ಬಳ್ಳಾರಿ

ಗ್ರಾಮೀಣ ಭಾಗದ ಪ್ರತಿಭೆಗೆ ಮೆಚ್ಚುಗೆ ಇರಲಿ: ವೀಣಾ ಮಹಾಂತೇಶ್

ಗ್ರಾಮೀಣ ಭಾಗದ ಪ್ರತಿಭೆಗೆ ಮೆಚ್ಚುಗೆ ಇರಲಿ: ವೀಣಾ ಮಹಾಂತೇಶ್

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 17: ಜಿಲ್ಲೆಯಲ್ಲಿ ಕಲಾ ರಸಿಕರ ಜೊತೆ ಪ್ರತಿಭಾನ್ವಿತ ಕಲಾವಿದರಿಗೆನೂ ಕೊರತೆ ಇಲ್ಲ,  ಗ್ರಾಮೀಣ ಭಾಗದ ಕಲಾವಿದರಿಗೆ ಮೆಚ್ಚುಗೆ ಇರಲಿ ಎಂದು ಹರಪನಹಳ್ಳಿ ಕ್ಷೇತ್ರದ ಜನನಾಯಕಿ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು. 


ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ನೀಲಕಂಠೇಶ್ವರ ದೇವಸ್ಥಾನದ ಅವರಣದಲ್ಲಿ ಮಂಜು ಪೊಡಕ್ಷನ್‌ನ  ಕರಿಯ ಐ ಲವ್ ಯೂ ಚಿತ್ರೀಕರಣಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು. ನಮ್ಮ ತಾತ ಸೇರಿದಂತೆ ತಂದೆಯೂ ಕಲಾವಿದರೂ ಜೊತೆ ಕಲೆಯನ್ನು ಪ್ರತಿಸುವವರು ಆಗಿದ್ದರು. ಗ್ರಾಮೀಣ ಭಾಗದ ಸೊಗಡನ್ನು ಅಭಿಮನಿಗಳ ಮುಂದಿಡುವ ಸಾಹಸಕ್ಕೆ ಕೈ ಹಾಕಿದ ಈ ಪ್ರತಿಭೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು,ಕಲೆ ಎಲ್ಲರಲ್ಲೂ ಅನಾವರಣಗೊಳ್ಳದು ಅದು ವಿಶಿಷ್ಟ ಕೌಶಲವಾಗಿದೆ, ಕರೋನ ಮಹಾಮಾರಿಯಿಂದ ಚಿತ್ರ ಮಂದಿರಗಳು, ಕಲಾವಿದರೂ ಇಂದು ಕಷ್ಟ ಅನುಭವಿಸುತ್ತಿದ್ದಾರೆ ಇಂತಹ ಕ್ಲಿಷ್ಟಕರ ಪರಸ್ಥಿತಿಯಲ್ಲಿ ಮಂಜು ಅವರು ನಿರ್ಮಿಸುತ್ತಿರುವ ಕರಿಯಾ ಐ ಲವ್ ಯೂ ಚಿತ್ರವನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಿ ಕನ್ನಡವನ್ನು ಕಂಗೊಳಿಸುವಂತೆ ಮಾಡಬೇಕೆಂದರು. 


ಹಾಸ್ಯ ಕಲಾವಿದ ಬಿರಾದಾರ್ ಮಾತನಾಡಿ ಪ್ರತಿಯೊಬ್ಬರೂ ಚಲನೆ ಚಿತ್ರಗಳನ್ನು ಅಡ್ಡದಾರಿಯಲ್ಲಿ ನೋಡದೆ ಚಿತ್ರ ಮಂದಿರಗಳಲ್ಲಿ ನೋಡೊದರೆ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹಿಸುವುದರ ಜೊತೆ ಚಿತ್ರದ ಹಿಂದಿರುವ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬಹುದಾಗಿದೆ, ಮಂಜು ಅವರಿಗೆ ತಮ್ಮ ಮನೆಯ ಪ್ರತಿಯೊಬ್ಬ ಸದಸ್ಯರು ಅವರಿಗೆ ಮಾರ್ಗದರ್ಶಕರಗಿದ್ದಾರೆ ಅವರ ತಾಯಿ ಅವರಿಗೆ ಗುರುವಿನಂತೆ ಸದಾ ಜೊತೆಯಿದ್ದು ಆಶಿರ್ವದಿಸಿರುದು ಕಂಡರೆ ಸಾಕ್ಷಾತ್ ದೇವರೆ ಅವರ ಜೊತೆಗಿದ್ದರೆ ಅನ್ನು ಅನೋಭಾವನೆ ಇದ್ದು ಚಿತ್ರವನ್ನು ನೋಡಿ ಪ್ರೊತ್ಸಾಹಿಸುವಂತೆ ತಿಳಿಸಿದರು. 

ನಟ, ನಿರ್ಮಾಪಕ ಮಂಜು ಬಳ್ಳಾರಿ ಮಾತನಾಡಿ ಸತೀಶ್ ಕೆಂಬಾವಿ ಮಠ್ ಅರ​‍್ಿಸುವ ಈ ಚಿತ್ರವು ಜಿಲ್ಲೆಯ ಹಡಗಲಿ,ಹಗರಿಬೊಮ್ಮನಹಳ್ಳಿ,ಸಂಡೂರು ಸೇರಿದಂತೆ ಬಳ್ಳಾರಿ ,ನೂತನ ವಿಜಯನಗರ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗುವುದು, ಹಳ್ಳಿ ಸೊಗಡು ಸೇರಿದಂತೆ ಇನ್ನಿತರೆ ವಿಷಯಗಳನ್ನೊಳಗೊಂಡ ಪ್ರಸ್ತುತ ಕಾಲಕ್ಕೆ ತಕ್ಕಂತೆ ಚಿತ್ರವು ನಿರ್ಮಾಣವಾಗುತ್ತಿದ್ದು , ಸಮಾಜಕ್ಕೆ ಒಂದು ಅರ್ಥಗರ್ಭಿತ ವಿಷಯವನ್ನು ಚಿತ್ರದಲ್ಲಿ ನೀಡಲಾಗಿದೆ, ಪ್ರತಿಯೊಬ್ಬರೂ ಚಿತ್ರ ಮಂದಿರಗಳಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸುವಂತೆ ಮನವಿ ಮಾಡಿದರು. 

ಈ ಸಂಧರ್ಭದಲ್ಲಿ ಕಲಾವಿದರಾದ ಶಕುಂತಲಾ, ಗೀರೀಶ ಜತ್ತಿ, ಭವ್ಯ, ಹರಿಣಿ, ಅಂಜಿನಪ್ಪ, ಆಶಾ ಸುಜ್ಯ, ಚಂದ್ರ ಪ್ರಭ, ದೀಪ, ನರಸಿಂಹರಾವ್, ರೋಹಿಣಿ, ಸಂಜು ಬಸಯ್ಯ, ಚಕ್ರವರ್ತಿ, ಮಹೇಶ್ ಜಗಪತ್, ಸೋಮು ಹಂಪಾಪಟ್ಟಣ,ಚಂದ್ರಿಕಾ ಗೌಡ, ಮುಖಂಡರಾದ ರಾಜು ಪಟೀಲ್, ಮಾರುತಿ ಮುಟ್ಟಿಕೋಟಿ, ನಾಗರಜ ಹರಿಹರ, ಶಿವು ಗದಗ, ರವಿ ಹುಬ್ಬಳ್ಳಿ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ