ಬಳ್ಳಾರಿ

ಸುಕೋ ಬ್ಯಾಂಕ್‍ನದಿಂದ ಸಾಲಮೇಳ

ಸುಕೋ ಬ್ಯಾಂಕ್‍ನದಿಂದ ಸಾಲಮೇಳ

ಬಳ್ಳಾರಿ 29: `ಕೋವಿಡ್-19' ನಂತರದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಸುಕೋ ಬ್ಯಾಂಕ್ ಜ. 29ರಿಂದ ಫೆ. 15ರವರೆಗೆ ವಿವಿಧ ಸಾಲ ಯೋಜನೆಗಳ ಮೇಲೆ ಶೇ.1 ರಿಂದ 4 ರಷ್ಟು ಕಡಿತದ ಆಕರ್ಷಕ ಬಡ್ಡಿದರದಲ್ಲಿ ಸಾಲಮೇಳವನ್ನು ಏರ್ಪಡಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1 ರಿಂದ 25 ಲಕ್ಷರೂಪಾಯಿವರೆಗಿನ ಸಾಲಕ್ಕೆ ಶೇ.1 ರಿಂದ ಶೇ.4 ರಷ್ಟು ಬಡ್ಡಿದರದಲ್ಲಿ ಕಡಿತ 25 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ.0.5 ರಿಂದ ಶೇ.3.25 ರಷ್ಟು ಬಡ್ಡಿದರದಲ್ಲಿ ಕಡಿತ 50 ಲಕ್ಷ ರೂಪಾಯಿಯಿಂದ 1 ಕೋಟಿ ರುಪಾಯಿ ಸಾಲಕ್ಕೆ ಶೇ.0.5 ರಿಂದ ಶೇ.2.25 ರಷ್ಟು ಬಡ್ಡಿದರದಲ್ಲಿ ಕಡಿತ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.

ಆಸಕ್ತರು ಸುಕೋ ಬ್ಯಾಂಕ್‍ನ ಸಾಲಮೇಳದ ಸೌಲಭ್ಯವನ್ನು ಪಡೆದುಕೊಂಡು ಕೋವಿಡ್ ನಂತರದ ಸ್ಥಗಿತಗೊಂಡಿದ್ದ  ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಿಕೊಳ್ಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಸಮೀಪದ ಶಾಖೆಯನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.

ಸುದ್ದಿ ಓದಿ