ಲಾಕ್‌ಡೌನ್ ವಿನಾಯತಿ, ಅನಗತ್ಯ ಅಂಗಡಿಗಳು ಒಪನ್,
ಹಗರಿಬೊಮ್ಮನಹಳ್ಳಿ 16 : ಲಾಕ್‌ಡೌನ್ ಸಡಿಲಿಕೆಯ ದುರೋಪಯೋಗ ಪಡಿಸಿಕೊಂಡು ಅನಗತ್ಯ ಅಂಗಡಿಗಳು ಒಪನ್ ಅಗಿದ್ದು ಬುಧವಾರ ಪಿಎಸ್‌ಐ ಮಾರುತಿ ನೇತೃತ್ವದಲ್ಲಿ ಜಿಲ್ಲಾಡಳಿತದ ಆದೇಶದಂತೆ ಲಾಕ್‌ಡೌನ್ ವಿನಾಯತಿ ನೀಡಿದ ಮಳಿಗೆಗಳು ಬಿಟ್ಟು ಇತರೆ ಅಂಗಡಿಗಳನ್ನು ಬಾಗಿಲು ಬಂದ್ ಮಾಡಿಸಲಾಯಿತು.
ಪಟ್ಟಣದ ಬಸವೇಶ್ವರ ಬಜಾರ್ ಸೇರಿದಂತೆ , ಕೊಟ್ಟೂರು ವೃತ್ತ, ಕೂಡ್ಲಗಿ ವೃತ್ತದಲ್ಲಿ ಅವಕಾಶ ನೀಡದ ಮಳಿಗೆಗಳು ತೆರೆದಿದ್ದು ಅವುಗಳನ್ನು ಬಂದ್ ಮಾಡಿಸಿದರು. ಬಟ್ಟೆ ಅಂಗಡಿಗಳು, ಸೇರಿದಂತೆ ಜನರಲ್ ಸ್ಟೋರ್ರ್ಸ್‌ಗಳಿಗೆ ಅನುಮತಿ ನೀಡಿಲ್ಲ , ಕೃಷಿ ಸಲಕರಣೆ, ಬೀಜದ ಅಂಗಡಿಗಳು, ಕೀಟ ನಾಶಕ ಮತ್ತು ರಸಗೊಬ್ಬರದ ಅಂಗಡಿಗಳು, ಕಡ್ಡಟ ನಿರ್ಮಾ ಸಾಮಾಗ್ರಿಗಳ ಅಂಗಡಿಗಳು, ಸಿಮೆಂಟ್ ಸ್ಟೀಲ್ ಅಂಗಡಿಗಳು, ಕಿರಾಣಿ ಅಂಗಡಿ ದಿನಸಿ, ಹಾಲಿನ ಡೈರಿಗಳು, ಹಾಲಿನ ಬೂತ್‌ಗಳು, ಹಣ್ಣು-ತರಕಾರಿ ಮದ್ಯದ ಆಂಗಡಿಗಳಲ್ಲಿ ಪಾರ್ಸೆಲ್ ವೆವಸ್ಥೆ, ಮಾಂಸ ಮತ್ತು ಮೀನು, ಪಡಿತರ ಅಂಗಡಿಗಳು (ಪಿಡಿಎಸ್) ಅಶು ಅಹಾರದ ಅಂಗಡಿಗಳಿಗೆ ಮಾತ್ರ ಲಾಕ್‌ಡೌನ್ ನಿಂದ ವಿನಾಯತಿ ಇದ್ದು ಅನಗತ್ಯ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ ಎಂದು ಪತ್ರಿಕೆಗೆ ತಿಳಿಸಿದರು. ಪ್ರಮುಖವಾಗಿ ಸಾರ್ವಜನಿಕರು ಕೊರೊನಾ ಸೊಂಕನ್ನು ಹಗುರವಾಗಿ ಅರ್ಥೈಯಿಸಿಕೊಳ್ಳದೇ ಸಾಮಾಜಿಕ ಅಂತರ ಕಾಪಾಡಿಕೊಂಡು ಕರೋನಾ ಚೈನ್‌ಲಿಂಕ್ ತಪ್ಪಿಸುವಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಹಕರಿಸದಿದ್ದರೆ ಮತ್ತೆ ಲಾಕ್‌ಡೌನ್ ಅಗುವ ಸಾಧ್ಯತೆಗಳು ಇವೆ ಹಾಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಲು ಕರೆ ನೀಡಿದರು.
ಈ ಸಂಧರ್ಭದಲ್ಲಿ ಪೋಲೀಸ್ ಇಲಾಖೆಯ ಹೆಡ್ ಕಾನ್ಸಟೇಬಲ್ ಮಂಜಮ್ಮ, ಪೇದೆಗಳಾದ ನಾಗರಾಜ್, ಕೊಟ್ರೇಶ್ ಇದ್ದರು.