ಬಳ್ಳಾರಿ

ಅವಕಾಶವಾದಿತನ ಸಲ್ಲದು: ಎಂ.ಪಿ. ಸುಮಾ

ಅವಕಾಶವಾದಿತನ ಸಲ್ಲದು: ಎಂ.ಪಿ. ಸುಮಾ

ಹೂವಿನಹಡಗಲಿ 03: ಯಾವುದೇ ರಂಗದಲ್ಲಿಯೂ ಕೂಡಾ ಮಾತುಕೊಟ್ಟಂತೆ ನಡೆದುಕೊಳ್ಳಬೇಕು, ಅವಕಾಶವಾದಿತನ ಸಲ್ಲದು ಎಂದು ಆರ್.ಎಸ್.ಎಸ್.ಎನ್. (ಪಿಎಸಿಎಸ್)ಯ ನಿರ್ದೇಶಕ ಎಂ.ಪಿ. ಸುಮಾ ವಿಜಯರವರು ಹೇಳಿದರು. 

ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್.ಎಸ್.ಎಸ್.ಎನ್. ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದು ಗುಂಪಿನವರು ಮಾತಿಗೆ ತಪ್ಪಿ ನಮ್ಮ ಗುಂಪಿನ ನಿರ್ದೇಶಕರಿಗೆ ಆಮಿಷಗಳನ್ನು ಒಡ್ಡುವುದರ ಮೂಲಕ ಮೋಸಮಾಡಿದ್ದಾರೆ ಎಂದು ಹೇಳಿದರು 

ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ನಮ್ಮ ಬಣದಲ್ಲಿದ್ದ ಹೆಚ್.ರಫಿ ಇವರನ್ನು ಆಮಿಷವೊಡ್ಡಿ ತಮ್ಮ ಬಣಕ್ಕೆ ಸೆಳೆದುಕೊಂಡ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಐಗೋಳ್ ಚಿದಾನಂದರವರು ಮೋಸದ ರಾಜಕಾರಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಎಲ್ಲದರಲ್ಲೂ ಜಾತಿ ರಾಜಕಾರಣ ತಾಂಡವವಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ರಫಿಯವರು ನಮ್ಮ ಗುಂಪಿನಿಂದ ಇನ್ನೊಂದು ಗುಂಪು ಸೇರ್ಪಡೆಗೊಳ್ಳುವುದಕ್ಕೆ ತಮ್ಮ ಸಮಾಜದ ಒಂದು ನಿರ್ಧಾರವೇ ಕಾರಣ ಎಂದು ಹೇಳಿಕೊಂಡಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. 

ನೀನು ನಮ್ಮ ಗುಂಪಿಗೆ ಬರದಿದ್ದರೆ ನಿನ್ನನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎನ್ನುವ ಬೆದರಿಕೆಯೊಡ್ಡಿದ್ದರಿಂದ ನಾನು ಆ ಗುಂಪಿಗೆ ಸೇರ್ಪಡೆಗೊಂಡೆ ಎಂದು ಹೇಳಿಕೊಂಡಿದ್ದಾರೆ ಎಂದರು. ಒಟ್ಟಾರೆ ಸಂಘದಲ್ಲಿ ಶಾಸಕರು ಮತ್ತು ಐಗೋಳ್ ಚಿದಾನಂದರ ಹಣತೆಯಂತೆ ಎಲ್ಲವೂ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ಬದ್ಧ ಹೋರಾಟವನ್ನು ಕೈಗೊಳ್ಳುವುದಾಗಿ ತಿಳಿಸಿದರು. 

ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಮುದುಕಪ್ಪ ಮಾತನಾಡಿ ಈ ಹಿಂದೆ ಮಾತುಕೊಟ್ಟಂತೆ ಚಿದಾನಂದ ವಕೀಲರು ನಡೆದುಕೊಳ್ಳಬೇಕಾಗಿತ್ತು, ಅವರು ಮಾತಿಗೆ ತಪ್ಪಿದ್ದಾರೆ, ಮುಂದಿನ ದಿನಮಾನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸಂದರ್ಭದಲ್ಲಿ ನಿರ್ದೇಶಕರಾದ ಕನ್ನಿಹಳ್ಳಿ ಮುದುಕಪ್ಪ, ತಿಮ್ಮಾನಾಯ್ಕ, ಓಲಿ ನಿರ್ಮಲಮ್ಮ, ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ