ರಾಷ್ಟ್ರೀಯ

ಸೆನ್ಸೆಕ್ಸ್: ೧೪೩.೬೨ ಅಂಕ ಕುಸಿತ

ಸೆನ್ಸೆಕ್ಸ್: ೧೪೩.೬೨ ಅಂಕ ಕುಸಿತ

ಮುಂಬೈ, ಡಿ ೧೦ :ವಿದ್ಯುತ್, ಆಟೋ, ಇಂಧನ ಸೇರಿದಂತೆ ವಿವಿಧ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಗುರುವಾರ ದಿನದ ವಹಿವಾಟಿನ ಅಂತ್ಯಕ್ಕೆ ೧೪೩.೬೨ ಅಂಕ ಕುಸಿತ ಕಂಡು ೪೫,೯೫೯.೮೮ ಕ್ಕೆ ಇಳಿದಿದೆ.  ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ ೫೦.೮೦ ಅಂಕ ಕುಸಿದು ೧೩,೪೭೮ಕ್ಕೆ ಇಳಿದಿದೆ.  ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ ೪೬,೦೪೩.೯೭ ಮತ್ತು  ೪೫,೬೮೫.೮೭ ರಲ್ಲಿತ್ತು. ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ ೧೩,೫೦೩.೫೫  ಮತ್ತು  ೧೩,೩೯೯.೩೦ ರಲ್ಲಿತ್ತು.   ಹೆಚ್ಚು ನಷ್ಟ ಕಂಡ ಬಿಎಸ್ ಇನ ಪ್ರಮುಖ ಷೇರುಗಳ ಪೈಕಿ ಅಲ್ಟ್ರಾಸೆಮ್ಕೊ ಶೇ ೩.೨೭, ಎಂ ಅಂಡ್ ಎಂ ಶೇ ೨.೫೦, ಎಚ್ ಎಡಿಎಫ್ ಸಿ ಶೇ ೧.೩೪, ಇಂಡಸ್ ಇಂಡ್ ಬ್ಯಾಂಕ್ ಶೇ ೧.೩೦, ಆಕ್ಸಿಸ್ ಬ್ಯಾಂಕ್ ಶೇ ೧.೧೦ ರಷ್ಟು ಇಳಿಕೆ ಕಂಡಿವೆ.  ಉಳಿದಂತೆ, ನೆಸ್ಲೆ ಇಂಡಿಯಾ ಶೇ ೪.೧೭, ಐಟಿಸಿ ಶೇ ೩.೫೮, ಹಿಂದ್ ಯೂನಿಲಿವರ್ ಶೇ ೨.೪೯, ಕೊಟಕ್ ಬ್ಯಾಂಕ್ ಶೇ ೧.೧೩, ಎಲ್ ಅಂಡ್ ಟಿ ಶೇ ೦.೭೮ರಷ್ಟು ಏರಿಕೆ ಕಂಡಿವೆ.  

ಸುದ್ದಿ ಓದಿ