜಿ.ಎಸ್.ಪಾಟೀಲ ಭೇಟಿ
ಮುಂಡರಗಿ 11 : ಪಟ್ಟಣದ ಹೆಸರೂರ ರಸ್ಥೆಯಲ್ಲಿರುವ ಶ್ರೀ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನದ ದರ್ಶನಕ್ಕೆಂದು ಭೇಟಿ ನೀಡಿದ ನೂತನ ಶಾಸಕರಾಗಿ ಆಯ್ಕೆಯಾಗಿರುವ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಹಾಗೂ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಇವರಿಗೆ ದೇವಸ್ಥಾನ ಕಮೀಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ದೇವಸ್ಥಾನದ ಸಮುದಾಯ ಭವನಕ್ಕೆ ಮುಖ್ಯಮಂತ್ರಿಗಳ ನಿಧಿಯಿಂದ ಕಟ್ಟಡದ ಅಭಿವೃದ್ಧಿಗಾಗಿ ಅನುದಾನವನ್ನು ಮಂಜೂರು ಮಾಡಬೇಕೆಂದು ತಾಲೂಕಿನ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮೀಟಿಯಿಂದ ಇಬ್ಬರೂ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಸಮಾಜದ ದೇವಸ್ಥಾನ ಕಮೀಟಿ ಅಧ್ಯಕ್ಷರಾದ ಡಾ.ಬಸವರಾಜ ಮೇಟಿ, ಮುಖಂಡರಾದ ಹೇಮಗೀರೀಶ ಹಾವಿನಾಳ, ಲಿಂಗರಾಗೌಡ ಪಾಟೀಲ್, ಹೇಮಂತಗೌಡ ಪಾಟೀಲ, ಡಾ.ವೈ.ಎಸ್.ಪಾಟೀಲ್, ಅಂದಪ್ಪ ಮೇಟಿ, ಎಂ.ಎ.ರಡ್ಡೇರ, ರುದ್ರಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ್, ಈರಣ್ಣ ಮೇಟಿ, ಹನುಮರಡ್ಡಿ ಮೇಟಿ, ಬಾಬಣ್ಣ ಚನ್ನಳ್ಳಿ, ಶುಭಾಸ ರಡ್ಡಿ, ಹನುಮಂತಪ್ಪ ಗಡ್ಡದ, ಸುರೇಶ ಹೊಕ್ಕಳದ ಇತರರು ಇದ್ದರು.