ಮುಂಡರಗಿ

ಶಾಸಕ ಡಾ.ಚಂದ್ರು ಲಮಾಣಿ ತಾಲೂಕ ಸರ್ಕಾರಿ ಆಸ್ಪತ್ರೆಗೆ ಭೆೇಟಿ

ಶಾಸಕ ಡಾ.ಚಂದ್ರು ಲಮಾಣಿ ತಾಲೂಕ ಸರ್ಕಾರಿ ಆಸ್ಪತ್ರೆಗೆ ಭೆೇಟಿ

ಮುಂಡರಗಿ :   ಸರ್ಕಾರಿ ಆಸ್ಪತ್ರೆಗೆ ಬರುವಂತ ಎಲ್ಲಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಒತ್ತು ನೀಡಬೇಕು. ಹಾಗೂ ಅಸ್ಪತ್ರೆಯನ್ನು ಸ್ವಚ್ಛವಾಗಿಡಲು ’ಡಿ’ ದರ್ಜೆ ನೌಕರರು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.   ಪಟ್ಟಣದ ತಾಲೂಕ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಎಲ್ಲಾ ವೈಧ್ಯರು ಹಾಗೂ  ಸಿಬ್ಬಂದಿಗಳೊಂದಿಗೆ ಚರ್ಚಿಸಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಅವಶ್ಯಕವಾದ ಸೇವೆಯನ್ನು ಕೊಡಬೇಕು.  

ಅಲ್ಲದೇ ಫಾರ್ಮಸಿಯವರು ರೋಗಿಗಳಿಗೆ ಅಗತ್ಯವಾದ ಆಸ್ಪತ್ರೆಯಲ್ಲಿರಬೇಕಾದ ಸಲಕರಣೆಗಳ ಹಾಗೂ ಓಷದಿಗಳ ಲಭ್ಯತೆಯ ಕುರಿತು ಆಗಾಗ ಪರೀಶೀಲಿಸಬೇಕು. ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತ ಸೌಲಭ್ಯ ಹಾಗೂ ಸೇವೆಯನ್ಮು ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒದಗಿಸಬೇಕು. ಆ ರೀತಿಯಲ್ಲಿ ಇಲ್ಲಿಯ ವೈದ್ಯಾಧಿಕಾರಿಗಳು ಹಾಗೂ ನರ್ಸಗಳು ಕೆಲಸ ಮಾಡಬೇಕು. ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿ ರೋಗಿಗಳಿಗೆ ಪೌಷ್ಟಿಕವಾದ ರುಚಿಕರವಾದ ಉಚಿತವಾಗಿ ಆಹಾರವನ್ನು ಕೊಡಬೇಕು. ಅಲ್ಲದೇ ನಾಳೆಯಿಂದ ಎಲ್ಲಾ ದಾಖಲಾದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಮೊಟ್ಟೆನ್ನು ಕೊಡಬೇಕು. ಸರ್ಕಾರ ನಿಮಗೆ ಕೊಡುವ ವೇತನಕ್ಕೆ ತಕ್ಕಂತೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಪ್ರಯತ್ನಿಸಬೇಕು. ನಿಗದಿತ ಅವಧಿಯಲ್ಲಿ ಸರಿಯಾಗಿ ಡ್ಯೂಟಿಯಲ್ಲಿರುವ ಎಲ್ಲ ವೈಧ್ಯಾಧಿಕಾರಿಗಳು ಹಾಗೂ ಉಳಿದೆಲ್ಲಾ ಸಿಬ್ಬಂದಿಗಳು ಆಸಕ್ತಿತೋರಿ ಕೆಲಸ ಮಾಡಬೇಕು. ಕೆಲಸ ಮಾಡಲು ನಿರಾಸಕ್ತಿ ತೋರುವವರನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಈ ವೇಳೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮಣ ಪೂಜಾರ, ವೈಧ್ಯರಾದ ಡಾ.ಕೀರ್ತಿಹಾಸ, ಹೇಮಗೀರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ್, ಕೊಟ್ರೇಶಪ್ಪ ಅಂಗಡಿ, ನಾಗರಾಜ ಮುರಡಿ, ಮಹೇಶ ನಾಗರಹಳ್ಳಿ ಹಾಗೂ ಇತರೆ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ