ಹಗರಿಬೊಮ್ಮನಹಳ್ಳಿ

ಬಿತ್ತನೆ ಬೀಜ ಖರೀದಿಗೆ ಮಿತಿ, ಮರು ಖರೀದಿಗಿಲ್ಲ ಅವಕಾಶ: ಪತ್ರೇಶ್ ಹಿರೇಮಠ್ ಆಕ್ರೋಶ

ಬಿತ್ತನೆ ಬೀಜ ಖರೀದಿಗೆ ಮಿತಿ, ಮರು ಖರೀದಿಗಿಲ್ಲ ಅವಕಾಶ: ಪತ್ರೇಶ್ ಹಿರೇಮಠ್ ಆಕ್ರೋಶ

ಹಗರಿಬೊಮ್ಮನಹಳ್ಳಿ 21:  ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ಆದಿಕಾರಾವಧಿಯಲ್ಲಿ ರೈತರಿಗೆ ಬಿತ್ತನೆ ಬೀಜಗಳಿಗೆ ಅ75ರಷ್ಟು ಸಹಾಯ ಧನ ನೀಡಲಾಗುತ್ತಿದ್ದು ,ಇಂದಿನ ಬಿಜೆಪಿ ಸರ್ಕಾರ ಸಾಮಾನ್ಯ ವರ್ಗಗಳಿಗೆ ಪ್ರತಿ ಕೆಜಿಗೆ 15 ರಿಂದ 20 ರೂ ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ 20 ರಿಂದ 40 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಆರ್‌ಎಸ್‌ಕೆಗಳಲ್ಲಿ ಕೆ-ಕಿಸಾನ್ ತಂತ್ರಾಂಶ ಅಳವಡಿಸಿ ರೈತರ ಪಹಣಿ, ಆಧಾರ್ ಸಂಖ್ಯೆ ನೊಂದಾಯಿಸಿ ಕೇವಲ ಐದು ಎಕರೆಗೆ ಬಿತ್ತನೆ ಬೀಜ ನೀಡುವ ಮಿತಿಯಿಂದ ರೈತರಿಗೆ ಮರು ಖರೀದಿಗೆ ತಡೆಯೊಡ್ಡಿದೆ, ಬೀಜ ಖರೀದಿಸುವ ಮಿತಿ ತೆಗೆದು ಹಾಕುವಂತೆ ಕೃಷಿ ಸಚಿವ ಬಿಸಿ ಪಾಟೀಲ್ ಅವರನ್ನು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ. ಕೋರೋನಾದಿಂದ ರೈತರು ಸಂಕಷ್ಟದಲ್ಲಿದ್ದು ಮೊದಲಿನಂತೆ ಬಿತ್ತನೆ ಬೀಜಕ್ಕೆ 75ಅ ಸಹಾಯಧನ ನೀಡಿ ನಿಮ್ಮ ನಿಜವಾದ ರೈತರ ಮೇಲಿನ ಪ್ರೀತಿಯನ್ನು ಬಹಿರಂಗಗೊಳಿಸಿ ಎಂದು ಸವಾಲು ಹಾಕುವ ಜೊತೆಗೆ ಕೃಷಿ ಸಚಿವರಿಗೆ ಪತ್ರ ಬರೆದಿರುವುದಾಗಿ ಪತ್ರೇಶ್ ತಿಳಿಸಿದರು. 


ಸುದ್ದಿ ಓದಿ