ಜೆಇಇ ಮೇನ್ಸ್- ಈ ವರ್ಷ ನಾಲ್ಕು ಬಾರಿ ಪರೀಕ್ಷೆ ...!
ನವದೆಹಲಿ. ಡಿ 11: ದೇಶಾದ್ಯಂತ ಈ ವರ್ಷ ನಾಲ್ಕು ಬಾರಿ ಜೆಇಇ ಮುಖ್ಯ ಪರೀಕ್ಷೆ -2021 ನಡೆಸಲು
ಕೇಂದ್ರ ಶಿಕ್ಷಣ ಸಚಿವಾಲಯ ಗಂಭೀರ ಚಂತನೆ ನಡೆಸಿದೆ. ಕೊರೊನಾ
ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ತರಗತಿಯಿಂದ
ದೂರವಿರುವುದರಿಂದ ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಪ್ರಶ್ನೆಗಳಲ್ಲೂ ಆಯ್ಕೆಯನ್ನು ನೀಡಲಾಗುವುದು ಎಂದು ಹೇಳಿದೆ. ರಾಷ್ಟ್ರಮಟ್ಟದ ಪ್ರವೇಶ, ಮಂಡಳಿ ಪರೀಕ್ಷೆಗಳು, ಪಠ್ಯಕ್ರಮ ಮತ್ತಿತರ
ಅಂಶಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಗುರುವಾರ ವಿದ್ಯಾರ್ಥಿಗಳು,
ಪೋಷಕರು ಮತ್ತು ಶಿಕ್ಷಕರೊಂದಿಗೆ ಆನ್‌ಲೈನ್‌ನಲ್ಲಿ ಸಂವಾದ
ನಡೆಸಿದರು. ಈ ಸಂದರ್ಭದಲ್ಲಿ ಅವರು ಜೆಇಇ
ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು
ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅದರಂತೆ, ಫೆಬ್ರವರಿ ಕೊನೆಯಲ್ಲಿ ಒಮ್ಮೆ , ಮಾರ್ಚ್,
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಂದು ಬಾರಿಯಂತೆ ನಾಲ್ಕು ಬಾರಿ
ಪರೀಕ್ಷೆಯನ್ನು ನಡೆಸಲು ನಾವು ಸಕಾರಾತ್ಮಕವಾಗಿದ್ದೇವೆ ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿಗೂ ನಾಲ್ಕು ಬಾರಿಯೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಸಕಾರಾತ್ಮಕ ದೃಷ್ಟಿಯಿಂದ ಪರಿಶೀಲಿಸಲಿದ್ದೇವೆ ಎಂದು ಸಚಿವರು ಹೇಳಿದರು. ಈ ಬಾರಿ ಜೆಇಇ ಮೇನ್‌ಗೆ ಹಳೆಯ ಪಠ್ಯಕ್ರಮ (ಪಠ್ಯಕ್ರಮ) ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು, ಇಲ್ಲವಾದರೆ ಕೊರೊನಾ ಪರಿಸ್ಥಿತಿಗಳಿಗೆ ಅನುಗುಣವಾಗಿ ಐಚ್ಚಿಕ ನೀಡುವ ಯೋಚನೆ ಇದೆ. 'ಈ ಹಿಂದೆ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಒಟ್ಟು 75 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಬಾರಿ, ಪ್ರತಿ ವಿಷಯಕ್ಕೆ 30ರಂತೆ ಒಟ್ಟು 90 ಪ್ರಶ್ನೆಗಳನ್ನು ನೀಡಲಾಗುವುದು ಹಾಗೂ ಪ್ರತಿ ವಿಷಯದ 25 ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿದರೆ ಅಂಕಗಳನ್ನು ನೀಡುವ ಪ್ರಸ್ತಾಪವನ್ನು ಪರಿಗಣಿಸಲಾಗುತ್ತಿದೆ. ನೀಟ್ ಗೂ ಕಳೆದ ವರ್ಷದ ಪಠ್ಯಕ್ರಮ ಹಾಗೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನೀಟ್ ಪರೀಕ್ಷಾ ನಡೆಸುವ ದಿನವನ್ನು ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಯೊಂದಿಗೆ ಸಮಾಲೋಚಿಸಿ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಸದ್ಯದಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು . ಪರೀಕ್ಷೆ ಆನ್‌ಲೈನಾ? ಆಫ್‌ಲೈನಾ? ಎಂಬ ಪ್ರಶ್ನೆಗೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 10 ಹಾಗೂ 12 ನೇ ತರಗತಿ ವಾರ್ಷಿಕ ಪರೀಕ್ಷೆಗಳ ದಿನಾಂಕಗಳನ್ನು ಅಂತಿಮಗೊಳಿಸುವ ಸಲುವಾಗಿ ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು. ಸಿಬಿಎಸ್‌ಇ ಪ್ರಾಯೋಗಿಕ ಪರೀಕ್ಷೆಗಳ ರದ್ದತಿ ಕುರಿತು ಮಾತನಾಡಿದ ಸಚಿವರು, ಪ್ರಾಯೋಗಿಕ ಹಾಗೂ ಬೋರ್ಡ್ ಪರೀಕ್ಷೆ ದಿನಾಂಕಗಳನ್ನು ನಿರ್ಧರಿಸುವ ಹೊಣೆ ಸಿಬಿಎಸ್‌ಇ ಮೇಲಿದೆ ಎಂದರು.