ಲೇಖನಗಳು

ಕನ್ನಡ ಕಲಿಕೆ... ಕೇವಲ ಜ್ಞಾನಕ್ಕೆ ಸೀಮಿತವಾದುದಲ್ಲ....

ಕನ್ನಡ ಕಲಿಕೆ... ಕೇವಲ ಜ್ಞಾನಕ್ಕೆ ಸೀಮಿತವಾದುದಲ್ಲ....

ಕನ್ನಡ ಕಲಿಕೆ ಭಾಷೆಗೆ ಸೀಮಿತವಾದುದಲ್ಲ. ಸಂಸ್ಕೃತಿಯನ್ನು. ನಾಡಿನ ಹಿರಿಮೆಯನ್ನು. ಸಾಮಾಜಿಕ ಸಂಬಂಧವನ್ನು ಕನ್ನಡ ಭಾಷಿಗರ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳುವ ಘನವಾದ ಉದ್ದೇಶ ಕನ್ನಡ ಭಾಷೆಯ ಕಲಿಕೆಯಲ್ಲಿ ಅಡಗಿದೆ. 

1ನೇ ತರಗತಿಯಿಂದ 5ನೇ ತರಗತಿಯ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಲಿಸಬೇಕು ಎಂಬ ರಾಜ್ಯ ಸರಕಾರದ ನಿಲುವು ದೂರದೃಷ್ಠಿ ಉಳ್ಳದ್ದು. ಪ್ರತಿಯೊಂದು ಮಗುವು ಓದುವುದು. ಬರೆಯುವು ಹಾಗೂ ಮಾತನಾಡುವುದು ಕನ್ನಡವೇ ಆದಾಗ ಈ ನೆಲದ ಮೂಲ ಸೆಲೆಗಳಾದ ಅಭಿಮಾನ.  

ಕನ್ನಡಿಗರ ಜನ ಜೀವನ ಸಂಸ್ಕೃತಿ. ನಡೆ ನುಡಿ. ಆಚಾರ ವಿಚಾರ ಹಾಗೂ ಬಾಂಧವ್ಯವನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ. ಈ ಅಂಶಗಳು ಉಳಿಯುವುದರಿಂದಲೇ ನಾಡಿನ ಸರ್ವಾಂಗೀಣ ಸಂಪತ್ತು ಉಳಿದು ಬೆಳೆದು ತನ್ನ ಅಸ್ತಿತ್ವವನ್ನು ಮುಂದುವರಿಸಿಕೊಂಡು ಹೋಗುತ್ತದೆ. 

ಇಂತಹ ಜವಾಬ್ದಾರಿಯುತ ಗುಣಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ರೂಢಿಸುವುದರಿಂದ ಮಕ್ಕಳಲ್ಲಿ. ಭಾಷಾಭಿಮಾನ. ದೇಶಾಭಿಮಾನ ಉಂಟಾಗಿ ನಾಡು ಉಳಿದು ಬೆಳೆಯಲು ಸಧ್ಯವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಚಿಂತಿಸುವ ಅನೇಕ ಬುದ್ದಿವಂತ ಜೀವಿಗಳು ಉಳಿದು ಬೆಳೆದಿರುವುದು ಇಂತಹ ನೆಲಮೂಲ ಸಂಸ್ಕೃತಿಗಳಿಂದಲೇ ಎಂಬುದನ್ನು ನಾವೆಲ್ಲ ಗಮನಿಸುವ ಅಗತ್ಯವಿದೆ.  

“ಮನೆ ಗೆದ್ದು ಮಾರು ಗೆಲ್ಲು” ಹಿರಿಯರ ಅನುಭವದ ಮಾತಿನಂತೆ ಮೊದಲು ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಿದರೆ ಮುಂದೆ ಯಾವ ಭಾಷೆಯನ್ನಾದರೂ ಕಲಿತು ಸಾಧಿಸಬಹುದು. ಹುಟ್ಟಿ ಬೆಳೆದ ನಮ್ಮ ಪ್ರಾದೇಶಿಕತೆಯ ಗುಣಧರ್ಮಗಳನ್ನು ಮರೆತು ಹೊಸದನ್ನು ಕಟ್ಟಲು ಸಾಧ್ಯವಿಲ್ಲ. ಯಾವುದೇ ಬದಲಾವಣೆ ಮೂಲದಿಂದ ಆರಂಭವಾಗಿರುತ್ತದೆ. ಮೂಲವನ್ನು ಕಳಚಿಕೊಂಡು ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ನೆಲಮೂಲವನ್ನು ಉಳಿಸಿಕೊಂಡು ಅದನ್ನೇ ಆಧಾರವಾಗಿಟ್ಟುಕೊಂಡು ಬದಲಾಗಬೇಕೆ ಹೊರತು ಮೂಲವನ್ನೇ ಮರೆಯುವುದಲ್ಲ. ಅದರಿಂದ ಯಾವುದೇ ಹೊಸದನ್ನು ಸಾಧಿಸಲು ಸಾಧ್ಯವಿಲ್ಲ. 

ಈ ನಿಟ್ಟಿನಲ್ಲಿ ನಾವು ನಮ್ಮದೇ ಭಾಷೆಯನ್ನು ಉಳಿಸಲು ನಿತ್ಯ ನಿರಂತರ ಅದರಲ್ಲಿ ಕ್ರಿಯಾಶೀಲರಾಗಬೇಕಾಗುತ್ತದೆ. ಮಾತನಾಡುವುದು. ಬರೆಯುವುದು. ಓದುವುದು. ಓದಿಸುವುದು ಮಾಡಿದರೆ ತನ್ನಿಂದ ತಾನೇ ಬೆಳೆಯುತ್ತದೆ. ಮತ್ತೆ ನಮ್ಮನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಮೊದಲು ಮನೆಯನ್ನು ಉಳಿಸಿಕೊಂಡು ನಂತರ ಊರು ಉಳಿಸುವ ಕಾರ್ಯಕ್ಕೆ ಮುಂದಾಗಿ ಗೆಲ್ಲಬೇಕು. ಅಂದರೆ ತಾಯ್ನಾಡನ್ನು ಉಳಿಸಿ ಬೇಳೆಸಿದ ನಂತರ ಅನ್ಯ ಭಾಷೆ ನಾಡಿನ ಉದ್ದಾರಕ್ಕೆ ಮುಂದಾಗಬೇಕು.  

ಒಂದು ವೇಳೆ ನಾವು ನಮ್ಮ ಭಾಷೆ. ನೆಲ ಜಲ ಸಂಸ್ಕೃತಿ. ಸಂಸ್ಕಾರ. ಸಂಪ್ರದಾಯ. ಆಚಾರ ವಿಚಾರ ಮತ್ತು ನಡವಳಿಕೆಗಳ ಕುರಿತು ಗೌರವ ಇಲ್ಲದಿದ್ದರೆ. ಕಾಳಜಿ ಮಾಡದಿದ್ದರೆ. ಅಭಿಮಾನ ಹೊಂದದಿದ್ದರೆ ಮತ್ತು ಪ್ರಗತಿಗೆ ಪ್ರಯತ್ನಿಸದಿದ್ದರೆ. ನಮ್ಮ ಅಸ್ಥಿತ್ವವನ್ನು ನಾವೇ ಕಳೆದುಕೊಂಡಂತೆ. ಯಾವಾಗ ನಾವು ನಮ್ಮದನ್ನು ಬಿಟ್ಟು ಬೇರೆಯದರ ಕಡೆಗೆ ಗಮನ ಹರಿಸುತ್ತೇವೋ.  ಆಗ ಅನ್ಯ ಭಾಷಿಕರು. ಧರ್ಮಿಯರು ನಮ್ಮ ನೆಲಮೂಲ ಸಂಸ್ಕೃತಿಯನ್ನು ಆಕ್ರಮಿಸಿ. ತಮ್ಮ ಸಂಸ್ಕೃತಿಯನ್ನು ಸ್ಥಾಪಿಸಿ. ಅಧಿಕಾರ ನಡೆಸುತ್ತಾರೆ. ನಮ್ಮನ್ನೇ ಅಲ್ಲಿಂದ ಓಡಿಸಿ ಬಿಡುತ್ತಾರೆ. ನಮ್ಮ ಅಸ್ಥಿತ್ವವೆಲ್ಲ ನಶಿಸಿ ಹೋಗಿ ನಾವು ನಾಮಾವಶೇಷವಾಗಿ ಬಿಡುತ್ತೇವೆ.ಬ್ರಿಟೀಷರು ನಮ್ಮನ್ನು ಆಡಳಿತ ಮಾಡಿದ್ದೇ ಆ ತಂತ್ರಗಾರಿಕೆಯಲ್ಲಿ ಈ ಕಾರಣಕ್ಕಾಗಿಯೇ ನಾವು ಡಿ. ವಿ. ಜಿ. ಅವರ ಮಾತಿನಂತೆ  “ಇರುವುದನ್ನು ನೆನೆದು. ಬಾರೆನೆನ್ನುವುದನ್ನು ಬಿಟ್ಟು ನಡೆ ಹರುಷಕ್ಕಿದೆ ದಾರಿ” ಎಂಬಂತೆ ಬದುಕುವ ಅವಶ್ಯಕತೆ ಇದೆ. 

ಅನ್ಯರು ಆಕ್ರಮಿಸಿ ನಮ್ಮ ಅಸ್ಥಿತ್ವವನ್ನು ಅಲುಗಾಡಿಸುವ ಮುನ್ನ ನಾವು ನಮ್ಮದೆನ್ನುವುದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೂ ಇದೆ. ಕನ್ನಡ ಎನ್ನುವ ಆ ತನವೇ ನಮ್ಮ ಚೈತನ್ಯವಾಗಬೇಕು. ಅದು ಕೇವಲ ಭಾಷೆಯಲ್ಲ. ಪ್ರತಿಯೊಬ್ಬರ ಜೀವನದ ಬದುಕು. ಪರಂಪರೆ.  ಗುಣವೂ ಹೌದು. ಕನ್ನಡ ನಾಡಿನ ನೆಲದಲ್ಲಿ ವಾಸಿಸುವವರೆಲ್ಲರೂ ಕನ್ನಡಿಗರೆ. ಅವರು ಯಾವುದೇ ಧರ್ಮ. ಜಾತಿ. ಪಂಥದವರಾಗಿರಲಿ. ಕನ್ನಡವನ್ನು ಕಲಿಯಲೇ ಬೇಕು. ಮಾತನಾಡಬೇಕು. ಬರೆಯಬೇಕು. ಮಿಗಿಲಾಗಿ ಈ ನೆಲದ ಬಗ್ಗೆ ಗೌರವವಿರಬೇಕು. ಕರ್ತವ್ಯವನ್ನು ನಿಭಾಯಿಸಬೇಕು. ಅಂದಾಗಲೇ ಇಲ್ಲಿನ ಕನ್ನಡತನ ಉಳಿದು ನಮ್ಮ ಅಸ್ಥಿತ್ವವನ್ನು ಗಟ್ಟಿಗೊಳಿಸಲು ಸಾಧ್ಯ.   

ಆ ಮೂಲಕ ಹೆತ್ತತಾಯಿ. ಹೊತ್ತ ನೆಲದ ಋಣ ತೀರಿಸಬೇಕು. ಭಾಷೆ. ಸಾಹಿತ್ಯ ಸಂಸ್ಕೃತಿ. ಕಲೆ ಉಳಿಯಲು ಸಾಧ್ಯ. ಇದಕ್ಕೆ ಬೆಂಬಲವಾಗಿ ಮನೆ. ಶಾಲೆ. ಸಮಾಜ ಮತ್ತು ಸಮುದಾಯ ಮುಂತಾದ ಸಾಂಸ್ಥಿಕ ಸಂಸ್ಥೆಗಳೂ ನಿಲ್ಲಬೇಕು.  

ರಾಜಕಾರಣಿಗಳು. ಅಧಿಕಾರಿಗಳು. ಸಂಘಟೆಗಳು. ಜನ ಸಾಮಾನ್ಯರು ತಮ್ಮ ಕಾರ್ಯ ದಕ್ಷತೆಯನ್ನು ಪ್ರದರ್ಶಿಸಬೇಕು.ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ಕನ್ನಡದ ಮಹತ್ವವನ್ನು ತಿಳಿಸಿ ಹೇಳಬೇಕು. ಆಗ ಕನ್ನಡವೆಂಬ ನಮ್ಮ ಮನೆಯನ್ನು ಉಳಿಸಿ. ಇತರ ಭಾಷೆಗಳ ಕಲಿಕೆಗೆ ಮುಂತಿಗಬೇಕು.  

“ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬಂತೆ ನಾವು ಯಾವುದೇ ಭಾಷೆಯನ್ನು ಕಲಿತರೂ ತಾಯ್ನಾಡಿನ ಕನವರಿಕೆ ಸದಾ ನಡೆಯುತ್ತಿರುತ್ತದೆ. ತಾಯ್ನಾಡ ನುಡಿಗಾಗಿ ಹಂಬಲಿಸುವಂತಿರಬೇಕು.     

ಯಾಕೆಂದರೆ ನಾವು ಯಾವುದೇ ಭಾಷೆ ಕಲಿತರು ಮನಸಿಗೆ ಕನಸು ಬೀಳುವುದು ತಾಯ್ನಾಡ ಭಾಷೆಯಲ್ಲಿಯೇ.  ಎಂಬುದನ್ನು ಅರಿಯಬೇಕು.ಕನ್ನಡ ಭಾಷೆ ಮಾಧ್ಯಮವಾಗಿ. ಬದುಕಿನ ಭಾಗವಾಗಿ ಸಮಾಜದ ಉದ್ದಾರಕ್ಕೆ ಸಹಾಯವಾಗಬೇಕಾದರೆ. ನಾವುಗಳೆಲ್ಲ ಕನ್ನಡದ ಮಹತ್ವವನ್ನು ಆಗಾಗ ತಿಳಿಸಿ ಹೇಳುವ ಕಾರ್ಯ ಮಾಡುತ್ತಲೇ ಇರಬೇಕು. ಆಗ ಮಾತ್ರ ಸಮುದಾಯದೊಳಗಿನ ಅವ್ಯವಸ್ಥೆ ಸರಿ ಆಗುವುದು. ಕನ್ನಡದ ಕೇವಲ ಭಾಷೆ ಅಲ್ಲ. ಮನರಂಜನೆಗಲ್ಲ. ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಸ್ಮಿತೆಯ ಅಡಿಪಾಯವಾಗಿದೆ. ಪ್ರಗತಿಗೆ ಪ್ರಬಲವಾದ ಮಾರ್ಗವಾಗಿದೆ. ಜೀವನದ ಸರ್ವಾಂಗೀಣ ಅಂಶವೇ ಆಗಿರುವ ಕನ್ನಡವನ್ನು  ಕಾಳಜಿಯಿಂದ ಕಾಯಬೇಕಿದೆ ಅದಕ್ಕಿರುವ ಘನತೆಯನ್ನು ಹೆಚ್ಚಿಸಬೇಕಿದೆ. ಆವಾಗಲೇ ನಾನು ಉಳಿದು. ನನ್ನವರನ್ನು ಉಳಿಸಿ. ನಿರಂತರವಾದ ಪರಂಪರೆಯನ್ನು ಉಳಿಸಿದಂತಾಗುತ್ತದೆ.  

ಸರಿ ಸುಮಾರು 2500 ವರ್ಷಗಳ ಕನ್ನಡದ ಇತಿಹಾಸವನ್ನು ಗಮನಿಸಿದಾಗ ಎಲ್ಲೂ ಅದು ಕೇವಲ ಭಾಷೆಯಾಗಿ ಕಂಡು ಬಂದಿಲ್ಲ. ಬದುಕಿನ ನಾನಾ ಮಜಲುಗಳ ಸುಧಾರಣೆಯ ಅಸ್ತೃವಾಗಿಯೇ ಬಳಕೆಯಾಗಿದೆ. ನೆಲ ಜಲದ ಸಮಸ್ಯೆಗೆ ಪರಿಹಾರವಾಗಿ ಪರಿಣಮಿಸಿದೆ. ರಾಜ ಮಹರಾಜರ ಜೀವನ ಚರಿತೆಯಾಗಿ ಗುರುತಿಸಿಕೊಂಡಿದೆ. ಪರಸ್ಪರರ ಭದ್ರವಾದ ಸೌಹಾರ್ದತೆಗೆ ಕಾರಣವಾಗಿದೆ. ಸಂಬಂಧಗಳ ಕೊಂಡಿಯಾಗಿ ಸಂಬಂಧಗಳನ್ನು ಬೆಸೆದಿದೆ.  ಭಾವನೆಗಳ ವಿನಿಮಯದ ಮಾಧ್ಯಮವಾಗಿ ಕಾರ್ಯ ನಿರ್ವಹಿಸಿದೆ. 

ಒಟ್ಟಾರೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನ ಮುಂದುವರಿಕೆಗೆ ಕಾರಣವಾಗಿದೆ. ಈ ಎಲ್ಲಾ ಜೀವನಾಡಿ ವಿಷಯಗಳಿಗೆ ಕಾರಣವಾದ ಕನ್ನಡತನವನ್ನು ನಾವೆಲ್ಲ ಉಳಿಸೋಣ. ಬೆಳೆಸೋಣ. ಮುಂದಿನ ಪೀಳಿಗೆ ನೆಮ್ಮದಿಯಾಗಿ ಜೀವಿಸುವಂತೆ ಸಹಕರಿಸೋಣ. 

- ವೆಂಕಟೇಶ ಈಡಿಗರ 

ರಾಣೇಬೆನ್ನೂರು  


ಸುದ್ದಿ ಓದಿ