ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡೋಣ: ಸಿದ್ದಾರೂಢ
ಶಾಲಾ ಪ್ರಾರಂಭೋತ್ಸವ
ಮುಂಡಗೋಡ: ಶಾಲಾ ಪ್ರಾರಂಭೋತ್ಸವದ ದಿನವಾದ ಸೋಮವಾರ ಮುಂಡಗೋಡ ಪಟ್ಟಣದ ಕೆ.ಎಚ್.ಬಿ. ಕಾಲನಿಯಲ್ಲಿರುವ ರೋಟರಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಹೂವು ನೀಡಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕ ಸಿದ್ದಾರೂಢ ಅಂಗಡಿ ಸುದೀರ್ಘ ರಜಾ ಅವಧಿ ಮುಗಿದು ಶಾಲೆ ಆರಂಭವಾಗಿದೆ. ಪ್ರಾರಂಭೋತ್ಸವದ ದಿನದಂದು ಸುಮಾರು ಶೇ.50ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಇಂದಿನಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಿದೆ. ನಮ್ಮ ಶಾಲೆಗಳಲ್ಲಿಯೂ ಅದರ ಭಾಗವಾಗಿ ಸೇತುಬಂಧ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ಎಲ್ಲ ತರಗತಿಗಳು ಆರಂಭವಾಗಿವೆ. ಮಕ್ಕಳು ಶಾಲೆಗೆ ಗೈರು ಆದರೆ ಕಲಿಯುವ ವೇಗ ಕಡಿಮೆಯಾಗುತ್ತದೆ. ತಾಲೂಕಿನ ಎಲ್ಲ ಪಾಲಕರು ನಾಳೆಯಿಂದ ತಮ್ಮ ಮಕ್ಕಳೂ ಶಾಲೆಗೆ ಬರುವಂತೆ ಜವಾಬ್ದಾರಿ ವಹಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡೋಣ. ಮಕ್ಕಳು ಮತ್ತು ಪಾಲಕರಿಗೆ ವಂದನೆ ಸಲ್ಲಿಸುತ್ತೇನೆ ಎಂದರು.
ಮುಖ್ಯ ಶಿಕ್ಷಕಿ ಸಿಂಧು ನಾಯರ್ ಮಾತನಾಡಿ ಶಾಲಾ ಪ್ರಾರಂಭೋತ್ಸವದ ದಿನದಂದು ಶಾಲೆಯ ಎಲ್ಲ ಮಕ್ಕಳನ್ನು ಆದರದಿಂದ ಸ್ವಾಗತಿಸುತ್ತೇನೆ. ಇಂದು ಶಾಲೆಗೆ ಬಾರದ ಎಲ್ಲ ಮಕ್ಕಳು ಶಾಲೆಗೆ ಬರಬೇಕು. ತಪ್ಪದೆ ತರಗತಿಗಳಿಗೆ ಹಾಜರಾಗಬೇಕು. ಈ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಮುಗಿಸೋಣ ಎಂದರು.
ಈ ವೇಳೆ ಶಿಕ್ಷಕರಾದ ಶಹಜಹಾನ್ ದೊಡ್ಡಮನಿ, ಆರ್.ಎಸ್.ಸೋಮನಗೌಡರ, ಮಧುಕರ ನಾಯಕ, ಗೀರೀಶ ಕುಲಕರ್ಣಿ, ಬಾಳುಸಾಬ ನದಾಫ್, ಕಿರಣ ರಾವ್, ದೀಪಾ ಚೌಗಲೆ, ರೋಹಿಣಿ ಕಾಮತ, ರೂಪಲತಾ ಬಿ.ಪಿ., ಸುಮತಿ ಕೆ., ಪಿ.ಸುಜಾ, ಸ್ವಾತಿ ಜನ್ನು, ನಾಗರಾಜ ನಾಯ್ಕ, ಸುನಿತಾ ಆಚಾರ್ಯ, ಮಂಜುನಾಥ ಎ.ಜಿ., ಪ್ರವೀಣ ಮಡಿವಾಳರ, ಪ್ರಮೋದ ಮಿಠಾಯಿಗಾರ, ಬೀಬಿಜಾನ ಹಿರೇಹಳ್ಳಿ, ಸಿಬ್ಬಂದಿ ಶಾಲಿನಿ ಮದಭಾವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.