ಮುಂದಗೋಡ

ಕನ್ನಡ ಪ್ರತಿಯೊಬ್ಬರ ಮನೆಯ ಭಾಷೆಯಾಗಲಿ: ಶಂಕರ ಗೌಡಿ

ಕನ್ನಡ ಪ್ರತಿಯೊಬ್ಬರ ಮನೆಯ ಭಾಷೆಯಾಗಲಿ: ಶಂಕರ ಗೌಡಿ

ಲೋಕದರ್ಶನ ವರದಿ 

ಮುಂಡಗೋಡ:ಕನ್ನಡ ಪ್ರತಿಯೊಬ್ಬರ ಮನೆಯ ಭಾಷೆಯಾಗಲಿ ಕನ್ನಡವನ್ನು ಬಳಸಿ ಭುವನೇಶ್ವರಿ ಮಾತೆಯ ಅನುಗ್ರಹ ಪಡೆದು ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ ಎಂದು ತಹಶೀಲ್ದಾರ ಶಂಕರ ಗೌಡಿ ಹೇಳಿದರು.    

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಾಲಾಜಿ ಮೆಲೋಡೀಸ್ ಮತ್ತು ಮಾಸ್ ಡ್ಯಾನ್ಸ್‌ ಅಕಾಡೆಮಿ ಇವರಿಂದ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೈ ಭಾರತ ಜನನಿಯ ತನುಜಾತೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದೈವಜ್ಞ ಸಮಾಜದ ದುಂದುಭಿ ತಂಡದ ಮಹಿಳೆಯರು ಚಂಡೆ ವಾದ್ಯ ಪ್ರದರ್ಶಿಸಿದರು. ಹಚ್ಚೇವು ಕನ್ನಡದ ದೀಪ, ನಾವಾಡುವ ನುಡಿಯೆ ಕನ್ನಡ ನುಡಿ, ಕರುನಾಡೆ ಕೈಚಾಚಿದೆ ನೋಡೆ, ಕರುನಾಡ ತಾಯಿ, ನಿನ್ನ ಕಂಗಳ ಬಿಸಿಯ ಹನಿಗಳು ಮುಂತಾದ ಗೀತೆಗಳನ್ನು ಕಲಾವಿದರು ಪ್ರಸ್ತುತ ಪಡಿಸಿದರು. ಬೊಂಬೆ ಹೇಳತೈತೆ ಹಾಡಿಗೆ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್‌ಗಳನ್ನು ಹಾಡಿಗೆ ತಕ್ಕಂತೆ ತೂಗಾಡಿ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿದರು.    

ಹುಟ್ಟಿದರೆ ಕನ್ನಡ ನಾಡಲೆ ಹುಟ್ಟಬೇಕು, ಕನ್ನಡವೆ ನಮ್ಮಮ್ಮ, ನಟಸಾರ್ವಭೌಮ, ಓಂ ಶಕ್ತಿ ಜೈ ಶಕ್ತಿ, ಎಲ್ಲಾ ನೀನೆ ತಾಯೆ, ಕಲ್ಲಾದರೆ ನಾನು ಹಾಡುಗಳಿಗೆ ತಂಡದವರು ಹೆಜ್ಜೆ ಹಾಕಿ ರಂಜಿಸಿದರು. ಇದೇ ಸಂದರ್ಭದಲ್ಲಿ ಎತ್ತರ ಜಿಗಿತ ಮತ್ತು ಭರ್ಚಿ ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದ ಬಿನ್ಸಿ ಜೋಸೆಫ್ ಮತ್ತು ತಂಡದ ನಾಯಕ ಸಂತೋಷ ಸಾನು ದಂಪತಿಯನ್ನು ಸನ್ಮಾನಿಸಲಾಯಿತು.  

ಈ ವೇಳೆ ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ರಾಜಾರಾಮ ಉರಣಕರ, ರಮೇಶ ಇಂಗಳೆ, ಎಸ್‌.ಡಿ.ಮುಡೆಣ್ಣವರ, ಚಿದಾನಂದ ಹರಿಜನ, ಸಂಗಪ್ಪ ಕೋಳೂರ, ಎಸ್‌.ಬಿ.ಹೂಗಾರ, ರಾಜು ಸಾನು, ಪಿ.ಇಲಾಂಗೊ, ದೇವೇಂದ್ರ​‍್ಪ ಇಂಗಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ