ಮನರಂಜನೆ

ಐವತ್ತು ದಿನ ಪೂರೈಸಿದ ‘ಕಿಲಾಡಿಗಳು’

ಐವತ್ತು ದಿನ ಪೂರೈಸಿದ ‘ಕಿಲಾಡಿಗಳು’

ಬೆಂಗಳೂರು, ಫೆ 06: 'ಆನಂದ ಸಿನಿಮಾಸ್' ಬ್ಯಾನರ್ ಅಡಿ ತಯಾರಾಗಿರುವ 'ಪೂರ್ವಿಕಾಮೃತ ಕ್ರಿಯಾಷನ್ಸ್' ರವರ ಮಹೇಂದ್ರ ಮುನೋತ್ ನಿರ್ಮಾಣದ, ‘ಕಿಲಾಡಿಗಳು’ ಚಿತ್ರ 7 ಕೇಂದ್ರಗಳಲ್ಲಿ 50 ದಿನ ಪೂರೈಸಿದೆ.  'ಕಿಲಾಡಿಗಳು' ಚಿತ್ರ 17 ಡಿಸೆಂಬರ್ 2020ರಂದು ರಾಜ್ಯದಾದ್ಯಂತ 50 ಸೆಂಟರ್ ಗಳಲ್ಲಿ ಬಿಡುಗಡೆಯಾಗಿ  50 ದಿನಗಳನ್ನು ಪೂರೈಸಿ ಕನ್ನಡ ಚಿತ್ರ ರಸಿಕರ ಆಶೀರ್ವಾದದಿಂದ ಮುನ್ನುಗ್ಗುತ್ತಿದೆ. ಇಂತಹ ಕರೋನ ಕಠಿಣ ಪರಿಸ್ಥಿತಿಯಲ್ಲಿಯೂ ರಾಜ್ಯದ ಜನರು, ಅದರಲ್ಲೂ ಉತ್ತರ ಕರ್ನಾಟಕದ ಮಂದಿ ಚಿತ್ರವನ್ನು ನೋಡಿ ಆಶೀರ್ವದಿಸಿರುವುದಾಗಿ ನಿರ್ಮಾಪಕ ಮಹೇಂದ್ರ ಮುನೋತ್ ತಿಳಿಸಿದ್ದಾರೆ. 

ಚಿತ್ರದಲ್ಲಿ  ಮಹೇಂದ್ರ ಮುನೋತ್, ಖ್ಯಾತ ಗಾಯಕ, ನಟ ಗುರುರಾಜ್ ಹೊಸಕೋಟೆ ಅವರು, ನಿರ್ದೇಶಕರಾದ ಬಿ ಪಿ ಹರಿಹರನ್ ರವರ ಜೊತೆಗೆ ಅನೇಕ ಮಕ್ಕಳು ಮತ್ತು ನೂರಾರು ಮಂದಿ ಕಲಾವಿದರು ನಟಿಸಿದ್ದಾರೆ.“ಇದೊಂದು ಕುಟುಂಬ ಸಮೇತರಾಗಿ ನೋಡಲೇ ಬೇಕಾಗಿರುವ ಸಮಾಜಕ್ಕೆ ಒಂದು ಸಂದೇಶ ಕೊಡುವ ಚಿತ್ರ. ಎ. ಟಿ ರವೀಶ್ ಅವರ ಸಂಗೀತ ನಿರ್ದೇಶನದ ಚಿತ್ರದಲ್ಲಿ ಗುರುರಾಜ್ ಹೊಸಕೋಟೆ,ಸಚ್ಚಿನ್ ಎಸ್ ನಗರ್ತ ಇನ್ನೂ ಹಲವರ ಗಾಯನದ ಹಾಡುಗಳು ಯಶಸ್ವಿಯಾಗಿ ಗೀತಪ್ರಿಯರ ಮನಸ್ಸು ಗೆದ್ದಿದೆ.  ಚಿತ್ರವು ಗೆಲ್ಲುವುದಕ್ಕೆ ಕಾರಣರಾದ ಕನ್ನಡ ಹೃದಯಗಳು,  ತಾಂತ್ರಿಕ ವರ್ಗ ಮತ್ತು ಎಲ್ಲ ಸಹೃದಯರಿಗೆ ಧನ್ಯವಾದಗಳು” ಎಂದು ಮಹೇಂದ್ರ ಮುನೋತ್ ಹೇಳಿದ್ದಾರೆ.


ಸುದ್ದಿ ಓದಿ