ರಸ್ತೆ ಮಧ್ಯ ಲಾರಿ ಪಲ್ಟಿ : ವಾಹನ್ ಸಂಚಾರ ಬಂದ್
ಮುಂಡಗೋಡ 28: ತಾಲೂಕಿನ ಗಡಿ ಭಾಗ ವಡಗಟ್ಟಾ ಬಳಿ ಹುಬ್ಬಳ್ಳಿಯಿಂದ ಮುಂಡಗೋಡ ಕಡೆಗೆ ಬರುತ್ತಿರುವ ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಪರಿಣಾಮ ಸುಮಾರು ಘಂಟೆಗಳ ಕಾಲ ಹುಬ್ಬಳ್ಳಿ ಶಿರಸಿಯ ರಸ್ತೆ ಬಂದಾದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಹುಬ್ಬಳ್ಳಿ ಕಡೆಯಿಂದ ಬೃಹತ್ ಗಾತ್ರದ ಲಾರಿಯೊಂದು ಗೊಬ್ಬರ ತುಂಬಿಕೊಂಡು ಮುಂಡಗೋಡ್ ಕಡೆಗೆ ಬರುತ್ತಿರುವಾಗ ಹುಬ್ಬಳ್ಳಿ ರಸ್ತೆಯ್ ತಡಸ್ ವಡಗಟ್ಟಾ ಬಳಿ ಚಾಲಕ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿ ಯಾಗಿ ರಸ್ತೆ ಸಂಪೂರ್ಣವಾಗಿ ವಾಹನ ಸಂಚಾರ ಬಂದಾಗಿದೆ.ಈ ಲಾರಿ ರಸ್ತೆ ನಡುವೆ ಅಡ್ಡಲಾಗಿ ಪಲ್ಟಿಯಾಗಿದ್ದರಿಂದ ಯಾವುದೇ ಒಂದು ಸಣ್ಣ ಬೈಕ್ ಕೂಡ ಹೋಗಲು ಜಾಗವಿಲ್ಲದಂತಾಗಿತ್ತು. ಹುಬ್ಬಳ್ಳಿಯಿಂದ ಬರುವ ವಾಹನಗಳು ತಡಸನಿಂದ ಮಾರ್ಗವಾಗಿ ದುಂಡಸಿ ಕೋಣನಕೇರಿ ಮುಂಡಗೋಡ ಮೂಲಕ ಸುತ್ತು ಹಾಕಿ ಸಂಚರಿಸಬೇಕಾಯಿತು.