ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರ
ಮುಂಡಗೋಡ 04 : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿರಸಿ ಮತ್ತು ಕ್ಷೇತ್ರ ಶಿಕ್ಷಣಧಿಕಾರಿಗಳು ಕಾರ್ಯಲಯ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ ಶಿರಸಿ ಇವರ ಸಹಯೋಗದಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರವನ್ನು ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಎಂ. ಎಸ್. ಹೆಗಡೆ, ಪ್ರಾಂಶುಪಾಲರು, ಡೈಯಟ್ ಉದ್ಘಾಟನೆ ಮಾಡಿದರು.
ಮುಂಡಗೋಡ ತಾಲೂಕಿನಲ್ಲಿ ಇಂದು ಒಂದು ಉತ್ತಮ ಶಿಬಿರ ಹಮ್ಮಿಕೊಂಡಿದ್ದು. ತುಂಬಾ ಸಂತೋಷವಾಗಿದೆ ಏಕೆಂದರೆ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಸ್ವಯಂ ಪ್ರೆರಿತವಾಗಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಕಾರ್ಯಕ್ರಮವನ್ನು ಮಾಡುತ್ತಿದ್ದು. ಮುಂದೆ ಬರುವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಅನುಕೂಲವಾಗುತ್ತದೆ ಮತ್ತು ನಮ್ಮ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು ಏಕೆಂದರೆ ನಾನು ಮುಂಡಗೋಡಕ್ಕೆ ಬಂದಾಗ ಈ ವಿಷಯದ ಕುರಿತು ಮುಖ್ಯ ಶಿಕ್ಷಕರ ಗಮನಕ್ಕೆ ತಂದಾಗ ಎಲ್ಲರೂ ಒಳ್ಳೆಯ ರೀತಿಯಲ್ಲಿ ನನಗೆ ಸ್ಪಂದಿಸಿ ಇಂದು ನನ್ನ ಕನಸಿನ ಕೂಸು ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರ ಮಾಡುತ್ತಿದ್ದು ಬಹಳ ಖುಷಿಯಾಗಿದೆ. ಆ ನನ್ನ ಕನಸು ಮುಂಡಗೋಡದಲ್ಲಿ ಸಕಾರವಾಗಿದೆ ಎಂದು ಭಾವಿಸುತ್ತೇನೆ ಪ್ರತಿ ಮಕ್ಕಳು 5 ದಿನಗಳ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಅಂಕ ಗಳಿಸಲು ಉಪಯುಕ್ತವಾಗುತ್ತದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ನಮ್ಮ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಹೇಳುತ್ತೇನೆ ಎಂದರು.
ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾದ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ. ಎಸ್. ಡಿ. ಮುಡೆಣ್ಣವರ ಪ್ರಾಸ್ತವಿಕವಾಗಿ ಮತನಾಡುತ್ತಾ ಇಂದು ಮುಂಡಗೋಡದಲ್ಲಿ ಶ್ರೀ. ಎಂ. ಎಸ್. ಹೆಗಡೆ ಪ್ರಾಂಶುಪಾಲರು, ಡೈಯಟ್, ಶಿರಸಿರವರ ಆಶಯದಂತೆ ಮುಂಡಗೋಡದಲ್ಲಿ 5 ದಿನಗಳ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರ ತಾಲೂಕಿನ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು ಸಹಕಾರದೊಂದಿಗೆ ಈ ಶಿಬಿರ ಹಮ್ಮಿಕೊಂಡಿದ್ದೇವೆ. ಇಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ 01 ಕೊಠಡಿ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೂರು ಕೊಠಡಿಗಳನ್ನು ಪ್ರತ್ಯೇಕ ಮಾಡಿ ಆಯ್ದ ಶಿಕ್ಷಕರ ಸಹಕಾರದೊಂದಿಗೆ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ.ಅಲ್ಲದೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಬಿ. ಆರ ಸಿ. ಅಧಿಕಾರಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದು ಇದರ ಸದುಪಯೋಗ ಮಕ್ಕಳು ಪಡೆದು ಕೊಳ್ಳಬೇಕು ಮತ್ತು ರುಚಿಕಟ್ಟಾದ ಊಟವನ್ನು ನೀಡುತ್ತೇವೆ ಸರಿಯಾಗಿ ಎಲ್ಲಾ ಮಕ್ಕಳು ತರಗತಿಳಿಗೆ ಹಾಜರಾಗಿ ಮುಂಡಗೋಡ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ ಮುಂದೆ ಬರುವ ವಾರ್ಷಿಕ ಪರೀಕ್ಷೆಯಲ್ಲಿ ಅಂಕಗಳು ಬರಲಿ ಎಂದು ಹೇಳಿದರು.
ನಾರಾಯಣ ಭಾಗ್ವಾತ್ ಮಾತನಾಡಿ ಮಕ್ಕಳಿಗೆ ನೆನಪಿನ ಶಕ್ತಿ ವೃದ್ಧಿ ಹೇಗೆ ಮಾಡಬೇಕು ಮತ್ತು ಸ್ಮರಣ ಶಕ್ತಿ ಹೆಚ್ಚಿಸುವ ವಿಧಾನಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಜಕಣಾಚಾರಿ, ಬಿ. ಇ. ಓ. ಮುಂಡಗೋಡರವರು ಮಾತನಾಡುತ್ತಾ ಮುಂಡಗೋಡ ತಾಲೂಕು ಎಸ್. ಎಸ್. ಎಲ್. ಸಿ. ಫಲಿತಾಂಶವನ್ನು ಆರನೇ ಸ್ಥಾನದಿಂದ ಹಿಂದಿನ ವರ್ಷ 4 ನೆ ಸ್ಥಾನಕ್ಕೆ ಬಂದಿದ್ದೇವೆ. ಈ ಶಿಬಿರದ ಫಲವಾಗಿ 2025 ರಲ್ಲಿ ನಡೆಯುವ ಪರೀಕ್ಷೆಯಲ್ಲಿ ಎರಡು ಅಥವಾ 3 ನೇ ಸ್ಥಾನಕ್ಕೆ ಬರಲು ಎಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ. ಅದರ ಜವಾಬ್ದಾರಿ ಎಲ್ಲಾ ಮಕ್ಕಳ ಮೇಲೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಈಶ್ವರ. ನಾಯ್ಕ, ಉಪನ್ಯಾಸಕರು, ರಮೇಶ. ಅಂಬಿಗೇರ, ಮಂಜುನಾಥ. ಯಾಜಿ, ನಾಗರಾಜ ನಾಯ್ಕ, ಗಾಯಿತ್ರಿ, ಪಿ. ಆರ್. ಇಕ್ಬಾಲ್ ಅಹಮದ,. ಕೃಷ್ಣ. ಭಟ್, ಸವಿತಾ. ವೇರ್ನೆಕರ, ಅಜಿಮ್ ಸರ್, ಗೀರೀಶ್. ಕುಲಕರ್ಣಿ, ಗಜಾನನ. ಶೆಟ್ಟಿ, ಮುಂತಾದವರು ಹಾಜರಿದ್ದರು. ಜಿ. ಎನ್. ನಾಯ್ಕ ವಂದಿಸಿದರು, ರಮೇಶ. ಪವಾರ ನಿರೂಪಿಸಿದರು ಮತ್ತು ನಾಗರಾಜ. ನಾಯ್ಕ ಸ್ವಾಗತ ಮಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.