ಯುವ ಜನಾಂಗ ಆಟ ಪಾಠದೊಂದಿಗೆ ಸಂಗೀತವನ್ನು ಕಲಿಯಲಿ: ಅಶ್ವಥ ವೈದ್ಯ
ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ
ಉಗರಗೋಳ 10: ವೇಗವಾಗಿ ಬೆಳೆಯುತ್ತಿರುವ ಅಧುನಿಕ ಯುಗದಲ್ಲಿ, ಸಂಗೀತ ಕಲೆ ನಶಿಸಿ ಹೋಗುತ್ತಿದ್ದು ಇಂದಿನ ಯುವ ಪೀಳಿಗೆ, ಆಟ ಪಾಠದ ಜೊತೆಗೆ ಸಂಗೀತವನ್ನು ಕಲಿಯಬೇಕು ಎಂದು ಅಶ್ವಥ ವೈದ್ಯ ಹೇಳಿದರು.
ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ 143ನೇ ಪುಣ್ಯಾರಾಧನೆ ನಿಮಿತ್ತ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ಚಿಕ್ಕುಂಬಿ, ಇವರ ಸಂಯುಕ್ತ ಆಶ್ರಯದಲ್ಲಿ ಕೆರೂರ ಮೆಲೋಡಿಸ್ ಆರ್ಕೆಸ್ಟ್ರಾ ಇವರಿಂದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಪ್ರತಿಯೊಬ್ಬರದ್ದು ಒತ್ತಡದ ಬದುಕು. ಈ ಒತ್ತಡದಿಂದ ಹೊರಬಂದು ನೆಮ್ಮದಿಯಿಂದ ಬದುಕು ಸಾಗಿಸಲು ಸಂಗೀತದತ್ತ ಒಲವು ಬೆಳಸಿಕೊಂಡು ದೇಸಿ ಕೆಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದರು.
ಸಾನಿಧ್ಯ ಅಭಿನವ ನಾಗಲಿಂಗ ಶ್ರೀಗಳು, ಸುರೇಶಗೌಡ ಬಡಗಿಗೌಡ್ರ, ಮಹಾಂತೇಶ ಸಂಗ್ರೇಶಿ, ಯಲ್ಲವ್ವ ಉಪ್ಪಾರ, ಡಿ ಡಿ ಟೋಪೋಜಿ, ಮಲ್ಲು ಜಕಾತಿ, ಪಿ ವಾಯ್ ಗಾಜಿ, ಗೀರೀಶ ಬಿಮರಡ್ಡಿ, ಸಂತೋಷ ನೊರೇಯವರ, ಈಶ್ವರ ಮೇಟಿ, ಮಾಹಾಂತೇಶ ಸಂಗ್ರೇಶ್, ಗಂಗಪ್ಪಾ ಶಿರಸಂಗಿ, ಪುಂಡಲೀಕ ಸಂಗ್ರೇಶ್, ಮಹಾದೇವಪ್ಪಾ ಶಿದ್ದಾಪೂರ, ರಂಗನಾಥ ಸಂಗ್ರೇಶ್, ಪುಂಡಲೀಕ ಕುರಿ, ಮಮ್ಮದಲಿ ದೊಡಮನಿ, ಬಾಳಪ್ಪ ಗೋವಣ್ಣವರ, ಎಮ್ ಡಿ ಶಿದ್ದಾಪೂರ ಹಾಗೂ ಗ್ರಾಮಸ್ಥರು ಮತ್ತು ಸಂಗೀತ ಅಭಿಮಾನಿಗಳು ಇದ್ದರು.