ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ

ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ

ಬೆಳಗಾವಿ : ಗಡಿ ಭಾಗದಲ್ಲಿ ಅಂಗಡಿ ಹಾಗೂ ಕಚೇರಿಗಳ ಮೇಲೆ ಹಾಕುವ ನಾಮಪದಗಳಲ್ಲಿ ಶೇ. 60ರಷ್ಟು ಕನ್ನಡ ಬಳಸುವಂತೆ ರಾಜ್ಯ ಸರಕಾರ ಮಾಡಿರುವ ಆದೇಶದಿಂದ ಕೆಗೆಂಟಿರುವ ನಾಡದ್ರೋಹಿ ಎಮ್ ಇ ಎಸ್ ಕನ್ನಡದ ಜೊತೆಗೆ ಶೇ. 40 ಮರಾಠಿ ಬಳಸಲು ಅವಕಾಶ ನೀಡುವಂತೆ ಮತ್ತೆ ಬೆಳಗಾವಿಯಲ್ಲಿ ಹೊಸ ಭಾಷಾ ಕ್ಯಾತೆ ಪ್ರಾರಂಭಿಸಿದ್ದು, ಈ ಕುರಿತು ಶನಿವಾರ ಸಭೆ ನಡೆಸಿದೆ. 

    ಶನಿವಾರ ದಿ. 30ರಂದು ಸಂಜೆ ಮರಾಠಾ ಮಂದಿರದಲ್ಲಿ ಸಭೆ ಸೇರಿದ್ದ ಎಮ್ ಇಎಸ್ ಮುಖಂಡರು ಜೂನ್. 3ರಂದು ಎಮ್ ಇಎಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ, ಶೇ. 60ರ ಕನ್ನಡ ನಾಮಫಲಕಗಳಲ್ಲಿ ಶೇ. 40ರಷ್ಟು ಮರಾಠಿ ಬರೆಸಲು ಅವಕಾಶ ನೀಡುವಂತೆ ಒತ್ತಾಯ ಮಾಡಲಿದ್ದಾರೆ

    ಒಂದು ವೇಳೆ ಬರುವ ಜೂನ್ 21ರ ವರಗೆ ತಮ್ಮ ಮನವಿ ಪರಿಗಣಿಸದೆ ಇದಲ್ಲಿ‌ ನಾಮಫಲಕಗಳಲ್ಲಿ ಮರಾಠಿಗೆ ಅವಕಾಶ ನೀಡದಿದ್ದಲ್ಲಿ ಜೂನ್ 22ರಂದು ಜಿಲ್ಲಾಡಳಿತದ ವಿರುದ್ದ ಬೆಳಗಾವಿಯ ಅಂಗಡಿಗಳ ಮೇಲಿನ ನಾಮಫಲಕಗಳಿಗೆ ಡಾಂಬರ ಬಳಿಯುವ ಮೂಲಕ ಡಾಂಬರ ಮೋರ್ಚಾ ಮಾಡಲಿದ್ದಾರಂತೆ.

     ಬಳಿಕ ಜೂನ್ 29ರಂದು‌ ಬೆಳಗಾವಿ ಎಮ್ ಇಎಸ್ ಮುಖಂಡರು ಮಹಾರಾಷ್ಟ್ರದ ಮುಂಬಯಿಗೆ ತೆರಳಿ ಮಹಾರಾಷ್ಟ್ರ ಸಿಎಂ ಮನೆ ಎದರು ಧರಣಿ ಮಾಡಲಿದ್ದಾರಂತೆ ಈ ಕುರಿತು ಶನಿವಾರ ಬೆಳಗಾವಿಯಲ್ಲಿ ನಡೆದು ಎಮ್ ಇಎಸ್ ಮುಖಂಡರ ಸಭೆಯಲ್ಲಿ ನಿರ್ಣಯ ಮಾಡಿದ್ದಾರಂತೆ. 

ಸುದ್ದಿ ಓದಿ