ಹಿರಿಯ ನಾಗರಿಕರಿಗೆ ಕಾನೂನು ಅರಿವು ಮತ್ತು ನೆರವು ಅಗತ್ಯ: ಅವತಾಡೆ
ದೇವರಹಿಪ್ಪರಗಿ 25 : ಹಿರಿಯ ನಾಗರಿಕರು ತಮ್ಮ ಹಕ್ಕುಗಳು, ಕಾನೂನು ರಕ್ಷಣೆ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಹೊಂದುವುದು ಅಗತ್ಯ ಎಂದು ವಕೀಲರಾದ ಬಾಬು.ಎಂ.ಅವತಾಡೆ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನು ತಜ್ಞರು, ಹಿರಿಯ ನಾಗರಿಕರಿಗೆ ಕಾನೂನಿನಡಿ ದೊರೆಯುವ ಹಕ್ಕುಗಳು, ಆಸ್ತಿ ಮತ್ತು ವಾರಸುದಾರಿಕೆ ವಿಚಾರಗಳು, ಹಿರಿಯರ ಪಾಲನೆ-ಪೋಷಣೆ ಹಾಗೂ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳು ಹಾಗೂ ಸೈಬರ್ ಡಿಜಿಟಲ್ ವಂಚನೆ ಕುರಿತು ಮಾಹಿತಿ ಮತ್ತು ಕಾನೂನು ಶಿವ ಪ್ರಾಧಿಕಾರದಿಂದ ಉಚಿತ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಸಿರುವುದು ಒಳ್ಳೆ ಕಾರ್ಯವಾಗಿದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ವಹಿಸಿದ್ದರು.ಇದೇ ಸಂದರ್ಭದಲ್ಲಿ ಎಂ.ಆರ್. ಡಬ್ಲ್ಯೂ ಗಳಾದ ಮುತ್ತುರಾಜ ಸಾತಿಹಾಳ, ಪರಶುರಾಮ ಯಲಗೋಡ, ಮುಖಂಡರುಗಳಾದ ಸಂಗಪ್ಪ ಸುರಗಿಹಳ್ಳಿ, ಶರಣಗೌಡ ಪಾಟೀಲ, ಸರೂಬಾಯಿ, ಬಸ್ಸಮ್ಮ, ಚೈತ್ರ, ಬಸಪ್ಪ ಸೇರಿದಂತೆ ಹಿರಿಯ ನಾಗರಿಕರು, ಕಾನೂನು ಸೇವಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಹಾಬುದ್ದೀನ್ ಬುಕ್ಕಡ ನಿರೂಪಿಸಿ,ವಂದಿಸಿದರು.