ಮುಂದಗೋಡ

ಕನ್ನಡ ಉಳಿಸಿ ಬೆಳೆಸೋಣ : ಸರೋಜಾ

ಕನ್ನಡ ಉಳಿಸಿ ಬೆಳೆಸೋಣ : ಸರೋಜಾ

ಲೋಕದರ್ಶನ ವರದಿ 

ಮುಂಡಗೋಡ:ನೆಲ-ಜಲಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಬೇಕಾಗಿದೆ  ಎಂದು ತಾಲೂಕಾ ರೋಟರಿ ಕ್ಲಬ್‌ನ ಅಂಗ ಸಂಸ್ಥೆಯಾದ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸರೋಜಾ ಛಬ್ಬಿ ಹೇಳಿದರು. 

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ತಾಲೂಕಿನ ಬ್ಯಾನಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ನಾಡಿನ ಕುರಿತು ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಬೆಳೆಸೋಣ ಎಂದರು. ನಿಕಟಪೂರ್ವ ಅಧ್ಯಕ್ಷೆ ಶಶಿರೇಖಾ ಬೈಜು ಮಾತನಾಡಿ ಇಂದಿನ ಮಕ್ಕಳಲ್ಲಿ ಮಾತೃ ಭಾಷೆ ಬಗ್ಗೆ ಆಸಕ್ತಿಯ ಕೊರತೆ ಎದ್ದು ಕಾಣುತ್ತಾ ಇದೆ. ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದರು. ಹಿಂದುಳಿದ ಗೌಳಿ ಜನಾಂಗವಿರುವ ಬ್ಯಾನಳ್ಳಿ ಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ನೀಡಿ ಸಿಹಿ ವಿತರಣೆ ಮಾಡಲಾಯಿತು.  ಈ ಸಂದರ್ಭದಲ್ಲಿ ಕಾರ್ಯದರ್ಶಿ ದಿವ್ಯಾ ರಾವ್, ಆಯ್‌ಎಸ್‌ಒ ಸಿಂಧು ಥಾಮಸ್, ಜಯಶ್ರೀ ಕೊಳುರ, ಹರಿಣಿ ಪ್ರಸಾದ, ಕವಿತಾ ಮಾತ್ರೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಸಂತಕುಮಾರ ರಾಠೋಡ ಸ್ವಾಗತಿಸಿದರು. ಸಹಶಿಕ್ಷಕ ಮಂಜುನಾಥ ಕಬನೂರ ವಂದಿಸಿದರು. 


ಸುದ್ದಿ ಓದಿ