ಮನರಂಜನೆ

ಎಡಗೈಯೇ ಅಪಘಾತಕ್ಕೆ ಕಾರಣ’ ಅಂತಾರೆ ದಿಗಂತ್!

ಎಡಗೈಯೇ ಅಪಘಾತಕ್ಕೆ ಕಾರಣ’ ಅಂತಾರೆ ದಿಗಂತ್!

  ಬೆಂಗಳೂರು, ಆಗಸ್ಟ್ 13  ‘ಎಡಗೈಯೇ ಅಪಘಾತಕ್ಕೆ ಕಾರಣ’ ಅಂತಿದ್ದಾರೆ ನಟ ದಿಗಂತ್.  ಹಾಗಂತ ಇದು ಸ್ಟೇಟ್ ಮೆಂಟ್ ಅಲ್ಲಾ ಕಣ್ರೀ. . ., ಅವರು ಅಭಿನಯಿಸಲಿರುವ ಹೊಸ ಚಿತ್ರದ ಟೈಟಲ್!
 
ಈ ಸಿನಿಮಾದಲ್ಲಿ ಎಡಚರ ಸಮಸ್ಯೆಗಳ ಬಗ್ಗೆ ಹೇಳಲಾಗಿದೆಯಂತೆ. ಎಡಗೈ ಬಳಸುವುದು ಕೆಲವರು ಶುಭ ಎಂದು ನಂಬಿದರೆ ಮತ್ತೆ ಕೆಲವರು ಅಶುಭ ಎನ್ನುತ್ತಾರೆ. ಅಂತೂ ಈ ಎಡಕೈಯಿಂದಾಗುವ ಅನಾಹುತಗಳ ಬಗ್ಗೆ ಹೇಳುವ ಕತೆಯೇ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ.
  ಸಮರ್ಥ್ ಕಡ್ಕೋಲ್ ಸಾರಥ್ಯದ ಈ ಚಿತ್ರ ಥ್ರಿಲ್ಲರ್ ಮತ್ತು ಪಕ್ಕಾ ಕಾಮಿಡಿ ಕಥಾಹಂದರ ಹೊಂದಿದೆಯಂತೆ.  ದಿಗಂತ್ ಪಾಲಿಗೆ ಇದೊಂದು ವಿಶಿಷ್ಟ ಪಾತ್ರವಾಗಲಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.
 

ಸುದ್ದಿ ಓದಿ