ಮುಂದಗೋಡ

ಕಬ್ಬಿನ ಗದ್ದೆಯಲ್ಲಿ ಮರಿ ಹಾಕಿದ ಚಿರತೆ: ರೈತರು ಕಂಗಾಲು

ಕಬ್ಬಿನ ಗದ್ದೆಯಲ್ಲಿ ಮರಿ ಹಾಕಿದ ಚಿರತೆ: ರೈತರು ಕಂಗಾಲು

ಮುಂಡಗೋಡ 19: ತಾಲೂಕಿನ ಹುಲಿಹೊಂಡ ಗ್ರಾಮದ ಹತ್ತಿರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಭಯದಿಂದ ಕಬ್ಬು ಕಟಾವು ಮಾಡದೇ ಮರಳಿದ ಘಟನೆ ಬೆಳಕಿಗೆ ಬಂದಿದೆ.  

ಯಾವುದೇ ಪ್ರಾಣಿಗಳ ಮರಿಗಳಿಗೆ ಜನ್ಮನೀಡಿದಾಗ ಮಕ್ಕಳ ಹತ್ತಿರ ಯಾರಾದರೂ ಸುಳಿದರೆ ಮಕ್ಕಳಿಗೆ ಏನಾದರೂ ಅನಾಹುತ ಮಾಡುತ್ತಾರೆಂದು ಕೋಪದ್ರಿಕ್ತವಾಗಿ ಮರಿಗಳ ಹತ್ತಿರ ಬಂದವರ ಮೇಲೆ ಎರಗುತ್ತವೆ ಅದರಲ್ಲೂ ಕ್ರೂರ ಪ್ರಾಣಿ ಮಕ್ಕಳಿಗೆ ಜನ್ಮನೀಡಿದಾಗ ಮತ್ತಷ್ಟು ಕ್ರೂರವಾಗಿ ವರ್ತಿಸುತ್ತದೆ. ಈಗ ನಮಗೆ ನಮ್ಮ ಕೃಷಿ ಚಟುವಟಿಕೆಗಳಿಗೆ ತೆರಳಲು ತುಂಬಾ ಭಯವಾಗುತ್ತದೆ. ಇಲಾಖೆಯವರು ಈ ಕುರಿತು ಮುತುವರ್ಜಿ ವಹಿಸಿ ಚಿರತೆಯನ್ನು ಸ್ಥಳಾಂತರ ಮಾಡಿ ನಮ್ಮ ಪ್ರಾಣ ರಕ್ಷಣೆಗೆ ಮುಂದಾಗಲಿ ಎಂದು ಇಲಾಖೆಯವರ ಹತ್ತಿರ ಕಳಕಳಿಯಿಂದ ಕೇಳುತ್ತಿದ್ದೇನೆ.  

ಇಲಾಖೆಯವರಿಗೆ ಸ್ವಲ್ಪವಾದರೂ ನಮ್ಮ ಜೀವಗಳ ಕುರಿತು ಕಾಳಜಿ ಇರುತ್ತಿದ್ದರೆ ಚಿರತೆಯನ್ನು ಯಾವೊತ್ತೊ ಸ್ಥಳಾಂತರ ಮಾಡುತ್ತಿತ್ತು ಐದಾರು ದಿನಗಳವಾದರೂ ಸುರಕ್ಷತಾ ಕ್ರಮಗಳನ್ನು ನಮಗೆಲ್ಲ ಅನುಸರಿಸಲು ತಿಳಿಸದೇ ಹಾಗೂ ಚಿರತೆಯನ್ನು ಸ್ಥಳಾಂತರ ಮಾಡದೇ ಇರುವುದು ಅರಣ್ಯ ಇಲಾಖೆಯವರ ಕಾರ್ಯಕ್ಷಮತೆ ಎತ್ತಿ ತೋರಿಸುತ್ತದೆ 


ಸುದ್ದಿ ಓದಿ