ಬಸವಣ್ಣವರ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ
ಮುಂಡರಗಿ 22: ಬಸವಣ್ಣವರ ಜಯಂತಿಯನ್ನು 1913 ರಲ್ಲಿ ಪ್ರಾರಂಭ ಮಾಡಿ 111 ವರ್ಷಗಳಾಗಿವೆ. ಅವು ಇಂದಿಗೂ ಕೂಡ ಬಸವಣ್ಣವರ ವಚನಗಳು ಪ್ರಚಲಿತವಾಗಿವೆ ಅವರ ವಚನಗಳು ಮನುಷ್ಯನ ವ್ಯಕ್ತಿತ್ವ ಜೀವನದ ಮೌಲ್ಯಗಳನ್ನು ಮೂಡಿಸುತ್ತವೆ ಎಂದು ಪ್ರಾದ್ಯಾಪಕ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಡರಗಿ, ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ 2024, ಜ ಅ ಶಿಕ್ಷಣ ಮಹಾವಿದ್ಯಾಲಯ, ಇವರುಗಳ ಆಶ್ರಯದಲ್ಲಿ ನಡೆದ ಕರ್ನಾಟಕ ಸಂಭ್ರಮ 50 ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣವರ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಬಸವಣ್ಣವರು ಸನಾತನ ಪರಂಪರೆ ಉಳಿಸಬೇಕು ಹಾಗೂ ಬೆಳಸಬೇಕು ಅಂತಾ ಅವರು ಭಕ್ತಿ ಪಂಥದ ಮೂಲಕ 12ನೇ ಶತಮಾನದಲ್ಲಿ ಅವರು ತಮ್ಮ ವಚನಗಳ ಮೂಲಕ ಸಮಾನತೆಯನ್ನು ಮೂಡಿಸಿದವರು, ಅವರ ವಚನಗಳು ಯಾರನ್ನು ಉದ್ದೇಶಿಸಿ ಹೆಳಿದ್ದಲ್ಲ ಅವರು ಮೊದಲು ತಮ್ಮನ್ನು ಉದ್ದೇಶಿಸಿ ಹೆಳಿದ್ದಾರೆ, ಯಾಕಂದರೆ ಮೊದಲು ನಾವು ಸರಿಯಾದರೆ ತಾನಾಗಿಯೇ ಈ ಸಮಾಜ ಸರಿಹೋಗುತ್ತದೆ, ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ, ಅಜ್ಞಾನದ ಅಂದಕಾರದಲ್ಲಿದ್ದ ಅದೆಷ್ಠೋ ಶರಣರಿಗೆ ತಮ್ಮ ವ್ಯಕ್ತಿತ್ವ ಆದರ್ಶಗಳ ಮೂಲಕ ಅನುಭವ ಮಂಟಪ ರೂಪಿಸಿ ನ್ಯಾಯ ಒದಗಿಸುವ ಮೂಲಕ ಸರ್ವರಿಗೂ ಸಮಾನತೆ ನಿಡಿದ ಮಹಾ ಮಾನವತವಾದಿ ಬಸವಣ್ಣವರು, ಅವರ ವಚನಗಳು ಲೋಕದ ಡೊಂಕನ್ನು ನೀವೇಕೆ ತಿದ್ದುವರಿ ,ಅತ್ತ ಲಿತ್ತ ಹೋಗದಂತೆ ಹೆಳವನ ಮಾಡಯ್ಯ ,ಕಳಬೇಡಾ ಕೋಳಬೇಡಾ ಹುಸಿಯ ನುಡಿಯಬೇಡಾ ಹಿಗೆ ಹಲವಾರು ವಚನಗಳ ಮೂಲಕ ಮನುಷ್ಯನಿಗೆ ಬೆಡವಾದ ವಿಷಯಗಳು ಹಾಗೂ ತಪ್ಪು ಗ್ರಹಿಕೆಗಳನ್ನು ಬಿಡಬೇಕು,ಒಳ್ಳೆಯ ವಿಚಾರ, ನಡತೆ, ಮಾನವಿಯತೆ, ಸಹಕಾರ ಇರಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಿಸಿದ ಆಡಳಿತಾದಿಕಾರಿ ಡಾ.ಬಿ.ಜಿ.ಜವಳಿ ಮಾತನಾಡಿ, ಬಸವಣ್ಣವ ಕಾಯಕ ನಿಷ್ಠ,ವ್ಯಕ್ತಿತ್ವ ಈಡಿ ವಿಶ್ವವೇ ಮೆಚ್ವುವ ಕೇಲಸ ಮಾಡಿದ್ದಾರೆ,ಅವರ ವಚನಗಳು ನಮಗೆ ಸದಾ ಆದರ್ಶವಾಗಿವೇ, ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ, ಮುಂಡರಗಿಯ ಬರಿದಾದ ನಾಡಿಗೆ ಶಿಕ್ಷಣದ ಮೂಲಕ ಕಿರ್ತಿ ಹೆಚ್ಚಿಸಿದ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಾದಸ್ಪರ್ಶದಿಂದ ಅನ್ನ ಅಕ್ಷರ ಉದ್ಯೋಗದ ಮೂಲಕ ಈ ನಾಡಿಗೆ 33 ಅಂಗಸಂಸ್ಥೆಗಳ ಸ್ಥಾಪನೆ ಮಾಡುವ ಮೂಲಕ ಬಡ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಸರೆಯಾಗುವ ಅ ಮೂಲಕ ಶಿಕ್ಷಣದ ಕ್ರಾಂತಿ ಮಾಡಿದ್ದಾರೆ, ಬಸವಣ್ಣವರು 12 ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಇಂದಿನ ಯುವ ಸಮೂಹಕ್ಕೆ ಶರಣರ ಕಾಯಕ,ತತ್ವ,ಆದರ್ಶ ಗಳನ್ನು ತಿಳಿಸುವ ಉದ್ದೇಶವಾಗಿದೆ,ಬಸವಣ್ಣವರು ಸೌಂಸ್ಕೃತೀಕ ನಾಯಕ ಅಷ್ಠೆ ಅಲ್ಲಾ ವಿಶ್ವ ನಾಯಕರಾಗಿದ್ದಾರೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರಾ ಬೆಲ್ಲದ ಮಹಾವಿದ್ಯಾಲಯದ ಕಾರ್ಯಾದ್ಯಕ್ಷರಾದ ಆರ್ ಎಲ್ ಪೋಲಿಸ್ ಪಾಟೀಲ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮದ ಮೂಲಕ ಮಹಾನುಭಾವರನ್ನು ನೆನೆಯುವದೆ ಮಹಾತ್ಕಾರ್ಯವಾಗಿದೆ, ಇದರಿಂದ ಮನುಷ್ಯನಿಗೆ ಆನಂದ, ಸಂತೋಷ, ಜೀವನದ ಮೌಲ್ಯಗಳು ತಿಳಿಯುತ್ತವೆ. ಈ ನಾಡಿನ ಒಳಿತಿಗಾಗಿ ಅವತರಿಸಿದ ಶರಣರಲ್ಲಿಯೇ ಬಸವಣ್ಣವರು ಶ್ರೇಷ್ಠರು, ಇವರ ಜೀವನ ಸಾಧನೆ ಎಲ್ಲವುಗಳನ್ನು ಸಂಶೋದನೆ ಮಾಡುವದು ಅವಶ್ಯವಿದೆ. ಬಸವಣ್ಣವರ ಕುರಿತು ಗ್ರಂಥಗಳು,ಜನಪರರ ವಿಚಾರದಾರೆಗಳನ್ನು ಚಿಂತಿಸುವದಿದೆ. ಬಸವಣ್ಣವರ ಅನೇಕ ಪ್ರಚಲಿತ ವಚನಗಳು ಇವೆ.
ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ, ಕುಳ್ಳಿರೆಂದಡೆ ನೆಲ ಕುಳಿಹೋಹುದೆ, ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ ಮೂಲಕ ಸಂಬಂದಗಳನ್ನು ವ್ಯಕ್ತಿಯ ವ್ಯಕ್ತಿತ್ವನ್ನು ರೂಪಿಸಿದ್ದಾರೆ, ಈ ಸಮಾಜದಲ್ಲಿರುವ ಎಲ್ಲರನ್ನು ದೇವರ ಸ್ವರೂಪದಲ್ಲಿ ಕಾಣಬೇಕು ಎಂದರು.
ಕಸಾಪ ಅಧ್ಯಕ್ಷರಾದ ಎಮ್.ಜಿ.ಗಚ್ಚಣ್ಣವರು ಪ್ರಾಸ್ತಾವೀಕವಾಗಿ ಮಾತನಾಡಿ, ಬಸವಣ್ಣವರ ಜಯಂತಿಯ ಮೂಲಕ ಬಾವಿ ಶಿಕ್ಷಕರಾದ ತಮಗೆ ಅವರ ವಿಚಾರದಾರೆಗಳನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ,ಬಸವಣ್ಣವರ ಕಾಯಕ,ಶರಣರಲ್ಲಿ ಅವರಿಗಿದ್ದ ಭಕ್ತಿ ಭಾವನೆ,ತಾರಿತಮ್ಯ ನಿವಾರಣೆ ,ಕಾಯಕದ ಮೂಲಕ ಅರಿವು,ಶರಣರು ಈ ನಾಡಿಗೆ ನಿಡಿದ ಕೋಡಿಗೆ ಮರೆಯಲಾಗದು. ಕಸಾಪ ಇಂತಹ ಅನೇಕ ಮಹನಿಯರನ್ನು ಇಂದಿನ ಯುವ ಪಿಳಿಗೆಗೆ ಕಾರ್ಯಕ್ರಮಗಳ ಮೂಲಕ ಮುಟ್ಟಿಸುವ ಕಾರ್ಯ ಮಾಡುತ್ತಿದೆ ಇದಕ್ಕೆ ಸಹಕರಿಸದ ಎಲ್ಲಾ ಮಹನಿಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್ ವ್ಹಿ ಕುಲಕರ್ಣಿ, ಶಂಕರ ಕೂಕನೂರ, ಡಾ.ನಿಂಗು ಸೋಲಗಿ,ಮಂಜುಳಾ ಇಟಗಿ, ಎಸ್.ಕೆ.ಹೊಳೆಯಣ್ಣವರ, ಶಶಿಕಲಾ ಕೂಕನೂರ, ಸ್ವೇತಾ ಬೆಲ್ಲದ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು. ರಾಜಶೇಖರ ಹುಲ್ಯಾಳ ನಿರೂಪಿಸಿದರು, ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ವಂದಿಸಿದರು.