ಮುಂದಗೋಡ

ನ.10ರಂದು ಕಸಾಪದಿಂದ ಉಪನ್ಯಾಸ ಕಾರ್ಯಕ್ರಮ

ನ.10ರಂದು ಕಸಾಪದಿಂದ ಉಪನ್ಯಾಸ ಕಾರ್ಯಕ್ರಮ

ಮುಂಡಗೋಡ 09:  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಪಟ್ಟಣದ ಕೆ.ಎಚ್‌.ಬಿ.ಕಾಲನಿಯ ಸಂಗಮೇಶ್ವರ ಸಭಾಭವನದಲ್ಲಿ ನ.10ರಂದು ಸಂಜೆ 4.30ಕ್ಕೆ ಕನ್ನಡ ಕಾರ್ತಿಕ-2023 ಅನುದಿನ ಅನುಸ್ಪಂದನದಡಿ ಶಿವರಾಮ ಕಾರಂತರ ಚಿಂತನೆಗಳ ಒಳನೋಟ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 

ಸಂಗಮೇಶ್ವರ ಕೋ-ಆಪ್ ಸೊಸೈಟಿ ಅಧ್ಯಕ್ಷ ಸಂಗಪ್ಪ ಕೋಳುರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಂತೋಷಕುಮಾರ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ನಾಗರತ್ನ ದೈವಜ್ಞ, ಸಂಜಯ ಕವಟಕೊಪ್ಪ, ವಿನಾಯಕ ಶೇಟ್, ನಾಗರಾಜ ಅರ್ಕಸಾಲಿ ಮತ್ತು ಕಸಾಪ ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ಗೌರವ ಕಾರ್ಯದರ್ಶಿ ಎಸ್‌.ಡಿ.ಮುಡೆಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ