ಮುದ್ದೆಬಿಹಾಲ್

ನೀರನ್ನು ಮಿತವಾಗಿ ಬಳಸೋಣ ಹರಿದು ಹೋಗುವ ನೀರನ್ನು ಭೂಮಿಯಲ್ಲಿ ಇಂಗಿಸೋಣ: ಸಿ.ಎಸ್ ತೆಗ್ಗಿನಮನಿ

ನೀರನ್ನು ಮಿತವಾಗಿ ಬಳಸೋಣ ಹರಿದು ಹೋಗುವ ನೀರನ್ನು ಭೂಮಿಯಲ್ಲಿ ಇಂಗಿಸೋಣ: ಸಿ.ಎಸ್ ತೆಗ್ಗಿನಮನಿ

ಮುದ್ದೇಬಿಹಾಳ 17 : ಇಂದು  ವೇಗವಾಗಿ ಓಡುತ್ತಿರುವ ಜನಸಂಖ್ಯಾನುಗುಣಕ್ಕೆ ಎಲ್ಲದಕ್ಕೂ ನೀರು ಬಳಕೆ ಅತ್ಯವಶ್ಯಕವಾಗಿದ.ೆ ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನೀರನ್ನು ಮಿತವಾಗಿ ಬಳಸಿ ಮಳೆ ಬಂದಾಗ ನೀರು ಸಂಸ್ಕರಣಾ ಘಟಕದಿಂದ ಹಿಡಿದಿಟ್ಟುಕೊಳ್ಳುವ ಮೂಲಕ ವ್ಯರ್ಥ ನೀರು ಹಾಳು ಮಾಡದಂತೆ ಜಾಗೃತರಾಗಬೇಕಿದೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಸರಕಾರಿ ಪ್ರೌಡ ಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜಲದೂತ ಜಾಗೃತಿ ಅಂದೋಲನ ಕಾರ್ಯಕ್ರಮದಡಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಪಾಲಕರು ಸೇರಿ ಜಾಗೃತಿ ಜಾಥಾ ಕಾರ್ಯಕ್ರಮ, ಮಳೆನೀರು ಕೊಯ್ಲು ಮಾದರಿ ಪ್ರಾತ್ಯಕ್ಷಿಕೆ ಏರಿ​‍್ಡಸಿ ಡ್ರಮ್ ಬಾರಿಸುವ ಮೂಲಕ ಜನರಲ್ಲಿ ಜಾಗೃತಿ ಜಾಥಾಗೆ ಚಾಲನೇ ನೀಡಲಾಯಿತು.  

ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ರಿಷಿ ಆನಂದ್ ರವರ ನಿರ್ದೇಶನದ ಮೇರೆಗೆ  ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಸರಕಾರಿ  ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್ ತೆಗ್ಗಿನಮನಿ  ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜಲದೂತ ಜಾಗೃತಿ ಅಂದೋಲನ ಕಾರ್ಯಕ್ರಮದಡಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಪಾಲಕರು ಸೇರಿ ಜಾಗೃತಿ ಜಾಥಾ ಕಾರ್ಯಕ್ರಮ, ಮಳೆನೀರು ಕೊಯ್ಲು ಮಾದರಿ ಪ್ರಾತ್ಯಕ್ಷಿಕೆ ಏರಿ​‍್ಡಸಿ ಡ್ರಮ್ ಬಾರಿಸುವ ಮೂಲಕ ಜನರಲ್ಲಿ ಜಾಗೃತಿ ಜಾಥಾಗೆ ಚಾಲನೇ ನೀಡಿ ಅವರು ಮಾತನಾಡಿದರು.  

ನೀರಿನ ಮಹತ್ವ ಹಾಗೂ ನೀರು ಸಂಗ್ರಹ, ನೀರು ಅತ್ಯಮೂಲ್ಯ ಸಂಪತ್ತು,  ನೀರು ಪೋಲು ಮಾಡದಿರಿ, ಹನಿ ಹನಿ ನೀರು ಭೂಮಿಯೊಳಗೆ ಇಂಗುವಂತೆ ಮಾಡಬೇಕಾದ ಕ್ರಮಗಳ ಬಗೆಗೆ ತಿಳಿವಳಿಕೆ ನೀಡಿದರು. ಜೊತೆಗೆ ಶಿಕ್ಷಣದ ಮಹತ್ವ ಹಾಗೂ ಹೇಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕು? ಜನ್ಮಕೊಟ್ಟ ತಂದೆ, ತಾಯಿ ಹಾಗೂ ಗುರುಗಳಿಗೆ ಗೌರವ ಕೊಟ್ಟು ಉತ್ತಮ ಶಿಕ್ಷಣವನ್ನು ನಿರಂತರ ಶ್ರದ್ದೆಯಿಂದ ಅಧ್ಯಯನ ಮಾಡಿ ಕಲಿಯಬೇಕು. ಪ್ರತಿ ವ್ಯಕ್ತಿಯು ಉತ್ತಮ ಶಿಕ್ಷಣ ಪಡೆದರೆ ಸಾವಿರ ಸಾವಿರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬಹುದೆಂದು ತಿಳಿಸಿದರು. ಪ್ರತಿಯೊಬ್ಬರು ನೀರಿನ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಮಳೆ ಬಂದಾಗ ತಮ್ಮ ತಮ್ಮ ಮನೆ ಮುಂದೆ ಇಂಗು ಗುಂಡಿ ತೆರೆದು ನೀರು ಪೋಲು ಆಗದಂತೆ  ಪ್ರತಿ ನೀರಿನ ಹನಿಯು  ಭೂಮಿಯನ್ನು ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. 

ಈ ಜಾಥಾದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸಾವಿತ್ರಿ ಸಾಸನೂರ, ಎಸ್‌.ಡಿ.ಎಂ.ಸಿ ಅಧ್ಯಕ್ಷ ರಮೇಶ ಸಾಸನೂರ, ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಾದ ಶಿವಾನಂದ ಕೂಡಗಿ, ಎಲ್‌.ಎನ್ ಭೋವಿ, ಖಾಜಾ ಬಂದೇನಮಾಜ ಪಟೇಲ, ವಿ.ಬಿ ಕೋರಿ, ವಿವಿಧ ಮುಖಂಡರು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ