ಲಾರಿ,ಬೈಕ್ ಮಧ್ಯ ಡಿಕ್ಕಿ: ಬೈಕ್ ಸವಾರ ಸಾವು


ಹುನಗುಂದ03:  ರಾಷ್ಟ್ರೀಯ ಹೆದ್ದಾರೆ 50ರ ಮೇಲೆ ಲಾರಿ ಮತ್ತು ಬೈಕ್ ಮಧ್ಯ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.                                            ನಗರದ ಹೊರ ವಲಯದಲ್ಲಿ ಹಾಯ್ದಿರುವ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ವೇಳೆ ಸಂಭವಿಸಿದ ಈ ಘಟನೆಯಲ್ಲಿ ನಿವೃತ್ತ ಶಿಕ್ಷಕ ಹನಮಂತಪ್ಪ ಗೋವಿನಗಿಡದ(82) ಮೃತಪಟ್ಟ ವ್ಯಕ್ತಿಯಾಗಿದ್ದು, ಮೃತನು ಸಾಯಂಕಾಲ ಹೆದ್ದಾರಿ ಕ್ರಾಸ್ ಮಾಡಿ ಹೊಲಕ್ಕೆ ಹೋಗುವಾಗ ಮಾರ್ಗದ ಮಧ್ಯೆ ಪಂಜಾಬ್ ಮೂಲದ ಲಾರಿಯು ಬೆಂಗಳೂರ ಕಡೆಗೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಸಿಪಿಐ ಹೊಸಕೇರ​‍್ಪ ಕೋಳೂರ ಮತ್ತು ಪಿಎಸ್‌ಐ ಎಸ್‌.ಆರ್‌. ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಚಾಲಕ ಮತ್ತು ಲಾರಿಯನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.