ಇಂಡಿ

ರೈತರಿಗೆ ನ್ಯಾಯ ದೊರಕಿಸಲು ರಕ್ತದಿಂದ ಸರ್ಕಾರಕ್ಕೆ ಪತ್ರ

ರೈತರಿಗೆ ನ್ಯಾಯ ದೊರಕಿಸಲು ರಕ್ತದಿಂದ ಸರ್ಕಾರಕ್ಕೆ ಪತ್ರ

ಇಂಡಿ11: ಇಂಡಿ ತಾಲ್ಲೂಕಿನ ಸಮಗ್ರ ನೀರಾವರಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌದ ಮುಂಭಾಗದಲ್ಲಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ ಹತ್ತನೆ ದಿನಕ್ಕೆ ಕಾಲಿಟ್ಟಿದ್ದು ಧರಣಿ ಸ್ಥಳಕ್ಕೆ ಎಡಿಸಿ ರಮೇಶ ಕಳಸದ ಭೇಟಿ ನೀಡಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.

ಸತ್ಯಾಗ್ರದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ ರಕ್ತದಿಂದ ಸರಕಾರಕ್ಕೆ ಬರೆದ ಪತ್ರವನ್ನು ಎಡಿಸಿ ಅವರಿಗೆ ನೀಡಿ ಮಾತನಾಡಿ ಎಲ್ಲಿವರಿಗೆ ನಮ್ಮ ಬೇಡಿಕೆಗಳು ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.

ರೈತರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ನನ್ನ ರಕ್ತದಿಂದ ಸರಕಾರಕ್ಕೆ ಪತ್ರ ಬರೆದಿದ್ದೇನ್. ನಮ್ಮ ರಕ್ತ ಅಷ್ಟೇ ಅಲ್ಲ, ನನ್ನ ಪ್ರಾಣ ಹೋದರು ಚಿಂತೆಯಿಲ್ಲಾ. ರೈತರಿಗೆ ನ್ಯಾಯ ಸಿಗುವರೆಗೂ ಧರಣಿ ಕೈ ಬಿಡುವುದಿಲ್ಲ.

ತಾಲೂಕಿನ ಜನ ಪ್ರಜ್ಞಾವಂತ ನಾಗರಿಕರಾಗಿದ್ದು ಜನರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಎಡಿಸಿ ರಮೇಶ ಕಳಸದ್ ಮಾತನಾಡಿ ನೀವು ಸಲ್ಲಿಸಿದ ಮನವಿಯನ್ನು ಸರಕಾರದ ಸಂಬಂಧಪಟ್ಟ ಸಚಿವರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಡಿವೈಎಸ್‍ಪಿ ಶ್ರೀಧರ ದೊಡ್ಡಿ ಮಾತನಾಡಿ ಧರಣಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನಿಮ್ಮ ಧರಣಿ ನ್ಯಾಯಯುತವಾಗಿದ್ದು ಧರಣಿಗೆ ಇಲಾಖೆಯಿಂದ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಮಂಜುನಾಥ ಕಾಮಗೊಂಡ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಲಕ್ಷ್ಮಣಗೌಡ ಬಿರಾದಾರ,ಬಸವರಾಜ ಹಂಜಗಿ, ಮಹೇಶ ಭಿಸೆ, ಹಾವಣ್ಣ ಪೂಜಾರಿ, ರಾಘವೇಂದ್ರ ಕಾಪಸೆ, ನಂದಪ್ಪ ಹೊಸೂರ, ನಾಗಪ್ಪ ತವರಖೇಡ, ಶಿವಾನಂದ ಮಾಶ್ಯಾಳ, ಶಿವಕುಮಾರ ಭೋಸಲೆ, ಮೈಬೂಬ  ಬೇನೂರ, ದುಂಡು ಬಿರಾದಾರ, ರಾಜು ಮುಲ್ಲಾ ನೂರಾರು ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ