ಮುಂದಗೋಡ

ಹಾರವಳ್ಳಿಯಲ್ಲಿ ಚಿರತೆ ಮೃತ

ಹಾರವಳ್ಳಿಯಲ್ಲಿ ಚಿರತೆ ಮೃತ

ಮುಂಡಗೋಡ 27 : ಮುಂಡಗೋಡ  ತಾಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯ ಹಾರವಳ್ಳಿ ಅರಣ್ಯ ಪ್ರದೇಶದಲ್ಲಿ.ಮೃತಪಟ್ಟ  ಚಿರತೆ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಚಿರತೆ ಮೃತಪಟ್ಟಿರಬಹು ಎಂದು ಶಂಂಕಿಸಲಾಗಿದೆ. ಅನಾರೋಗ್ಯದಿಂದ ಮೃತಪಟ್ಟಿರಬಹುದು’ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಹೇಳಿದರು. ಸರ್ಕಾರದ ನಿಯಮನುಸಾರವಾಗಿ ಚಿರತೆಯ ಅಂತ್ಯಸಂಸ್ಕಾರಕ್ಕೆ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ ಹಾಗೂ ಕಾತೂರ ವಲಯ ಅರಣ್ಯ ಅಧಿಕಾರಿ ಮಂಜುನಾಥ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. 


ಸುದ್ದಿ ಓದಿ