ಕಾನೂನು ಅರಿವು-ನೆರವು ಕಾರ್ಯಕ್ರಮ
ಮುಂಡಗೋಡ:ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಜೆಎಮ್ಎಫ್ಸಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ನ್ಯಾಯಾಧೀಶ ಜಿ.ಬಿ.ಹಳ್ಳಾಕಾಯಿ ಮತ್ತು ಕಿರಿಯ ನ್ಯಾಯಾಧೀಶ ಕೇಶವ ಕೆ., ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಸಿಪಿಐ ಸಿದ್ದಪ್ಪ ಸಿಮಾನಿ, ಬಿಇಒ ವೆಂಕಟೇಶ ಪಟಗಾರ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಸಹಾಯಕ ಸರಕಾರಿ ಅಭಿಯೋಜಕಿ ಉಮಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಎಮ್.ಎ.ನಂದಿಕಟ್ಟಿ, ಕಾರ್ಯದರ್ಶಿ ವಿಶ್ವನಾಥ ಪವಾಡಶೆಟ್ಟರ, ಖಜಾಂಚಿ ರಮೇಶ ಮಳೇಕರ, ವಕೀಲರಾದ ಕೆ.ಎನ್.ಹೆಗಡೆ, ಎಸ್.ಪಿ.ಸಮ್ಮಸಗಿ, ಗುಡ್ಡಪ್ಪ ಕಾತೂರ, ಗೀತಾ ಕೆಂಚಗೊಣ್ಣವರ, ಅಜ್ಜಯ್ಯ ಶಿವಜೋಗಿಮಠ, ದೀಪ್ತಿ ಅಂಡಗಿ, ಅನ್ನಪೂರ್ಣ ಭಟ್ಟ, ಸೀತಾರಾಮ ಭಟ್ಟ, ವಿ.ಪಿ.ಭಟ್ಟ, ಜಿ.ಆರ್.ಆಲದಕಟ್ಟಿ, ನಾಗಪ್ಪ ಬಾರ್ಕಿ, ರವಿ ಹೆಗಡೆ, ವಿನಾಯಕ ರಾಯ್ಕರ, ಸಹಾಯಕ ಕ್ಲರ್ಕ್ ಶರತ ಪವಾರ ಮುಂತಾದವರು ಉಪಸ್ಥಿತರಿದ್ದರು.