ಮುಂದಗೋಡ

ಸ್ವಧರ್ಮನಿಷ್ಠೆ, ಪರಧರ್ಮ ಸಹಿಷ್ಣುತೆ ಬೇಕು:ಶ್ರೀರುದ್ರಮುನಿ ಸ್ವಾಮಿಗಳು

ಸ್ವಧರ್ಮನಿಷ್ಠೆ, ಪರಧರ್ಮ ಸಹಿಷ್ಣುತೆ ಬೇಕು:ಶ್ರೀರುದ್ರಮುನಿ ಸ್ವಾಮಿಗಳು

ಮುಂಡಗೋಡ:ಬಿದ್ದವರನ್ನು ಎತ್ತಿ ಹಿಡಿಯುವುದೇ ಧರ್ಮ ಇನ್ನೊಬ್ಬರನ್ನು ದೂಷಿಸದೆ ಸ್ವಧರ್ಮನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಇರಬೇಕು ಎಂದು ಹಿರೇಮಠದ ಪರಮಪೂಜ್ಯ ಪಂ.ಶ್ರೀರುದ್ರಮುನಿ ಸ್ವಾಮಿಗಳು ಹೇಳಿದರು. 

ಪಟ್ಟಣದ ಗಾಂಧಿನಗರದ ಶ್ರೀಮಳೆಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಜರುಗಿದ ಶ್ರೀಮಳೆಬಸವಣ್ಣ ದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, 75ರಿಂದ80ರ ವಸಂತಗಳ ಸಂಭ್ರಮದಲ್ಲಿರುವ ಹಿರಿಯ ಚೇತನಗಳ ಜನ್ಮದಿನದ ವಜ್ರಮಹೋತ್ಸವ ಸಹಸ್ರ ಪೂರ್ಣಚಂದ್ರ ದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪಟ್ಟಣದಲ್ಲಿ ​‍್ರ​‍್ರಥಮವಾಗಿ ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಆದರಿಸುವ ವಿಶೇಷ ಮತ್ತು ಅಮೋಘ ಕಾರ್ಯಕ್ರಮ. ಗುರು ಅಮೂಲ್ಯವಾದ ವಸ್ತು. ಗು ಎಂದರೆ ಅಂಧಕಾರ. ರು ಎಂದರೆ ತೊಲಗಿಸು. ಅಂಧಕಾರ ತೊಲಗಿಸಿ ಜಾತಿ-ಭೇದ ಎಂದೆಣಿಸದೆ ಲೋಕದ ಅಂಕು-ಡೊಂಕು ತಿದ್ದಿ ಸಮಾಜವನ್ನು ಉದ್ಧರಿಸುವ ಸಾಮರ್ಥ್ಯ ಉಳ್ಳವನೇ ಗುರು. ಅಂತಹ ಗುರು ವೇ.ಮೂ.ಪಂಚಾಕ್ಷರಿ ಸ್ವಾಮಿಗಳು ಪಟ್ಟಣದಲ್ಲಿ ಸುಮಾರು 50-60 ವರ್ಷಗಳಿಂದ ಜಾತಿ-ಭೇದ ಎನ್ನದೆ ಎಲ್ಲರ ಮನೆಗಳ ಲಗ್ನ, ಮುಹೂರ್ತ ಕಾರ್ಯಗಳನ್ನು ಯಾವುದೆ ಫಲಾಪೇಕ್ಷೆಗಳಿಲ್ಲದೆ ಮಾಡುತ್ತಾ ಬಂದಿದ್ದಾರೆ. ಅವರನ್ನು ಗುರುತಿಸಿ ಕಮಿಟಿಯವರು ಒಮ್ಮನಸ್ಸಿನಿಂದ ಎಲ್ಲ ಜಾತಿ ಧರ್ಮದ ಬಾಂಧವರೊಂದಿಗೆ ಜನ್ಮದಿನ ಆಚರಣೆ ಮಾಡಿ ಗುರು ವ್ಯಕ್ತಿ ಅಲ್ಲ ಅದು ದಿವ್ಯ ಸಮಾಜವನ್ನು ಚೇತರಿಸುವ ಶಕ್ತಿ ಎಂದು ತೋರಿಸಿ ಕೊಟ್ಟಿದ್ದಾರೆ. ದೇವರ ಮತ್ತೊಂದು ಮುಖವೇ ಹಿರಿಯರು. ಹಿರಿಯ ಚೇತನಗಳನ್ನು ಗೌರವಿಸಿದರೆ, ಗುರುತಿಸಿದರೆ ಮತ್ತು ಸಂತೋಷ ಪಡಿಸಿದರೆ ದೇವರ ಪೂಜೆಯಾದಂತೆ ಎಂದರು.  

ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಹದೇಶ್ವರ ಲಿಂಗದಾಳ ನಾವು ಮಾಡಿದ ಪುಣ್ಯ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಇತ್ತೀಚೆಗೆ ತಂದೆ-ತಾಯಿಗಳ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಬೇರೆ ವ್ಯಕ್ತಿ ತಮ್ಮ ತಂದೆ-ತಾಯಿಗೆ ಸನ್ಮಾನಿಸುತ್ತಿರುವುದನ್ನು ನೋಡಿ ಅವರ ಮಕ್ಕಳು ಅವರನ್ನು ಗೌರವಿಸಬೇಕು ಎಂದರು. ಬಸವರಾಜ ನಡುವಿನಮನಿ ಮಾತನಾಡಿ 75-80ರ ವಸಂತಗಳನ್ನು ಕಂಡ ಹಿರಿಯ ಚೇತನಗಳು ಇನ್ನೂ ಹೆಚ್ಚಿನ ಆಯುರಾರೋಗ್ಯ ಕಾಣಲಿ ಎಂದರು. ಬಸವರಾಜ ಓಶಿಮಠ ಮಾತನಾಡಿ ತಾಯಿಯೇ ಮೊದಲ ದೇವರು. ಹಿರಿಯ ಚೇತನಗಳ ಹಾಗೆಯೇ ನೀವೆಲ್ಲರೂ ದೀರ್ಘಾಯುಷ್ಯ ಹೊಂದಿರಿ ಎಂದರು. ಕಾರ್ಯಕ್ರಮದ ಆಯೋಜಕ ಪ್ರಕಾಶ ಮೊಸಳಗಿ ಪ್ರಾಸ್ತಾವಿಕ ಮಾತನಾಡಿ  ಜನ್ಮ ನೀಡಿದ ತಂದೆ-ತಾಯಿಗೆ ಗೌರವಿಸಬೇಕು. ಇತರರಿಗೆ ಪ್ರೇರಣೆಯಾಗಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಎಸ್‌.ಜಿ.ಉಗ್ರಾಣ ಮಾತನಾಡಿದರು. 

ಇದೇ ಸಂದರ್ಭದಲ್ಲಿ 75ರಿಂದ80ರ ವಸಂತಗಳ ಸಂಭ್ರಮದಲ್ಲಿರುವ ಹಿರಿಯ ಚೇತನಗಳಿಗೆ ಗೌರವ ಸಮರ​‍್ಿಸಲಾಯಿತು. ಶತಾಯುಷಿ(101ವಸಂತ) ಪರಮಪೂಜ್ಯ ಶ್ರೀವೇ.ಪಂಚಾಕ್ಷರಿ ಸ್ವಾಮಿಗಳು ಕಂಬಾಳಿಮಠ ಪೂಜ್ಯರಿಗೆ ಗುರುವಂದನೆ ಸಲ್ಲಿಸಲಾಯಿತು. ನಂತರ ಅನ್ನಸಂತರೆ​‍್ಣ ಕಾರ್ಯಕ್ರಮ ಜರುಗಿತು. ಈ ವೇಳೆ ಕಮಿಟಿ ಅಧ್ಯಕ್ಷ ರಾಕೇಶ ರಾಯ್ಕರ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ನಾಯಕ, ಸೂರ್ಯಕಾಂತ ರಾಯ್ಕರ, ರಾಘವೇಂದ್ರ ರಾಯ್ಕರ, ರಾಜು ಬಾಬರ, ಮಾರುತಿ ಶಿಗ್ಗಾಂವ, ದತ್ತಾರಾಮ ಶೆಟ್ಟಿ, ಶ್ರೀಧರ ಛಬ್ಬಿ, ರಾಜು ಮೊಸಳಗಿ ಮುಂತಾದವರು ಉಪಸ್ಥಿತರಿದ್ದರು. ರೋಟರಿ ಶಾಲೆ ಮಕ್ಕಳು ಪ್ರಾರ್ಥಿಸಿದರು. ಗಜಾನನ ಶೆಟ್ಟಿ ಸ್ವಾಗತಿಸಿದರು. ಶ್ರೀಶೈಲ ಐನಾಪುರ ನಿರೂಪಿಸಿದರು. ಕುಮಾರಿ ಸೃಷ್ಟಿ ಐನಾಪುರ ಭರತನಾಟ್ಯ ಪ್ರದರ್ಶಿಸಿದರು. 


ಸುದ್ದಿ ಓದಿ