ಬಳ್ಳಾರಿ

ಪೈಪ್‌ಲೈನ್ ಕಾಮಗಾರಿಗೆ ಶಾಸಕ ಬಿ.ನಾಗೇಂದ್ರ ಭೂಮಿ ಪೂಜೆ

ಪೈಪ್‌ಲೈನ್ ಕಾಮಗಾರಿಗೆ ಶಾಸಕ  ಬಿ.ನಾಗೇಂದ್ರ ಭೂಮಿ ಪೂಜೆ

ಬಳ್ಳಾರಿ:  ನಗರದ ಹೋಸಪೇಟೆ ರಸ್ತೆಯ ಕಂಟೋನ್ ಮೇಂಟ್ ಸಂತೋಷಿ ಮಾತಾ ದೇವಸ್ಥಾನದ ಹತ್ತಿರ ರಾಜೀವ್ ಗಾಂಧಿ ನಗರದಲ್ಲಿ 32, 33, 34 ಮತ್ತು 35 ನೇ ವಾರ್ಡಿನಲ್ಲಿ ಕೈಗೊಂಡಿರುವ ಬಳ್ಳಾರಿ ಮಹಾನಗರ ಪಾಲಿಕೆಯ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನದ ಅಡಿಯಲ್ಲಿ 33 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೆಚ್‌.ಡಿ.ಪಿ.ಇ ಪೈಪ್ ಲೈನ್ ಅಳವಡಿಸುವ ಕಾಮಗಾರಿಯ ಭೂಮಿ ಪೂಜೆಯನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕ  ಬಿ.ನಾಗೇಂದ್ರ ಅವರು ನೆರವೇರಿಸಿದರು. 

ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ನಾಗೇಂದ್ರ ಅವರು ಚುನಾವಣೆ ಸಂದರ್ಭದಲ್ಲಿ ಆಮಿಷ ಒಡ್ಡುವವರು ಬರುತ್ತಾರೆ. ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುತ್ತಾರೆ ಯಾರೂ ಕೂಡ ವಿಚಲಿತರಾಗಬಾರದು. ಗೊಂದಲಕ್ಕೇ ಈಡಾಗಬಾರದು ಎಂದರು.ಕೋಮುವಾದಿ ಪಕ್ಷಗಳು, ಕೋಮುವಾದಿ ರಾಜಕಾರಣಿಗಳು ಸಮುದಾಯದ ಜನರಿಗೆ ಆಮಿಷಗಳನ್ನು ಒಡ್ಡುತ್ತಾರೆ, ಕೇಸ್ ಹಾಕುವುದಾಗಿ ಬೆದರಿಸುತ್ತಾರೆ ಯಾರೂ ಕೂಡ ಆಮಿಷಕ್ಕೆ ಈಡಾಗಬಾರದು, ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು. 

ನನ್ನ ಮೇಲೆ ಸುಳ್ಳು ಕೇಸು ಹಾಕಿ ಬೆದರಿಸುವ ಯತ್ನ ನಡೆಯಿತು, ತೊಂದರೆ ಕೊಟ್ಟರು. ಹೀಗಿದ್ದರೂ ನಾನು ಇಂದು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಕೌಲ್ ಬಜಾರ್ ಪ್ರದೇಶವನ್ನು, ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರ ರಾಜೇಶ್ವರಿ ಸುಬ್ಬರಾಯ್ಡು, ಉಪ ಮಹಾಪೌರರು   ಮಾಲಾನ್ ಬೀ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಮಾಂಜನೇಯಲು, ಪಾಲಿಕೆ ಸದಸ್ಯರಾದ ಬಿ.ಜಾನಕಮ್ಮ, ಕಾಂಗ್ರೆಸ್ ಮುಖಂಡರಾದ ಸುಬ್ಬಾರಾಯುಡು, ಬೋಯಪಾಟಿ ವಿಷ್ಣುವರ್ಧನ, ನಾನಿ, ನಾಗಲಕೆರೆ ಗೋವಿಂದ, ಕೆ.ಹೊನ್ನಪ್ಪ, ಕಟ್ಟೆಸ್ವಾಮಿ, ಷಣ್ಮುಖ, ಬಿ.ಆರ್‌.ಎಲ್ ಸೀನಾ, ಅಣ್ಣಾ ನಾಗರಾಜ್, ಗೋವರ್ಧನ್ ರೆಡ್ಡಿ, ಶ್ರೀನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ