ಮುಂದಗೋಡ

ಸಂವಿಧಾನವನ್ನು ಉಳಿಸಿ ಬೆಳೆಸೋಣ: ಎಸ್‌.ಫಕೀರಪ್ಪ

ಸಂವಿಧಾನವನ್ನು ಉಳಿಸಿ ಬೆಳೆಸೋಣ: ಎಸ್‌.ಫಕೀರಪ್ಪ

ಮುಂಡಗೋಡ:ಸಂವಿಧಾನ ಯಾವ ಧರ್ಮಕ್ಕೂ ಅನ್ಯಾಯ ಮಾಡಿಲ್ಲ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವ ಕುರಿತು ಸಂವಿಧಾನದಲ್ಲಿದೆ ಸಂವಿಧಾನವನ್ನು ಉಳಿಸೋಣ ಬೆಳೆಸೋಣ ಎಂದು ಆದಿಜಾಂಭವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಫಕೀರಪ್ಪ ಹೇಳಿದರು. 

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಪರೀವೀಕ್ಷಣಾ ಮಂದಿರದಲ್ಲಿ ಎಸ್‌.ಫಕೀರ​‍್ಪ ಅಭಿಮಾನಿ ಗೆಳೆಯರ ಬಳಗದಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪಿಯುಸಿವರೆಗೆ ವ್ಯಾಸಂಗ ಮುಗಿಸಿ ಸಮಾಜ ಸೇವೆಯಲ್ಲಿ ತೊಡಗಿದೆನು. ಮುಂಡಗೋಡದಲ್ಲಿ ಪ್ರಥಮ ಬಾರಿಗೆ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದೆನು. ಅದರದೆ ಆದ ಅಧಿಕಾರ ವ್ಯಾಪ್ತಿಯನ್ನು ನಿಭಾಯಿಸಲು ಜಿಲ್ಲೆಯಲ್ಲಿಯೂ ಮೊದಲ ಬಾರಿ ಸಂಘಟನೆ ಮಾಡಿ ಪ್ರತಿಯೊಂದು ಮನೆಗೂ ತಲುಪಿಸಲಾಯಿತು. ಎಲ್ಲ ಜಾತಿಯವರೂ ಸಹಕಾರ ನೀಡಿದರು. ಅವರ ಸಮಸ್ಯೆಗಳಿಗೂ ಸ್ಪಂದಿಸಲಾಯಿತು. ದಬ್ಬಾಳಿಕೆಯ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟವನ್ನು ಕೂಡ ನಡೆಸಲಾಯಿತು. ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವ ಸಿದ್ಧಾಂತ ದಲಿತ ಸಂಘರ್ಷ ಸಮಿತಿಯದಾಗಿದೆ. ಸಮಿತಿಯ ಅಸ್ತಿತ್ವಕ್ಕೆ ಮುಂದೆಯೂ ಇದೇ ರೀತಿಯಾಗಿ ಎಲ್ಲರ ಸಹಕಾರ ಅಗತ್ಯ. ಜೊತೆಗೆ ಇತರೆ ಸಂಘಟನೆಗಳನ್ನೂ ಗೌರವಿಸೋಣ ಎಂದರು.   

ಅಪ್ಪಣ್ಣ ಕಲಾಲ ಮಾತನಾಡಿ ಇಡಿ ಜಿಲ್ಲೆಗೇ ಸೀಮಿತವಾಗಿ ಅಧಿಕಾರೇತರ ಹುದ್ದೆಯಿಂದ ಕೆಲಸ ಮಾಡಿ ಈಗ ರಾಜ್ಯಮಟ್ಟದ ಹುದ್ದೆಗೆ ಎಸ್‌.ಫಕೀರ​‍್ಪ ಅವರು ಆಯ್ಕೆಯಾಗಿದ್ದಾರೆ ಎಂದರು. ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ ಸಾಲು ಮರದ ತಿಮ್ಮಕ್ಕನಂತೆ ನೆಟ್ಟ ಚಿಕ್ಕ ಸಸಿ ಈಗ ಬೆಳೆದು ಹೆಮ್ಮರವಾಗಿ ನಿಂತು ನೆರಳಾಗಿದ್ದಾರೆ ಎಂದರು. ನರಸಿಂಹಮೂರ್ತಿ ಮಾತನಾಡಿ ತಂದೆ-ತಾಯಿಯ ಮತ್ತು ದೇವರ ಆಶೀರ್ವಾದ ಅವರ ಮೇಲಿದೆ. ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಅವರ ಕೀರ್ತಿ ಮತ್ತಷ್ಟು ಹೆಚ್ಚಲಿ ಎಂದರು. ತಾಲೂಕು ಸಂಚಾಲಕ ಬಸವರಾಜ ಸಂಗಮೇಶ್ವರ ಮಾತನಾಡಿ ಸಮಾಜಕ್ಕೆ ಅವರ ಅವಶ್ಯಕತೆ ಇದೆ. ಅವರೊಂದಿಗೆ ಹೊಂದಾಣಿಕೆಯಿಂದ ಸಾಗೋಣ. ಪರೋಪಕಾರಿಯಾದ ಅವರು ಸ್ವಾರ್ಥ ಬದುಕು ನಡೆಸಲಿಲ್ಲ. ನಾನು ಈ ಮಟ್ಟಕ್ಕೆ ಬೆಳೆಯಲು ಎಸ್‌.ಫಕೀರ​‍್ಪನವರೇ ಕಾರಣ ಎಂದು ಭಾವೋದ್ವೇಗದಿಂದ ಹೇಳಿದರು.   

ಇದೇ ಸಂದರ್ಭದಲ್ಲಿ ಎಸ್‌.ಫಕೀರ​‍್ಪ ಅವರನ್ನು ಸನ್ಮಾನಿಸಲಾಯಿತು.     

ಈ ವೇಳೆ ಬಸವರಾಜ ಹಳ್ಳೆಮ್ಮನವರ, ಹುಲಗಪ್ಪ ಭೋವಿ, ಸುರೇಶ ಕೆರಿಹೊಲದವರ, ವಾಸು ದಾವಣಗೇರಿ, ಅಶೋಕ ಗಾಣಿಗೇರ, ಎಮ್‌.ಎಮ್‌.ಅಂಟಾಳ, ಬಿ.ಎಮ್‌.ಮಡ್ಲಿ, ನೂರ್ ಬೇಗ್, ಜಿ.ಟಿ.ನಾಯ್ಕ, ಎಮ್‌.ಕೆ.ಕೊಂಡೋಜಿ ಹಾಗೂ ಮುಂತಾದವರಿದ್ದರು. ಶಿಕ್ಷಕ ಎಸ್‌.ಡಿ.ಮುಡೆಣ್ಣವರ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ