ಶಿಗ್ಗಾವ್

ದೇಶಕ್ಕೆ ಕೀರ್ತಿ ತಂದವರ ಗುರುತಿಸುವ ಕೆಲಸವಾಗಲಿ: ಕೊಶ್ಯಾರಿ

ದೇಶಕ್ಕೆ ಕೀರ್ತಿ ತಂದವರ ಗುರುತಿಸುವ ಕೆಲಸವಾಗಲಿ: ಕೊಶ್ಯಾರಿ

ಶಿಗ್ಗಾವಿ 9: ನಮ್ಮ ದೇಶದಲ್ಲಿ ಪ್ರತಿಭಾವಂತರು, ಸಾಧಕರಿಗೆ ಕೊರತೆ ಇಲ್ಲ. ಇವರನ್ನು ಗುರುತಿಸಿ, ಗೌರವಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ ಸಿಂಗ್ ಕೊಶ್ಯಾರಿ ಹೇಳಿದರು.

ಪುಣೆಯ ಸೂರ್ಯದತ್ತ ಸಮೂಹ ಸಂಸ್ಥೆಗಳು ಆಯೋಜಿಸಿದ 2 ನೇ ಸಂಸ್ಥಾಪನ ದಿನ ಹಾಗೂ 19 ನೇ ವರ್ಷದ ರಾಷ್ಟ್ರೀಯ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಕೋಲ್ಹಾಪುರದ ಕನೇರಿ ಮಠ ಹಾಗೂ ಪುಣೆಯ ಸೊಮೇಶ್ವರವಾಡಿ ಪಾಶಣದಲ್ಲಿ (ಗ್ರಾಮ ಸಂಸ್ಕೃತಿ) ಟಿ.ಬಿ.ಸೊಲಬಕ್ಕನವರ ಮತ್ತು ತಂಡ ನಿರ್ಮಿಸಿರುವ ಉದ್ಯಾನವನಗಳು ಅವರ ಕಲಾ ಶ್ರೀಮಂತಿಕೆಯ ಪ್ರತ್ಯಕ್ಷ ಪರಿಚಯ ನೀಡುತ್ತದೆ. ಇವು ಮಹಾರಾಷ್ಟ್ರದ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿವೆ ಎಂದು ಭಗತ ಸಿಂಗ್ ಕೊಶ್ಯಾರಿಯಾ ತಿಳಿಸಿದರು.

ದೇಶದ ನಾನಾ ರಾಜ್ಯಗಳ 16 ಮಂದಿಗೆ ಸಾಧಕರಿಗೆ ರಾಜ್ಯಪಾಲರು ರಾಷ್ಟ್ರೀಯ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ನಳಂದ ವಿವಿಯ ಕುಲಪತಿ ವಿಜಯ ಭಾಟ್ಕರ್, ಅಹಿಂಸ ವಿಶ್ವ ಭಾರತಿ ಸ್ಥಾಪಕ ಅಧ್ಯಕ್ಷ ಡಾ.ಲೊಕೇಶ ಮುನಿ, ಭಜನ ಮಾಂತ್ರಿಕ ಅನೂಪ ಝಲೋಟ,ಬಾಲಿವುಡ್ ನಟರಾದ ರಾಜಾ ಮುರಾದ್, ರಾಜ್‍ಕಿರಣ್, ಅಜಿಂಕ್ಯ ದೇವ, ಸೂರ್ಯದತ್ತ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಸಂಜಯ್ ಬಿ.ಕೊರ್ಡಿಯಾ, ಉಪಾಧ್ಯಕ್ಷೆ ಸುಷ್ಮಾ ಎಸ್. ಕೊರ್ಡಿಯಾ ಹಾಗೂ ಕಾರ್ಯನಿರ್ವಾಹಕ ಅಭಿವೃದ್ಧಿ ಅಧಿಕಾರಿ ಸಿದ್ದಾಂತ ಎಸ್. ಕೊರ್ಡಿಯಾ ಉಪಸ್ಥಿತರಿದ್ದರು. ಸಂಸ್ಥೆಯ ಅಧಿಕಾರಿಗಳಾದ ನಯನಾ ಸ್ವಾಗತಿಸಿದರು. ಅಕ್ಷಿತ್ ವಂದಿಸಿದರು. 


ಸುದ್ದಿ ಓದಿ