ದಾನದಿಂದ ಬದುಕು ಸಾರ್ಥಕ; ವಿರುಪಾಕ್ಷ ಶ್ರೀಗಳು
ಮುದ್ದೇಬಿಹಾಳ 28: ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗ ದಾನ, ಧರ್ಮಕ್ಕೆ ಮೀಸಲಿಡಬೇಕು. ಆಗ ಈ ಶರೀರ ಕಳೆದ ಹೋದ ಮೇಲೂ ದಾನಿಗಳು ಮಾಡಿದಂತಹ ಕೆಲಸ ಕಾರ್ಯಗಳು ನಮ್ಮನ್ನು ಅಜರಾಮರವಾಗಿ ಉಳಿಯುವಂತೆ ಮಾಡುತ್ತದೆ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಲಿಂಗೈಕ್ಯ ಚನ್ನಣ್ಣ ಬಸವಂತ್ರಾಯ ದೇಸಾಯಿ ಇವರ ಸ್ಮರಣಾರ್ಥ ಅಂಗವಾಗಿ ಹಾರ್ವರ್ಡ ಕಾಲೇಜಿನಲ್ಲಿ ದತ್ತಿ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಶರೀರ ಹೋಗುವ ಮುನ್ನ ದಾನದಂತಹ ಪರೋಪಕಾರ ಕೆಲಸ ಮಾಡಬೇಕು. ಆಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ. ಸೇವೆ ಮಾಡುವುದರಿಂದ ಬದುಕು ಉಜ್ವಲದತ್ತ ಕೊಂಡೊಯ್ಯುತ್ತದೆ ಅದನ್ನು ಲಿಂಗೈಕ್ಯರಾದ ಚನ್ನಣ್ಣ ದೇಸಾಯಿ ಅವರು ಮಾಡಿದ್ದಾರೆ.
ತಂದೆ ತಾಯಿಯಂದಿರರಿಗೆ ವಯಸ್ಸಾಗಿದೆ ಎಂದು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಭುಗೌಡ ದೇಸಾಯಿಯವರು ತಮ್ಮ ತಂದೆಯವರ ಹೆಸರಲ್ಲಿ ದತ್ತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ದಾನ ಧರ್ಮ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ.
ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಗುರುವಿಗೆ ಭಾರತದಲ್ಲಿ ದೊಡ್ಡ ಸ್ಥಾನವಿದೆ. ಗುರುಗಳಿಗೆ ಗೌರವ ಕೊಡುವುದರ ಜತೆಗೆ ಶ್ರದ್ಧೆ, ಪರಿಶ್ರಮವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಗುರುವಿಗೆ ದೊಡ್ಡ ಸ್ಥಾನ ಇದೆ. ಇದನ್ನು ಯಾರೂ ಮರೆಯಬಾರದು. ಶರೀರದಲ್ಲಿ ಆತ್ಮ ಇರೋವರೆಗೆ ಬೆಲೆ ಇದೆ. ಅದು ಹೋದ ಮೇಲೆ ಬೆಲೆ ಇರುವುದಿಲ್ಲ. ವಿದ್ಯಾರ್ಥಿಗಳು ಯಶಸ್ಸು ಕಂಡ ಮೇಲೆ ತಂದೆ-ತಾಯಿಯ ಸೇವೆ ಮಾಡಿ, ಪುಣ್ಯದ ಬುತ್ತಿ ಹೆಚ್ಚಿಕೊಳ್ಳುವ ಮೂಲಕ ನಿಜವಾದ ದೇಶಪ್ರೇಮಿಗಳಾಗಿ ಸನ್ಮಾರ್ಗದ ಜೀವನಕ್ಕೆ ಸಾಕ್ಷೀಯಾಗಬೇಕು ಎಂದು ವಿರುಪಾಕ್ಷ ಶ್ರೀಗಳು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರ ಮಾತನಾಡಿ ಚನ್ನಣ್ಣ ದೇಸಾಯಿ ಅವರಾದ ನಮ್ಮ ತಂದೆಯವರು ವಯಸ್ಸಿನಲ್ಲಿ ಕಿರಿಯ-ಹಿರಿಯರಿರಲಿ ಅವರಿಗೆ ನೀಡುವ ಗೌರವಿಸಿ ಸ್ವಭಾವ ಹೊಂದಿದ್ದರು, ಯಾರೇ ಆಗಲಿ ಅವರ ಜತೆ ಮಾತನಾಡಲು ಯೋಚನೆ ಮಾಡಿ ಮಾತನಾಡುತ್ತಿದ್ದರು.ಅಷ್ಟೋಂದ ಸರಳ ಸಂಭಾವಿತರಾಗಿದ್ದರು ಜೊತೆಗೆ ಸಂಗೀತಗಾರರು ಕೂಡ ಆಗಿದ್ದು ದೇವರ ಭಜನೆ, ಪ್ರಾರ್ಥನೆ ಹೀಗೆ ದೇವರ ಆರಾಧಕರಾಗಿದ್ದರು. ಅವರು ಮಾಡಿದ ಸಾಮಾಜಿಕ ಕೆಲಸ ಕಾರ್ಯಗಳನ್ನು ಸ್ಮರಿಸಿಕೊಂಡರೆ ಈಗಲೂ ದುಃಖ ಆಗುತ್ತದೆ ಎಂದು ಭಾವುಕರಾಗಿ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಹಾರ್ವರ್ಡ ಪಿಯು ಕಾಲೇಜು ಅಧ್ಯಕ್ಷ ಎಸ್.ಎಮ್ ನೆರಬೆಂಚಿ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಸವರಾಜ ನಾಲತವಾಡ, ಬಾಲಾಜಿ ಶುಗರ್ಸ ನ ಉಪಾಧ್ಯಕ್ಷ ರಾಹುಲ ಪಾಟೀಲ, ನ್ಯಾಯವಾದಿ ಎಸ್.ಬಿ ಬಾಚಿಹಾಳ, ಕ.ಕೋ.ಬ್ಯಾಂಕ್ ಅಧ್ಯಕ್ಷ ಸತೀಶ್ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಾಹಿತಿ ಅಶೋಕ ಮಣಿ, ಗಣ್ಯ ಉದ್ಯಮಿಗಳಾದ ಸುಧೀರ ನಾವದಗಿ, ಶರಣು ಸಜ್ಜನ, ಸುನೀಲ ಇಲ್ಲೂರ, ರುದ್ರ್ಪ ಕಡಿ, ಎಸ್.ಎಚ್. ಮುದ್ನಾಳ, ಅರವಿಂದ ಹೂಗಾರ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ವಿರೇಶ ಹಡಲಗೇರಿ, ಬಾಪುಗೌಡ ಪಾಟೀಲ, ಮಹಾದೇವಿ ವಾಲಿ, ರೂಪಾ ದೇಸಾಯಿ, ಆರ್.ಬಿ ರೂಡಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.