ನೂತನ ಕಟ್ಟಡಗಳಿಗೆ ಶಾಸಕ ಭೀಮಾನಾಯ್ಕ್ ಚಾಲನೆ
ಹಗರಿಬೊಮ್ಮನಹಳ್ಳಿ 27: ತಾಲೂಕಿನ ಶಿವಾನಂದನಗರ, ಮುಟುಗನಹಳ್ಳಿ, ಚಿಕ್ಕ ಸೊಬಟಿ, ಹಿರೇ ಸೊಬಟಿ, ಹಗರಿ ಕ್ಯಾದಿಗಿಹಳ್ಳಿ, ಕಡಲಬಾಳು ಹಾಗೂ ಬ್ಯಾಲಾಳು ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ, ಶಾಲಾ ಕೊಠಡಿ, ಸಿಸಿ ರಸ್ತೆ ಹಾಗೂ ಭವನ ಸೇರಿದಂತೆ 95ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಸ್.ಭಿಮಾನಾಯ್ಕ್ ಚಾಲನೆ ನೀಡಿದರು.
ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಚಿಕ್ಕ ಸೊಬಟಿ ಗ್ರಾಮದಲ್ಲಿನ ಶಾಲೆ ಕಳಪೆ ಕಾಮಗಾರಿಯಾಗಿದ್ದು ಅದನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವುದರ ಜೊತೆ ಜಿಲ್ಲಾಧಿಕಾರಿ ಹಾಗೂ ಸಿಎಸ್‌ಗೆ ಪತ್ರ ಬರೆಯುವುದಾಗಿ ತಿಳಿಸಿ, ಕಾಮಗಾರಿಯ ಬಿಲ್ ಪೆಂಡಿಂಗ್ ಇದ್ದರೆ ಕೂಡಲೇ ತಡೆಹಿಡಿಯುವಂತೆ ಇಒ ಅವರಿಗೆ ತಿಳಿಸಿದರು, ಬಿಲ್ ಸಂಪೂರ್ಣವಾಗಿ ಕ್ಲಿಯರ್ ಅಗಿದೆ ಎಂದು ಇಒ ಹಾಲಸಿದ್ದಪ್ಪ ಪೂಜೇರಿ ತಿಳಿಸಿದರು. ಶಾಲೆಯಲ್ಲಿನ ವಿದ್ಯುತ್ ಸರಬರಾಜು ಕೇಬಲ್‌ಗಳು ಮುಂಭಾದಲ್ಲಿ ತೇಲಾಡುತ್ತಿದ್ದನ್ನು ಗ್ರಾಮಸ್ಥರು ತೋರಿ್ಡಸಿದಾಗ ಅಲ್ಲೆ ಇದ್ದ ಕೆಇಬಿ ಅಧಿಕಾರಿಗಳಿಗೆ ಸರಿಪಡಿಸುವಂತೆ ತಿಳಿಸಿದರು.
ಮುಟುಗನ ಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಗ್ರಾಮಸ್ಥನ್ನು ಕುರಿತು ಕರೋನಾ ವೈರಸ್ ಜನರ ಜೀವನ ಪಾತಾಳಕ್ಕೆ ತಳ್ಳಿದೆ ಹಾಗಾಗಿ ವಯಸ್ಸಿಗನುಗುಣವಾಗಿ ಲಸಿಕೆಯನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ಬಿರುಕು ಬಿಟ್ಟ ನೂತನ ಕೊಠಡಿ,ಶಾಸಕರಿಂದ ತರಾಟೆ : ಚಿಕ್ಕ ಸೊಬಟಿಯ ನೂತನ ಶಾಲಾ ಕೊಠಡಿ ಬಿರುಕು ಬಿಟ್ಟಿದ್ದನ್ನು ಕಂಡು ಅಲ್ಲೆ ಇದ್ದ ಗುತ್ತಿಗೆದಾರನಿಗೆ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡು ಶೀಘ್ರವೇ ಸರಿಪಡಿಸುವಂತೆ ತಿಳಿಸಿದರು.
ಈ ಸಂಧರ್ಭಧಲ್ಲಿ ತಹಶಿಲ್ದಾರ್ ಶರಣಮ್ಮ, ಟಿಹೆಚ್‌ಒ ಶಿವರಜ್, ಲೋಕೋಪಯೋಗಿ ಇಲಾಖೆ ಎಇಇ ಪ್ರಭಾಕರ ಶೆಟ್ಟಿ, ಬಿಇಒ ಶೇಖರ್ಪ ಹೊರಪೇಟೆ, ಹೆಗ್ಡಾಳ್ ರಾಮಣ್ಣ, ಮುಟುಗನ ಹಳ್ಳಿ ಕೊಟ್ರೇಶ್,ನಾಗಮ್ಮ ಗೋಣಿ ಬಸಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಇದ್ದರು.