ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿದ ಶಾಸಕ ಬಿ.ನಾಗೇಂದ್ರ
ಬಳ್ಳಾರಿ ಡಿ 31: ಕೇರಳದ ಪಂಪಾಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಕೊಚ್ಚಿಯ ಸಮೀಪದ ಅಲವಾ ಗ್ರಾಮದ ಶಿವನ ದೇವಾಲಯದಲ್ಲಿ ದಿ. 31ರಂದು ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿದರು.
ಪೂಜೆಯಲ್ಲಿ ಇಲ್ಲಿನ ಬಳ್ಳಾರಿ ಜಿಲ್ಲೆ ಮತ್ತು ಗ್ರಾಮಾಂತರ ಕ್ಷೇತ್ರದ ಜನರ ಒಳಿತಿಗಾಗಿ ಮತ್ತು ಜನರ ಸಂಕಷ್ಟಗಳೆಲ್ಲ ದೂರಾಗಲಿ ಜನರು ಬೆಳೆದ ಬೆಳೆಗಳು ಸಮೃದ್ಧಿಯಿಂದ ಬೆಳೆಯಲಿ ಹಾಗೂ ಆ ಬೆಳೆಗಳಿಗೆ ನಿಗದಿತವಾದ ಬೆಲೆಯ ಸಿಗಲಿ ಎಂದು ಜನರ ಸಂಕಷ್ಟವನ್ನು ಪರಿಹಾರವಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿ, ಶಬರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದರು. ಹಾಗೂ ಈ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರೊಂದಿಗೆ ಅವರ ಸಹೋದರರು ಆಂಧ್ರ್ರದೇಶದ ಕಾರ್ಮಿಕ ಸಚಿವ ಗುಮ್ಮನೂರು ಜಯರಾಮ್ ಅವರು, ಗುಮ್ಮನೂರು ನಾರಾಯಣ ಸ್ವಾಮಿ, ಗುಮ್ಮನೂರು ಶ್ರೀನಿವಾಸ್, ಗುಮ್ಮನೂರು ಈಶ್ವರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬೆಣಕಲ್ ಬಸವರಾಜ್ ಗೌಡ, ಗುಮ್ಮನೂರು ಜಗನ್ನಾಥ್, ಚಿನ್ನ, ಕೆ.ನಾಗರಾಜ್ ಅವರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿದರು. ಗುರು ಸ್ವಾಮಿಗಳಾದ ಷಣ್ಮುಖ, ಶಂಭು ಸೇರಿದಂತೆ ಇನ್ನೂ ಅನೇಕರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಉಪಸ್ಥಿತರಿದ್ದರು.