ಮಹಿಳೆಯರು ಸರ್ಕಾರದ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಲಿ
ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ: ಸಾಮೂಹಿಕ ಸೀಮಂತ ಕಾರ್ಯಕ್ರಮ
ಹುನಗುಂದ 09: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ವಿಶೇಷ ಯೋಜನೆಗಳ ಸೌಲಭ್ಯಗಳನ್ನು ಮಹಿಳೆಯರು ಪಡೆದುಕೊಂಡು ಎಲ್ಲ ರಂಗದಲ್ಲೂ ಮುಂದೆ ಅರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸಮೀಪದ ಅಮರಾವತಿ ಗ್ರಾಪಂ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಾಧಕರ ಸನ್ಮಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ದೇಶದ ಪ್ರಧಾನ ಮಂತ್ರಿ ನರೇಂದ್ರಜಿ ಮತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ವಿಶೇಷÀವಾಗಿ ಮಹಿಳೆಯರ ಅಭಿವೃದ್ದಿಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅದೆ ರೀತಿ ಪಕ್ಷದ ಸಂಘಟನೆಯಲ್ಲಿಯೂ ಮಹಿಳೆಯರಿಗೂ ಹೆಚ್ಚಿನ ಸ್ಥಾನ-ಮಾನ ನೀಡುವದು ನಮ್ಮ ಬಿಜೆಪಿ ಪಕ್ಷದಲ್ಲಿ ಮಾತ್ರ ಎಂದು ಶಾಸಕರು ತಿಳಿಸಿದರು.
ಮಹಿಳೆಯರು ಸಬಲರಾಗಿ ಉತ್ಸಾಹದ ಹೈನುಗಾರಿಕೆ, ರೇಶ್ಮೆಯಂತಹ ಉದ್ಯೋಗಗಳಲ್ಲಿ ಹುಮ್ಮನಿಸ್ಸಿನಿಂದ ಪಾಲ್ಗೊಂಡು, ರಾಜಕೀಯ ಮತ್ತು ವ್ಯವಹಾರಿಕವಾಗಿ ಎಲ್ಲದರಲ್ಲೂ ಯಶಸ್ಸು ಕಾಣಬೇಕೆಂದರು. ಗ್ರಾಪಂ ಅಧ್ಯಕ್ಷೆ ಸಂಗೀತಾ ಗದುಗಿನ ಅಧ್ಯಕ್ಷತೆ ವಹಿಸಿ ಮತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಈಗಾಗಲೆ ಗ್ರಾಪಂ ವಾಪ್ತಿಯಲ್ಲಿ ಚರಂಡಿ, ರಸ್ತೆ, ನೀರಿನ ಹಾಗೂ ಇನ್ನೂ ಹಲವಾರು ರೀತಿಯಲ್ಲಿ ಜನರಿಗೆ ಸಾರ್ವತ್ರಿಕವಾಗಿ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಶಾಸಕರು ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಿಕೆಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಂಡರು. ಸವಿತಾ ಸರೂರ್, ಸರಸ್ವತಿ ತಳವಾರ, ಜ್ಯೋತಿ ಕಟಾವಕರ ಮಾತನಾಡಿದರು.
ಎಪಿಎಂಸಿ ನಿರ್ದೇಶಕ ಅಮದಾನೆಪ್ಪ ಹವಾಲ್ದಾರ, ಮಂಜು ಚಲವಾದಿ, ದೇವಮ್ಮ ಪಾಟೀಲ, ಗೀತಾ ಹೊದ್ಲೂರ, ಭಾರತಿ ದೇಸಾಯಿ, ಶಾರದಾ ಬಲವಂತನವರ, ಶರಣಮ್ಮ ರಾಠಿ, ಸವಿತಾ ಗೋನಾಳ, ರೇಣುಕಾ ಮೇಟಿ, ನಾಗರತ್ನ ಮಾದರ ಉಪಸ್ಥಿತರಿದ್ದರು. ಶಿವಲೀಲಾ ಗದುಗಿನ ಸ್ವಾಗತಿಸಿದರು. ಸಹನಾ ಗೋಲಪ್ಪನವರ ಪ್ರಾರ್ಥಿಸಿದರು. ಮಹಾಂತೇಶ ಮಂಡೆಪ್ಪನವರ ನಿರೂಪಿಸಿದರು. ಸವಿತಾ ಗೋನಾಳ ವಂದಿಸಿದರು.
ಮಹಿಳೆಯರು ಪ್ರಾಮಾಣಿಕವಾಗಿ ಗುರುಹಿರಿಯರ ಸಂಪ್ರದಾಯಕ್ಕೊಳಪಟ್ಟು ಮನೆಯ ಯಜಮಾನರ ವಿಶ್ವಾಸ ಮತ್ತು ಪ್ರೀತಿಗೆ ಪಾತ್ರರಾಗಿ ಸಾಮಾಜಿಕವಾಗಿ ಕೆಲಸ ಮಾಡೇಕು. ಪುರುಷರಷ್ಟೆ ನಾವು ಧೈರ್ಯದಿಂದ ಮುನ್ನುಗ್ಗಿದಾಗ ಮಹಿಳೆ ಸಬಲಳಾಗಲು ಸಾಧ್ಯ.
ಕಾವೇರಿ ರಾಠೋಡ ಜಿಲ್ಲಾ ಬಿಜೆಪಿ ಸಮೀತಿ