ಮುದ್ದೆಬಿಹಾಲ್

ಪಿಡಿಓಗಳ ವಿರುದ್ಧ ದೂರುಗಳು ಬಂದಲ್ಲಿ ಕಾನೂನುಕ್ರಮ

ಪಿಡಿಓಗಳ ವಿರುದ್ಧ ದೂರುಗಳು ಬಂದಲ್ಲಿ ಕಾನೂನುಕ್ರಮ

ಅಹವಾಲು ಸ್ವೀಕಾರ, ಅಧಿಕಾರಿಗಳ ಪ್ರಗತಿಪರೀಶೀಲನಾ ಸಭೆಯಲ್ಲಿ ಲೋಕಾಯುಕ್ತ ಎಸ್‌.ಪಿ. ಟಿ. ಮಲ್ಲೇಶ ತಾಕೀತು 

ಮುದ್ದೇಬಿಹಾಳ 22: ತಾಲೂಕಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಓಗಳು ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಜತೆಗೆ ಆಯಾ ಗ್ರಾಮಗಳ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿಲ್ಲ ಅದಲ್ಲದೇ ಯಾವೂದೇ ಕೆಲಸಕ್ಕೆ ಹಣ ಕೇಳುತ್ತಿರುವ ಎಂಬ ದೂರುಗಳು ಕೇಳಿಬರುತ್ತಿವೆ ಕಾರಣ ಅಂತಹ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲವೆಂದರೆ ಅಂತಹ ಅಧಿಕಾರಿಗಳನ್ನು ಕಾನೂನುಕ್ರಮಕ್ಕೆ ಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್‌.ಪಿ. ಟಿ. ಮಲ್ಲೇಶ ತಾಕೀತು ಮಾಡಿದರು.  

ಪಟ್ಟಣದ ಹಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧ ಸಭಾಭವನದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ತಾಲೂಕಾ ಎಲ್ಲ ಸರಕಾರಿ ಅಧಿಕಾರಿಗಳ ಪ್ರಗತಿಪರಿಶಿಲನಾ ಸಭೆಯಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು. 

ತಾಲೂಕಿನ  ಎಲ್ಲ ಸರಕಾರಿ ಕಚೇರಿಗಳನ್ನು ನೌಕರರ ಹಾಜರಾತಿ ಸೇರಿದಂತೆ ಇತರೇ ದಾಖಲೆಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು  ಸಾರ್ವಜನಿಕರು ತಮ್ಮ ಇಲಾಖೆಗೆ ಯಾವೂದೆ ಕೆಲಸಕ್ಕೆಂದು ಬಂದರೆ ತಕ್ಷಣವೇ ಅವರನ್ನು ಗೌರವದಿಂದ ಕಾಣುವ ಮೂಲಕ ತ್ವರಿತಗತಿಯಲ್ಲಿ ಅವರ ಕೆಲಸ ಮುಗಿಸಿ ಕಳಿಸಬೇಕು. ಲಂಚಮುಕ್ತ ಆಡಳಿತಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧಿಕಾರಿಗಳಿಗೆ ಸಲಹೇ ನೀಡಬೇಕು. 

ಎಲ್ಲ ವಸತಿ ನಿಲಯಗಳ ಸ್ವಚ್ಚತೆ ಹಾಗೂ ಮಕ್ಕಳ ಸಂಖ್ಯೆ ಸೇರಿದಂತೆ ಗುಣಮಟ್ಟ ಆಹಾರ ಮಕ್ಕಳ ಹಾಜರಾತಿ ಸೇರಿದಂತೆ ಅನೇಕ ವಿಷಯಗಳ ಲೊಕಪದೋಷಗಳ ಬಗ್ಗೆ  ಮಾಹಿತಿ ಪಡೆದುಕೋಂಡರು.  ಮಡಿಕೇಶ್ವರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗಸಿಬ್ಬಂದಿಗಳು ಅಲ್ಲಿ ಸರಿಯಾದ ಸಮಯಕ್ಕೆ ಹಾಜರಿರುವದಿಲ್ಲ ಜೊತೆಗೆ ಎಲ್ಲೊ ಆಸ್ಪತ್ರೆಗಳಲ್ಲಿ ಸ್ವಚ್ಚತೆ ಇರುವುದಿಲ್ಲ ರೋಗಿಗಳಿಗೆ ಪರದಾಡುವಂತೆ ಸಿಬ್ಬಂದಿಗಳು ಮಾಡುತ್ತಿದ್ದಾರೆ ಯಾಕೇ ಹಾಗಾದಂತೆ ನೋಡಿಕೊಳ್ಳಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ ಅವರಿಗೆ ಸೂಚಿಸಿದರು. 

ಸಧ್ಯ ಎಲ್ಲೆಡೆ ಮುಂಗಾರು ಬಿತ್ತನೆಗಾಗಿ ರೈತರು ಕಾಯುತ್ತಿದ್ದಾರೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ತೊಂದರೆಯಾಗದಂತೆ ಸರಕಾರದ ಯೋಜನೆಗಳನ್ನು ಸಮರ​‍್ಕವಾಗಿ ತಲುಪುವಂತೆ ನೋಡಿಕೊಳ್ಳುವುದರೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡಬೇಕು.  ಕೃಷಿಹೊಂಡ ಸಹಾಯ ಧನ ಬಗ್ಗೆ ಮಾಹಿತಿ ಪಡೆದುಕೊಂಡು ಮುದ್ದೇಬಿಹಾಳ ತಾಲೂಕಿಗೆ ಕೃಷಿಹೊಂಡ ಮಾಡಿರುವ ಬಗ್ಗೆ, ಮಾಹಿತಿ ಪಡೆದುಕೊಂಡು 08 ಕೃಷಿ ಹೊಂಡ ಮಾಡಿರುವುದಾಗಿ ತೋಟಗಾರಿಕ ಅಧಿಕಾರಿ ತಿಳಿಸಿದರು. ಕಳೆದ ವರ್ಷ ಕೃಷಿ ಹೊಂಡ ಲ್ಯಾಪ್ಸ್‌ ಆದ ಬಗ್ಗೆ ಕಛೇರಿಗೆ ಮಾಹಿತಿ ಸಲ್ಲಿಸುವಂತೆ ಕೃಷಿ ಂ ಆ ರವರಿಗೆ ತಿಳಿಸಿದರು. ಕೃಷಿ ಹೊಂಡಗಳ ಬೇಡಿಕೆ ಬಗ್ಗೆ ಹಾಗೂ ಪಾಲಿ ಹೌಸ ಸೇರಿದಂತೆ ಎಲ್ಲ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಲೂಕಾ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ   ತಾಲೂಕಾ ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ ಅವರಿಗೆ ಸೂಚಿಸಿದರು. 

ಪಟ್ಟಣದಲ್ಲಿ ಸ್ವಚ್ಚತೆಯಿಲ್ಲದೇ ಎಲ್ಲೆಂದರಲ್ಲಿ ಪ್ಲ್ಯಾಷ್ಟಿಕ ಘನತ್ಯಾಜ್ಯವಸ್ತುಗಳನ್ನು ಎಸೆದಿರುವುದು ಕಂಡುಬರುತ್ತಿದೆ ಯಾಕೇ ಸ್ವಚ್ಚತೆ ಬಗ್ಗೆ ಯಾಕೇ ಕಾಳಜಿ ವಹಿಸುತ್ತಿಲ್ಲ ಅಧಿಕಾರಿಗಳು ಏನು ಮಾಡುತ್ತಿರುವಿರಿ ಎಂದು ಪುರಸಭೆ ಅಧಿಕಾರಿಗಳಿಗೆ ತರಾಟಗೆ ತಗೆದುಕೊಂಡರು.  

ಜೊತಗೆ ತಾಲೂಕಿನಲ್ಲಿ ಎಲ್ಲ ಗ್ರಾಮಗಳಲ್ಲಿ  ಸಾರ್ವಜನಿಕರಿಗೆ ಕುಡಿಯುವ ನೀರಿನ ಯಾಗದಂತೆ ನೋಡಿಕೊಳ್ಳುವುದರೊಂದಿಗೆ ಸ್ವಚ್ಚ ಆಡಳಿತ ನಡೆಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಎಇಇ ಅಧಿಕಾರಿಗಳಿಗೆ ಸೂಚಿಸಿದರು. 

ತಾಲೂಕಿನ  ರೇಷ್ಮೇ ಇಲಾಖೆ, ಪಶುಸಂಗೋಪನಾ ಇಲಾಖೆ, ದಂಡಾಧಿಕಾರಿಗಳ ಇಲಾಖೆ, ಸಿಡಿಪಿಓ ಇಲಾಖೆ ಅಬಕಾರಿ ಇಲಾಖೆ, ಎಲ್ಲ ಇಲಾಖೆಯ ಪ್ರಗತಿ ಪರೀಶೀಲನೆ ನಡೆಸಿದರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.ಕೊಪ್ಪ ತಾಂಡಾದಲ್ಲಿ ಪಡಿತರ ವಿತರಣೆ ಮಾಡಲು 10 ರೂ ಪಡೆಯುತ್ತಿರುವ ಬಗ್ಗೆ ದೂರು ಅರ್ಜಿ ವಿನಾಯಕ ಕುಲಕರ್ಣಿ  ಮುದ್ದೇಬಿಹಾಳ ಉದ್ಯಾನವನದಲ್ಲಿ ದೇವಸ್ಥಾನ ನಿರ್ಮಾನದ ಬಗ್ಗೆ  ಮತ್ತು ಕಾಳಗಿ ಗ್ರಾಮದ ಸಾರ್ವಜನಿಕರು ಉತಾರ ನೀಡುವ ಬಗ್ಗೆ ಅರ್ಜಿ ಸಲ್ಲಿಸಿದರು.  

ಡಿವೈಎಸ್ಪಿ ಸುರೇಶ ರಡ್ಡಿ , ಇನಸ್ಪೇಕ್ಟರ್‌ಗಳಾದ ಆನಂದ ಟಕ್ಕನ್ನವರ, ಆನಂದ ಢೋಣಿ, ತಹಶಿಲ್ದಾರ ಬಸವರಾಜ ನಾಗರಾಳ ಸೇರಿದಂತೆ ಎಲ್ಲ ಸರಕಾರಿ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ