ವೇಮನರ ಜೀವನವೇ ಸಂದೇಶ : ಸೋಮಶೇಖರರೆಡ್ಡಿ
ಬಳ್ಳಾರಿ 19: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಮಹಾಯೋಗಿ ವೇಮನರ 610ನೇ ಜಯಂತಿಯನ್ನು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಹೊಂಗಿರಣದಲ್ಲಿ ಬುಧವಾರ ಆಚರಿಸಲಾಯಿತು.
ಶಾಸಕ ಜಿ. ಸೋಮಶೇಖರರೆಡ್ಡಿಯವರು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವೇಮನರ ಜೀವನವೇ ಸಂದೇಶವಾಗಿದೆ, ಮನುಕುಲಕ್ಕೆ ದಾರೀದೀಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಪೀಠದ ಗೌರವಾಧ್ಯಕ್ಷರಾದ ಗಣಪಾಲ ಐನಾಥರೆಡ್ಡಿ, ಅಧ್ಯಕ್ಷರಾದ ಡಾ.ಬಸವರಾಜರೆಡ್ಡಿ, ಕಾರ್ಯದರ್ಶಿ ಸಂಜೀವರೆಡ್ಡಿ, ಎಲ್.ಕೃಷ್ಣಾರೆಡ್ಡಿ, ವೀರಶೇಖರರೆಡ್ಡಿ, ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ, ಮಹಾನಗರಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಮುಖಂಡರಾದ ವಿಜಯಮ್ಮ, ಡಾ.ವೆಂಕಟಮಹಿಪಾಲ ರೆಡ್ಡಿ, ಸಿರಿಗೇರಿ ಪನ್ನಾರಾಜ್, ಮರ್ಜೇಡ್ ಮಲ್ಲಿಕಾರ್ಜುನ, ಎನ್.ಟಿ.ಎಸ್.ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ. ರಂಗಣ್ಣವರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
“ಮಹಾಯೋಗಿ ವೇಮನ”ರ ಪದ್ಯಗಳನ್ನು ನಿವೃತ್ತ ಉಪನ್ಯಾಸಕ ಎನ್.ಬಸವರಾಜ ಅವರು ಗಾಯನದ ಮೂಲಕ ಪ್ರಸ್ತುತಪಡಿಸಿದರು.