ಹಗರಿಬೊಮ್ಮನಹಳ್ಳಿ

ಕೃಷಿ ಇಲಾಖೆಯ ಯೋಜನೆಗಳಿಗೆ ಶಾಸಕ ಭೀಮಾನಾಯ್ಕ್‌ ಚಾಲನೆ

ಕೃಷಿ ಇಲಾಖೆಯ ಯೋಜನೆಗಳಿಗೆ ಶಾಸಕ ಭೀಮಾನಾಯ್ಕ್‌ ಚಾಲನೆ

ಹಗರಿಬೊಮ್ಮನಹಳ್ಳಿ 25: ಪಟ್ಟಣದ ಕೃಷಿ ಇಲಾಖೆಯ ಅವರಣದಲ್ಲಿ ಶನಿವಾರ ಕೃಷಿ ಇಲಾಖೆ ವಿವಿಧ ಯೋಜನೆಗಳಿಗೆ ಶಾಸಕ ಎಸ್‌. ಭಿಮಾನಾಯ್ಕ್‌  ಚಾಲನೆ ನೀಡಿದರು. 

ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ ಕೃಷಿ ಇಲಾಖೆಯಿಂದ 2020/21ನೇ ಸಾಲಿನ ಇಲಾಖೆಗಳ ನಡಿಗೆ ರೈತರ ಮನೆಯ ಬಾಗಿಲಿಗೆ ಎಂಬ ಶಿರ್ಷಿಕೆಯಡಿ ರೈತರಿಗೆ ಸಹಾಯವಾಗುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ. ಮಾಲವಿಯ ಲಕ್ಷೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಯೋಜನೆಯಡಿ ಇಲಾಖೆಯಿಂದ ಸಹಾಯ ಧನದಲ್ಲಿ ರೈತರಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಟ್ರ್ಯಾಕ್ಟರ್, ಬಿತ್ತನೆ ಕೂರಿಗೆ, ಕಲ್ಟಿವೇಟರ್, ಬ್ಲೇಡ್ ಹ್ಯಾರೋ, ಎಂ.ಬಿ.ನೇಗಿಲು, ರೋಟೋವೇಟರ್‌ಗಳನ್ನು ವಿತರಣೆ ಮಾಡಲಾಗಿದೆ ಇದರ ಸೂಕ್ತ ಉಪಯೋಗ ಪಡೆಯುವುದರ ಜೊತೆ ಹೈನುಗಾರಿಕೆ ಸೇರಿದಂತೆ  ಸಣ್ಣ ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿ ಆರ್ಥಿಕವಾಗಿ ಸದೃಢರಾಗುವಂತೆ ಕರೆ ನೀಡಿದರು. 

ಸಹಾಯಕ ಕೃಷಿ ನಿರ್ದೇಶಕ ಜೀವನ್ ಸಾಬ್ ಮಾತನಾಡಿ ರೈತರು ಕೃಷಿ ಪರಿಕರಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಸೂಕ್ತ ಸಮಯಕ್ಕೆ ಕೃಷಿ ಚಟುವಟಿಕೆಗಳನ್ನು ಮಾಡಬಹುದಾಗಿದೆ, ಇದರ ಜೊತೆ ತಾಲೂಕಿನಲ್ಲಿ ಕೃಷಿ ಜಾಗೃತಿ ಜಾಥ ಸಂಚರಿಸಲಿದೆ,ಸೂಕ್ತ ಸಮಯಕ್ಕೆ ಯಾವ ಬೆಳೆ ಬೆಳೆಯಬೇಕೆಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು, ಕೃಷಿಕ ಸಮಸ್ಯೆಗಳ ಬಗ್ಗೆ ಪರಿಹಾರವನ್ನು ನೀಡಲು ಸದಾ ಸಿದ್ದರಿದ್ದು ರೈತರು ಉಪಯುಕ್ತ ಮಾಹಿತಿಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು. 

ಈ ಸಂಧರ್ಭಧಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ಪರಮೇಶ್ವರ​‍್ಪ, ಅಧಿಕಾರಿಗಳಾದ ನಾಗರಾಜ್, ಭೋಜನಾಯ್ಕ್‌,ಕೃಷಿಕ ಸಮಾಜದ ಅಧ್ಯಕ್ಷ ಹನ್ಸಿ ದೇವರಜ್, ಮುಖಂಡ ಅಕ್ಕಿ ತೋಟೇಶ್,ಚಿಂತ್ರಪಳಿ ದೇವರಜ್,ಪುರಸಭೆ ಸದಸ್ಯ ಹಂಚಿನ ಮನಿ ಹನುಮಂತಪ್ಪ,ಬಾಲಕೃಷ್ಣ ಬಾಬು ಸೇರಿದಂತೆ ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ