ಯುಸ್ ಹಾಟರ್್ ಟು ಕನೆಕ್ಟ್ ಘೋಷವಾಕ್ಯದೊಂದಿಗೆ ಹೃದಯ ಕಾಳಜಿ ವಹಿಸೋಣ....
ಹೃದಯ ಎಂಬುದು ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಉಂಟು ಮಾಡುವ ಸ್ನಾಯು ವಿಧದ ಅಂಗ. ಇದು ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ವಯಸ್ಕರಲ್ಲಿ ಹೃದಯ 250 ಗ್ರಾಂ ಮತ್ತು 350 ಗ್ರಾಂ ನಷ್ಟು ದ್ರವ್ಯ ರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗವಾಗಿದೆ.
ಮಾನವ ಹೃದಯದ ಹೊರಗಿನ ಗೋಡೆಯು ಮೂರು ಪದರಗಳಿಂದ ರಚಿಸಲ್ಪಟ್ಟಿದೆ., ಒಳಪದರ, ಸ್ನಾಯುಪದರ ಮತ್ತು ಮೇಲ್ಪದರವು ಹೃದಯದ ಕೋಷ್ಟಗಳು ಮತ್ತು ಕವಾಟಗಳನ್ನು ಆವರಿಸಿದೆ. ಸಾಮಾನ್ಯ ವ್ಯಕ್ತಿಯ ಹೃದಯವು ಐದು ಲೀಟರಿನಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಇಡೀ ದೇಶದಲ್ಲಿ ಅದು ನಿರಂತರವಾಗಿ ಚಲಿಸುತ್ತಿರುತ್ತದೆ. ರಕ್ತವು ಹೃದಯದಿಂದ ಅಪಧಮನಿ ರಕ್ತನಾಳಗಳಿಗೆ ಸಂಚರಿಸಿ ನಂತರ ಲೋಮನಾಳಗಳೆಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿದಮನಿ ಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ. ಸುಮಾರು 60 ಸೆಕೆಂಡುಗಳಲ್ಲಿ ನಡೆದು ಹೋಗುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ತವು ನಮ್ಮ ದೇಹದ ಮೂಳೆಗಳಿಗೆ, ಮಾಂಸಖಂಡಗಳಿಗೆ, ಜೀವಕೋಶಗಳಿಗೆ ಮತ್ತು ಇತರ ಅವಯವಗಳಿಗೆ ರಕ್ತಸಹಿತ ಆಮ್ಲಜನಕದೊಂದಿಗೆ ಸಂಪೂರ್ಣ ಆರೈಕೆಯನ್ನು ನೀಡುತ್ತದೆ.
ಇಷ್ಟೊಂದು ಕಾರ್ಯ ನಿರ್ವಹಿಸುವ ನಮ್ಮ ಹೃದಯಕ್ಕೆ ಇಂದು ವಿಶ್ವ ಹೃದಯ ದಿನದ ಶುಭಾಷಯಗಳು. ಈ ವರ್ಷದ ಯುಸ್ ಹಾಟರ್್ ಟು ಕನೆಕ್ಟ್ ಘೋಷವಾಕ್ಯದೊಂದಿಗೆ ಆಚರಿಸೋಣ. ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನರಿಗೆ ಮೂಡಿಸಲು ಹಲವಾರು ಕಾಯರ್ಾಗಾರಗಳನ್ನು ವಿಶ್ವದಾದ್ಯಂತ ಏರ್ಪಡಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪ28 ಖಜಠಿ 2021ತಿ ಪ್ರಮುಖವಾದುವೆಂದರೆ ವಿಶ್ವ ಮಟ್ಟದಲ್ಲಿ ನಡೆಯುವ ಹೃದಯ ದಿನ. ಪ್ರತಿವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.2000ನೇ ವರ್ಷದಲ್ಲಿ ಪ್ರಾರಂಭವಾದಾಗ ಈ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ ತಿಂಗಳು ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. ಈ ಕ್ರಮ ಸುಮಾರು 2010 ರವರೆಗೂ ಮುಂದುವರೆಯಿತು. 2011 ರಿಂದ ಈ ದಿನವನ್ನು ಕೊನೆಯ ಭಾನುವಾರ ಕಟ್ಟುಪಾಡಿನಿಂದ ಮುಕ್ತಗೊಳಿಸಿ 29 ತಾರೀಕಿಗೆ ನಿಗದಿಗೊಳಿಸಲಾಯಿತು.
ಎಲ್ಲ ವರ್ಗದ ಜನರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಮತ್ತು ಹೃದಯಸ್ತಂಬನ, ಹೃದಯಾಘಾತ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುವುದು. ಇವುಗಳಿಂದ ರಕ್ಷಣೆ ಪಡೆಯಲು ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಜನರಿಗೆ ತಿಳಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಪ್ರತಿವರ್ಷ ಸೆಪ್ಟೆಂಬರ್ 29ರಂದು ನಡೆಯುವ ಈ ಅಭಿಯಾನಕ್ಕೆ ಪ್ರತ್ಯೇಕ ಥೀಮ್ ವಿನ್ಯಾಸಗೊಳಿಸಿ, ಹೃದಯದ ಆರೋಗ್ಯದ ಬಗ್ಗೆ ತಕ್ಷಣಕ್ಕೆ ನೋಡುವವರ ಗಮನ ಸೆಳೆಯುವಂತೆ ಆಕಷರ್ಿಸಲಾಗುತ್ತದೆ.
ವಿಶ್ವದಲ್ಲಿ ಹೃದಯಸಂಬಂಧಿ ತೊಂದರೆಗಳಿಂದ ಸಂಭವಿಸುತ್ತಿರುವ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಗಟ್ಟುವುದು ಇದರ ಉದ್ದೇಶ. ಕೇವಲ ಸಾವನ್ನು ತಡೆಯುವುದು ಮಾತ್ರವಲ್ಲ ಹೃದಯದ ಆರೋಗ್ಯ ಉತ್ತಮಗೊಳಿಸಿ ಆರೋಗ್ಯಕರ ಜೀವನ ನಡೆಸುವುದು ಉದ್ದೇಶದ ಒಂದು ಭಾಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಒಟ್ಟು ಸಾವುಗಳಲ್ಲಿ ಶೇಕಡ 30ರಷ್ಟು ಸಾವುಗಳು ಹೃದಯ ವೈಫಲ್ಯದಿಂದ ಸಂಭವಿಸುತ್ತವೆ. ಈ ವೈಫಲ್ಯಕ್ಕೆ ಪ್ರಮುಖ ಕಾರಣಗಳೆಂದರೆ ಅಧಿಕ ರಕ್ತದೊತ್ತಡ, ಅಧಿಕ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್, ಧೂಮಪಾನದ ಅಭ್ಯಾಸ, ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳು ಇಲ್ಲದಿರುವುದು ಮತ್ತು ಅನಾರೋಗ್ಯಕರ ಆಹಾರಕ್ರಮ ಇರುವುದಾಗಿದೆ. ಈ ದಿನವನ್ನು ವಿಶ್ವ ಹೃದಯವ ಕೂಟ ಸಂಸ್ಥೆ ಪ್ರಾರಂಭಿಸಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹಕಾರ ನೀಡುತ್ತದೆ. ಎರಡು ಸಂಸ್ಥೆಗಳು ವಿಶ್ವಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಭಿಯಾನವನ್ನು ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ. ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಮಾಹಿತಿ ಪಡೆಯಲು ಜನರನ್ನು ಪ್ರೇರೇಪಿಸುತ್ತದೆ. ಈ ದಿನ ನಡೆಯುವ ಕಾರ್ಯಕ್ರಮದಲ್ಲಿ ಹೃದಯದ ಮೇಲೆ ಒತ್ತಡ ಹೇರುವ ಅಭ್ಯಾಸಗಳಾದ ಅತಿಯಾದ ಪ್ರಮಾಣದ ಆಹಾರ ಸೇವನೆ, ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ, ಅನಾರೋಗ್ಯಕರ ಜೀವನ ಕ್ರಮ ಮೊದಲಾದ ಮಾಹಿತಿ ನೀಡಲಾಗುತ್ತದೆ.
ಹಲವಾರು ದೇಶಗಳ ಸಕರ್ಾರಗಳು, ಸಕರ್ಾರೇತರ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತವೆ. ಅಭಿಯಾನದಲ್ಲಿ ಮೋಜಿನ ಆಟಗಳು, ಸಂಗೀತ ಕಛೇರಿಗಳು, ಸಾರ್ವಜನಿಕ ಮಾತುಕತೆಗಳು, ಹೃದಯ ತಪಾಸಣೆ ಶಿಬಿರಗಳು, ಒಟ್ಟಾರೆ ಆರೋಗ್ಯ ತಪಾಸಣೆ ಕ್ರೀಡಾಕೂಟಗಳು, ನಡಿಗೆಗಳು, ವಿಜ್ಞಾನ ವೇದಿಕೆಗಳು, ಫಿಟ್ನೆಸ್ ಸೆಷನಗಳು, ಸ್ಟೇಜ್ ಶೋಗಳು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ವಿರುದ್ಧ ವಿಶ್ವಮಟ್ಟದ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದು ಜನರಿಗೆ ಒಂದು ದೊಡ್ಡ ಅವಕಾಶ ಒದಗಿಸುತ್ತದೆ.
ಇಂದಿನಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಜ್ಞೆ ಮಾಡೋಣ. ಪ್ರತಿದಿನವೂ ನಮ್ಮ ಆರೋಗ್ಯದ ಕಾಳಜಿಗೆ ಸಮಯ ಮೀಸಲಿಡೋಣ. ಪ್ರತಿಯೊಬ್ಬರಿಗೂ ಆರೋಗ್ಯದ ಕಾಳಜಿ ಅತ್ಯಂತ ಮುಖ್ಯವಾದುದು. ಆರೋಗ್ಯವೇ ಭಾಗ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾಪಾಡಿಕೊಳ್ಳೋಣ.
ಸೌಂದರ್ಯ ಕುರಕುರಿ
ಮೊ.807382513