ಜಮಖಂಡಿ

ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಜಮಖಂಡಿ19: ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.  ಲೋಕಾಯುಕ್ತ ಪಿಎಸ್‌ಐ ಬಸವರಾಜ ಅವಟಿ ನೇತೃತ್ವದ ಲೋಕಾಯುಕ್ತ ತಂಡವು ನೇರವಾಗಿ ಎಡಿ,ಎಲ್,ಆರ್ ಕಚೇರಿಯ ರೆಕಾರ್ಡ ಕೋಣೆಗೆ ಆಗಮಿಸಿ, ಕಡತಗಳನ್ನು ಪರೀಶೀಲಿಸಿ, ಕಚೇರಿ ಮತ್ತು ಅಲ್ಲಿನ ಅವ್ಯವಸ್ಥೆ ಕುರಿತು ಕಿಡಿಕಾರಿದರು. ನಂತರ ಕಡತಗಳನ್ನು ಒಂದೊಂದಾಗಿ ಪರೀಶೀಲಿಸಿ ಸಾರ್ವಜನಿಕರಿಗೆ ಮತ್ತು ಯಾವುದೇ ರೈತರಿಗೆ ತೋಂದರೆಯಾಗದಂತೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು. ಲೋಕಾಯುಕ್ತ ಆರಕ್ಷಕ ಶಂಕರ ಬಳಬಟ್ಟಿ, ಬಸವರಾಜ ದೇಸಾಯಿ ಸೇರಿದಂತೆ ಹಲವರು ಇದ್ದರು. ಜಮಖಂಡಿ ನಗರದ ಹಳೆ ತಹಶೀಲ್ದಾರ ಕರಿ ಆವರಣದಲ್ಲಿರುವ ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ಪಿಎಸ್‌ಐ ಬಸವರಾಜ ಅವಟಿ ನೇತೃತ್ವದಲ್ಲಿ ಲೋಕಾಯುಕ್ತ ತಂಡದಿಂದ ದಾಳಿ ನಡೆಸಿದರು. 


ಸುದ್ದಿ ಓದಿ