ಶಿಗ್ಗಾವ್

ಮಕ್ಕಳು ಕಥೆ ಕವನ ಕಾದಂಬರಿ ನಾಟಕ ಓದುವ ಹವ್ಯಾಸ ಬೆಳೆಯಲಿ: ಶರೀಫ

ಮಕ್ಕಳು ಕಥೆ ಕವನ ಕಾದಂಬರಿ ನಾಟಕ ಓದುವ ಹವ್ಯಾಸ ಬೆಳೆಯಲಿ: ಶರೀಫ

ಶಿಗಾವಿ 30: ಮರಾಠಿ ಭಾಷೆಯು ಹೆಚ್ಚು ಪ್ರಚಲಿತದಲಿದ್ದ ಸಂದರ್ಭದಲ್ಲಿ ಕನ್ನಡದ ನಾಟಕಗಳ ಮೂಲಕ ಕನ್ನಡ ನೆಲ ಜಲ ಭಾಷೆಯ ಬಗ್ಗೆ ಜಾಗ್ರತಿ ಮೂಡಿಸಿದವರು ಶಾಂತಕವಿ ಸಕ್ಕರಿ ಬಾಳಾಚಾರ್ಯರು ಎಂದು ಜಾನಪದ ವಿವಿಯ ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಹೇಳಿದರು. 

ನಗರದ ಚನ್ನಪ್ಪ ಕುನ್ನೂರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀ ಚನ್ನಪ್ಪ ಕುನ್ನೂರ ಪದವಿಪೂರ್ವ ಮಹಾವಿದ್ಯಾಲಯ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್‌ (ರಿ) ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ರ್ಕತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಂತಕವಿಗಳ ಬದುಕು ಬರಹ ಎನ್ನುವ ವಿಷಯದ ಕುರಿತು ಮಾತನಾಡಿದ ಅವರು ಸುಮಾರು 175 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕನ್ನಡ ನೆಲ ಜಲ ಭಾಷೆ ಸಾಹಿತ್ಯದ ಕುರಿತು ಸಕ್ಕರಿ ಬಾಳಾಚಾರ್ಯರು ಜಾಗೃತಿಯನ್ನು ಮೂಡಿಸಿದವರು ಹಾವೇರಿ ಜಿಲ್ಲೆಯವರಾದ ಇವರು ಶಿಕ್ಷಕ ವೃತ್ತಿಯ ಜೊತೆಗೆ ಕನ್ನಡ ಬಗ್ಗೆ ಜಾಗ್ರತಿ ಮೂಡಿಸಿದ ಮೊದಲಿಗರು. ಆಧುನಿಕ ಕನ್ನಡದ ಪ್ರಥಮ ನಾಟಕಕಾರ ಸಕ್ಕರಿ ಬಾಳಾಚಾರ್ಯರು ಸಾತೇನಹಳ್ಳಿಯ ಶಾಂತೇಶನ ಕಾವ್ಯನಾಮದೊಂದಿಗೆ ಶಾಂತಕವಿ ಆದವರು ಎಂದರು. 

ನಿವೃತ್ತ ಉಪನ್ಯಾಸಕ  ಲಿಂಗರಾಜ ಕಮ್ಮಾರ ಅವರು ಕನ್ನಡ ರಂಗಭೂಮಿ ಅಂದು ಮತ್ತು ಇಂದು ಎನ್ನುವ ವಿಷಯದ ಕುರಿತು ಮಾತನಾಡಿ ರಂಗಭೂಮಿಯನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿ  ರಂಗ ಎಂದರೆ ಒಬ್ಬ ವ್ಯಕ್ತಿ ಭೂಮಿ ಎಂದರೆ ಒಂದು ಶಕ್ತಿ ವ್ಯಕ್ತಿ ಮತ್ತು ಶಕ್ತಿ ಎರಡು ಸಮ್ಮಿಲಗೊಂಡ ಪದವೇ ರಂಗಭೂಮಿಯಾಗಿದೆ ಈ ಎಲ್ಲ ರಂಗಭೂಮಿಯ ಹುಟ್ಟಿಗೆ ಮೂಲ ಜನಪದ ರಂಗಭೂಮಿಯೆ ಆಗಿದೆ ದೊಡ್ಡಾಟ ಸಣ್ಣಾಟ ರಾಧಾನಾಟ ಪಾರಿಜಾತದಂತಹ ಅನೇಕ ರಂಗಪ್ರಕಾರಗಳು ಆಧುನಿಕ ರಂಗಭೂಮಿಯನ್ನು ವಿಸ್ತಾರಗೊಳಿಸಿದವು ಎಂದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ ಧ್ಯಾಮನಕೊಪ್ಪ, ಖ್ಯಾತ ರಂಗಕರ್ಮಿ ಪ್ರಕಾಶ ಗರುಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಸತೀಶ ಕುಲಕರ್ಣಿ ಮಾತನಾಡಿದರು. 

ಈ ಸಂದಭ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಕೊಟ್ರೇಶ ಮಾಸ್ತರ ಬೆಳಗಲಿ ಹಾಗೂ ಸತೀಶ ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧ್ಯಾರ್ಥಿನಿ ವಿಜಯಲಕ್ಷ್ಮೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಉಪನ್ಯಾಸಕ ಡಾ.ಕೆ.ಎಸ್‌.ಬರ್ಧೇಲಿ ಸ್ವಾಗತಿಸಿದರು, ಗೀತಾ ಸಾಲಮನಿ ವಂದಿಸಿದರು, ಸುಮೀತ್ರಾ ರಾಮಾಪುರಮಠ ಕಾರ್ಯಕ್ರಮ ನಿರೂಪಿಸಿದರು 


ಸುದ್ದಿ ಓದಿ