ವಿದ್ಯಾರ್ಥಿಗಳು ಪಿಸಿ ಟ್ಯಾಬ್ ಶೈಕ್ಷಣಿಕ ಅಭಿವೃದ್ಧಿಗೆ ಬಳಕೆ ಮಾಡಲಿ: ಸೋಮಶೇಖರರೆಡ್ಡಿ
ಬಳ್ಳಾರಿ 26: ವಿದ್ಯಾರ್ಥಿಗಳು ಸರ್ಕಾರವು ಉಚಿತವಾಗಿ ನೀಡಿರುವ ಉಚಿತ ಪಿಸಿ ಟ್ಯಾಬ್‌ಗಳನ್ನು ಸಮರ್ಕವಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಬಳ್ಳಾರಿ ನಗರ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಜಿ.ಸೋಮಶೇಖರರೆಡ್ಡಿ ಅವರು ತಿಳಿಸಿದರು.
ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಿಸಿ ಟ್ಯಾಬ್ಲೆಟ್ ವಿತರಣಾ ಕಾರ್ಯಕ್ರಮ ಹಾಗೂ ಸ್ಮಾಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಕೊರತೆ ಅನುಭವಿಸದಂತೆ ಇತರೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯನ್ನು ಮಾಡಬೇಕಾದರೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಕಳೆದ ಬಾರಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದೆ ಅಲ್ಲದೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಾಸಂಗ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ಹೇಳಿದರು.
ಕಾಲೇಜಿಗೆ ಅಗತ್ಯವಿರುವ ಆಡಿಟೋರಿಯಂ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ದೇಶದಲ್ಲಿ 14ನೇ ಸ್ಥಾನಗಳಿಸಿರುವ ಈ ಸರಳಾದೇವಿ ಕಾಲೇಜು ಭವಿಷ್ಯದಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೇರಲಿ ಎಂದು ಆಶಿಸುವೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿರುವವರನ್ನು ಸನ್ಮಾನಿಸಿ ಇತರೆ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ ಅವರು ಮಾತನಾಡಿ ಕಾಲೇಜಿಗೆ 1415 ಪಿಸಿ ಟಾಬ್ಲೇಟ್‌ಗಳು ಬಂದಿದ್ದು, ಇಂದು ಸಾಂಕೇತಿಕವಾಗಿ ವಿವಿಧ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಲಾಗಿದೆ. ಕಾಲೇಜು ಸಂಪೂರ್ಣವಾಗಿ ಆರಂಭವಾದ ಮೇಲೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿಗಳಾದ ವೀರಶೇರರೆಡ್ಡಿ, ಸದಸ್ಯರಾದ ಮಾಜಿ ಮೇಯರ್ ಇಬ್ರಾಹಿಂ ಬಾಬು, ಶ್ರೀನಿವಾಸಮೋತ್ಕರ್, ಅಶೋಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ತಿಪ್ಪೇಸ್ವಾಮಿ, ಕುರುಬರ ಮಹೇಶ್, ಅಮೀರ್ ಬಾಷ, ವೀರೇಶ್, ರಿಂದೂ, ಹರ್ಷವರ್ಧನ, ಅಜಯ್ ಕುಮಾರ್, ಗಣೇಶ್ ಡಿ.ಎಸ್, ರಾಮಾಂಜನೇಯಲು, ನೂರ್‌ಜಹಾನ್, ಲತೀಫ್, ಶಾರದ, ದಶಗುಣ ಇವರಿಗೆ ಪಿಸಿ ಟಾಬ್ಲೇಟ್ ವಿತರಿಸಲಾಯಿತು.
ಪ್ರೊ.ಬಿ.ನಾಗರಾಜ್, ಡಾ.ಇಸ್ಮಾಯಿಲ್ ಮಕಾಂದರ್, ಪ್ರೊ.ಆರ್.ಮನೋಹರನ್, ಡಾ.ವೀರರಾಘವುಲು, ಡಾ.ಆರ್.ಎಂ.ಶ್ರೀದೇವಿ, ಶೋಭಾರಾಣಿ, ಎಂ.ಎಂ.ಈಶ್ವರ್, ಡಾ.ಅಣ್ಣಪ್ಪಸ್ವಾಮಿ ಎಚ್.ಡಿ, ಪಂಚಾಕ್ಷರಿ, ಪಂಪನಗೌಡ, ಕಲ್ಯಾಣಬಸವ, ಗುರುಬಸಪ್ಪ, ಜಿನ್ನಿನ ಕೊಟ್ರ್ಪ, ಡಾ.ಶಶಿಕಾಂತ, ಐಟಿ ಸಂಚಾಲಕರಾದ ಡಾ.ಹರೀಶ್‌ಗುಜ್ಜಾರ್, ಡಾ.ದುರುಗಪ್ಪ ಟಿ, ಸಿದ್ದೇಶ್, ಡಾ.ಕೆ.ಬಸಪ್ಪ ಸೇರಿದಂತೆ ಅನೇಕ ಪ್ರಾಧ್ಯಾಪಕರು ಹಾಜರಿದ್ದರು.
ಗಣೇಶ್ ಪ್ರಾರ್ಥಿಸಿದರು. ಡಾ.ತಿಪ್ಪೇರುದ್ರ ಸ್ವಾಗತಿಸಿದರು. ಪ್ರೊ.ಸಿ.ದೇವಣ್ಣ ನಿರೂಪಿಸಿದರು. ಡಾ.ಟಿ.ವೀರಭದ್ರ್ಪ ವಂದಿಸಿದರು.