ಬಳ್ಳಾರಿ

ಸುಸೂತ್ರ ಚುನಾವಣೆಯಲ್ಲಿ ಮೈಕ್ರೋ ಅಬ್ಸರ್ವರ್‌ಗಳ ಪಾತ್ರ ಪ್ರಮುಖ: ಡಾ. ರಾಮ್ ಪ್ರಸಾತ್ ಮನೋಹರ್

ಸುಸೂತ್ರ ಚುನಾವಣೆಯಲ್ಲಿ ಮೈಕ್ರೋ ಅಬ್ಸರ್ವರ್‌ಗಳ ಪಾತ್ರ ಪ್ರಮುಖ: ಡಾ. ರಾಮ್ ಪ್ರಸಾತ್ ಮನೋಹರ್

ವಿಧಾನಪರಿಷತ್ ಚುನಾವಣೆ: ಮೈಕ್ರೋ ಅಬ್ಸರ್ವರ್ ಗಳಿಗೆ ಚುನಾವಣಾ ತರಬೇತಿ 

ಬಳ್ಳಾರಿ 07: ಕರ್ನಾಟಕ ವಿಧಾನಪರಿಷತ್ ನ ಚುನಾವಣೆಗೆ ಇದೇ 10ರಂದು ಮತದಾನ ನಡೆಯಲಿದ್ದು, ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ನೀಡಲಾದ ಪ್ರಮುಖ ಸೂಚನೆಗಳ?ನು ಅರ್ಥೈಸಿಕೊಂಡು ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮತ್ತು ಲೋಪದೋಷಗಳಿಗೆ ಅಸ್ಪದ ನೀಡದಂತೆ ಚುನಾವಣಾ ಕಾರ್ಯ ನಡೆಸಬೇಕು ಎಂದು ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು. 

ಕರ್ನಾಟಕ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಮಂಗಳವಾರ ಮೈಕ್ರೋ ಅಬ್ಸರ್ವರ್ ಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಚುನಾವಣೆ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮೈಕ್ರೋ ಅಬ್ಸರ್ವರ್ ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು. 

ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಿ ಎಂದು ಹೇಳಿದ ಅವರು ವಿಧಾನಪರಿಷತ್ ಚುನಾವಣೆಯು ವಿಧಾನಸಭಾ ಚುನಾವಣೆಗಿಂತ ಅತ್ಯಂತ ಭಿನ್ನವಾದುದು. ಇಲ್ಲಿ ಪ್ರಾಶಸ್ತ-್ಯದ ಮತಗಳಿರುತ್ತವೆ. ಈ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಯಾವುದೇ ಸಮಸ್ಯೆಗಳಾಗದಂತೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ನಡೆಸುವ ಹೊಣೆಗಾರಿಕೆ ತಮ್ಮೆಲ್ಲರ ಮೇಲಿದೆ ಎಂದರು. 

ಮೈಕ್ರೋ ಅಬ್ಸರ್ವರ್ ಗಳು ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಅವರು ಚುನಾವಣಾ ಸಂಬಂಧಿಸಿದ ಇನ್ನೀತರ ನೀತಿ ನಿಯಮಗಳ ಕುರಿತು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಪಿ.ಆರ್‌.ಒ ಮತ್ತು ಎ.ಪಿ.ಆರ್‌.ಒ ಗಳಿಗೆ ತಿಳಿಸಿದರು. 

ಚುನಾವಣಾ ಪ್ರಕ್ರಿಯೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಚುನಾವಣಾ ಸಿಬ್ಬಂದಿಗಳಿಗೆ ವಿವರಿಸಿದರು. 

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ ಮೈಕ್ರೋ ಅಬ್ಸರ್ವರ್ ಗಳ ಪಾತ್ರ ಕುರಿತು ವಿವರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಸಿಬ್ಬಂದಿ ಮತ್ತು ಚುನಾವಣೆಗೆ ನಿಯೋಜಿತರಾದ ಮೈಕ್ರೋ ಅಬ್ಸರ್ವರ್ ಗಳು ಇದ್ದರು. 


ಸುದ್ದಿ ಓದಿ