ವಂಚನೆ ಯತ್ನ ಪ್ರಕರಣಕ್ಕೆ ಅಂತ್ಯ ಹಾಡೋಣ : ನಟ ದರ್ಶನ್
ಬೆಂಗಳೂರು, ಜುಲೈ 13: ಇಪ್ಪತ್ತೈದು ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಅಂತ್ಯ ಹಾಡಲು ನಟ ದರ್ಶನ್ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಸುದ್ದಿಗಾರರೊಡನೆ ಮಾತನಾಡಿ, ಉಮಾಪತಿಯವರು ನಮ್ಮ ನಿರ್ಮಾಪಕರು. ಯಾವುದೇ ಕಾರಣಕ್ಕೂ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಯಾರೂ ಅರೆಸ್ಟ್ ಆಗಲ್ಲ. ಇದು ನಿಲ್ಲುವಂತಹ ಕೇಸ್ ಅಲ್ಲ. ಹೀಗಾಗಿ ಇಲ್ಲಿಗೇ ಅಂತ್ಯಗೊಳಿಸುವುದು ಒಳ್ಳೆಯದು ಎಂದಿದ್ದಾರೆ.
ಅರುಣಾಕುಮಾರಿಯವರ ಹೇಳಿಕೆಯನ್ನು ಕೇಳಿದ್ದೇನೆ. ಆದರೆ ಉಮಾಪತಿಯವರು ಆಕೆಯನ್ನು ಯಾವ ವಿಷಯಕ್ಕೆ ಬಳಸಿಕೊಂಡರು ತಿಳಿದಿಲ್ಲ. ಇನ್ನು ಯಾವುದೇ ವಿಷಯವನ್ನು ಉಮಾಪತಿಯವರೊಡನೆ ಮಾತನಾಡಿಕೊಳ್ಳುವೆ ಎಂದು ಹೇಳಿದ್ದಾರೆ.
ಪ್ರಕರಣದ ಸುತ್ತಲೂ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಸ್ನೇಹಿತರ ಹೆಸರೇ ಕೇಳಿಬರುತ್ತಿದೆ. ಮತ್ತೊಂದೆಡೆ ಉಮಾಪತಿಯವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಮಾತುಕತೆ ನಡೆಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ನಟ ದರ್ಶನ್ ನಿರ್ಧರಿಸಿದ್ದಾರೆ.