ಡಾ. ಮುರಳೀ ಮನೋಹರ ಜೋಷಿಗೆ ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ, ಜ 5: ಬಿಜೆಪಿ ಹಿರಿಯ ನಾಯಕ ಡಾ. ಮುರಳೀ ಮನೋಹರ್ ಜೋಷಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಶುಭಾಶಯ ಕೋರಿದ್ದಾರೆ. ಜೋಷಿ ಅವರಿಗೆ ಸುದೀರ್ಘ, ಆರೋಗ್ಯಕರ ಜೀವನ ಲಭಿಸಲಿ ಎಂದು ಹಾರೈಸಿದರು. 'ದೇಶದ ಹಿರಿಯ ನಾಯಕರಲ್ಲಿ ಒಬ್ಬರಾದ ಡಾ. ಮುರಳೀ ಮನೋಹರ್ ಜೋಷಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಾರತದ ಅಭಿವೃದ್ಧಿಗೆ ಡಾ. ಜೋಷಿ ದಣಿವರಿಯಿಲ್ಲದೆ ಶ್ರಮಿಸಿದ್ದಾರೆ, ಸಚಿವರಾಗಿ, ಸಂಸದೀಯ ಪಟುವಾಗಿ ಸರಿಸಾಟಿಯಿಲ್ಲದ ಕೊಡುಗೆ ನೀಡಿದ್ದಾರೆ. ಅವರು ದೀರ್ಘಕಾಲ ಆರೋಗ್ಯವಾಗಿರಬೇಕು ಎಂದು ನಾನು ಬಯಸುತ್ತೇನೆ ”ಎಂದು ಪ್ರಧಾನಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಡಾ. ಮುರಳೀ ಮನೋಹರ್ ಜೋಷಿ 1934 ರಲ್ಲಿ ನೈನಿತಾಲ್ ನಲ್ಲಿ ಜನಿಸಿದ್ದರು. 1991 ರಿಂದ 1993 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾನ್ಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಜೋಷಿ, 2014 ರಿಂದ 2019 ರವರೆಗೆ ಸಂಸದರಾಗಿದ್ದರು. ಆರಂಭಿಕ ದಿನಗಳಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2017 ರಲ್ಲಿ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.