ಬಳ್ಳಾರಿ

ಕುರುಬರ ಸಂಘಕ್ಕೆ ಎಂ.ಜಿ ಕನಕ ನೇಮಕ

ಕುರುಬರ ಸಂಘಕ್ಕೆ ಎಂ.ಜಿ ಕನಕ ನೇಮಕ

ಲೋಕದರ್ಶನ ವರದಿ 

ಬಳ್ಳಾರಿ  26: ಕರ್ನಾಟಕ ಪ್ರದೇಶ ಕುರುಬರ ಸಂಘದ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಎಂ.ಜಿ ಕನಕ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. 


     ನಗರದ ಅಥಿತಿ ಗೃಹದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಶಿವಕುಮಾರ್  ಎಂ.ಜಿ ಕನಕ ಅವರಿಗೆ ಆದೇಶ ಪತ್ರ ನೀಡಿ ಶುಭ ಹಾರೈಸಿದರು. ಕುರುಬರ ಸಮುದಾಯವನ್ನು ಉದ್ದೇಶಿ ಮಾತನಾಡಿದ ಎಂ.ಜಿ ಕನಕ  ಸಂಘದ ಹಿರಿಯ ಮುಖಂಡರು ತನ್ನ ಮೇಲೆ ನಂಬಿಕೆ ಇಟ್ಟು ಸಂಘಟನಾ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕುರುಬ ಸಮುದಾಯವನ್ನು ಸಮಾಜದಲ್ಲಿ ಮೇಲೆತ್ತಲು ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು ಸಹಕರಿಸಬೇಕೆಂದರು. 

  

      ನನ್ನ ಸ್ಥಾನಕ್ಕೆ ಯಾವುದೇ ರೀತಿಯ ಚ್ಯುತಿ ಬರದ ಹಾಗೆ ನನ್ನ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡುತ್ತೆನೆ ಎಂದು ಭರವಸೆ ಮೂಡಿಸಿದರು. ಕಾರ್ಯಧ್ಯಕ್ಷ ಭಟ್ಟಿ ಎರ್ರಿಸ್ವಾಮಿ.ಕೆ, ಪ್ರಧಾನ ಕಾರ್ಯದರ್ಶಿ ಗೋನಾಳು ಎಂ.ತಿಮ್ಮಪ್ಪ ಮತ್ತು ಹಿರಿಯ ಉಪಾಧ್ಯಕ್ಷ ಎನ್‌.ಕೆ.ಹೆಚ್ ಬಸವರಾಜ್, ಖಜಾಂಚಿ ಕೆ.ಶಿವಕುಮಾರ್, ತಾಲೂಕು ಗೌರವ ಅಧ್ಯಕ್ಷ ಜಾನಕುಂಟೆ ದೊಡ್ಡ ಬಸವ, ತಾಲೂಕ ಅಧ್ಯಕ್ಷ ಸಿರಿವಾರ ಪಿ.ಶೇಕಲಿಂಗ, ಕಾರ್ಯಾಧ್ಯಕ್ಷ ಬೊಬ್ಬುಕುಂಟೆ ಶಿವರಾಂ, ಪ್ರಧಾನ ಕಾರ್ಯದರ್ಶಿ ಅಸುಂಡಿ ಪರಮೇಶ್, ಖಜಾಂಚಿ ಹನುಮಂತ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. 


ಸುದ್ದಿ ಓದಿ