ಮುಂದಗೋಡ

ಮನಸ್ಸು ಕೊಟ್ಟು ಕಲಿತು ನಿಮ್ಮ ಗುರಿ ತಲುಪಿರಿ:ಶಂಕರ

ಮನಸ್ಸು ಕೊಟ್ಟು ಕಲಿತು ನಿಮ್ಮ ಗುರಿ ತಲುಪಿರಿ:ಶಂಕರ

ಮುಂಡಗೋಡ:ಡಿಪ್ಲೋಮಾದ ಯಾವುದೇ ವಿಭಾಗವಿರಲಿ ಮನಸ್ಸು ಕೊಟ್ಟು ಕಲಿತು ನಿಮ್ಮ ಗುರಿ ತಲುಪಬೇಕು ಎಂದು ಪಟ್ಟಣ ಪಂಚಾಯಿತಿ ಕಿರಿಯ ಇಂಜಿನಿಯರ ಶಂಕರ ದಂಡಿನ ಹೇಳಿದರು. 

ತಾಲೂಕಿನ ಸಾಲಗಾಂವ ಸರ್ಕಾರಿ ಪಾಲಿಟೆಕ್ನಿಕ್‌ನ 2022-23ನೇ ಸಾಲಿನ ಪ್ರಥಮ ಸೆಮಿಸ್ಟರ್‌ನ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಭಯವಿಲ್ಲದೆ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ನ ಸದುಪಯೋಗ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂದರು. ಆದಿಜಾಂಭವ ಪ್ರೌಢಶಾಲೆ ಮುಖ್ಯಸ್ಥ ಎಸ್‌.ಡಿ.ಮುಡೆಣ್ಣವರ ಮಾತನಾಡಿ ಡಿಪ್ಲೋಮಾ ತರಬೇತಿಗಳು ಜೀವನದ ಪ್ರತಿನಿತ್ಯದ ಚಟುವಟಿಕೆಗಳ ಜೊತೆ ಸಂಬಂಧ ಹೊಂದಿವೆ. ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತಂದೆ-ತಾಯಿ ಮತ್ತು ಕಲಿಸಿದ ಗುರುಗಳ ಹೆಸರು ತರಬೇಕು ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರೌಢಶಾಲೆ ಶಿಕ್ಷಕ ಗಂಗಾಧರ ನಾಯ್ಕ ಮಾತನಾಡಿ ಮನುಷ್ಯ ನೈತಿಕತೆ, ಸುಸಂಸ್ಕೃತ ತಳಹದಿ ಮತ್ತು ಸಾಮಾಜಿಕ ಹಕ್ಕುಗಳನ್ನು ಬಿಟ್ಟು ಹೋಗಬಾರದು. ವಿದ್ಯಾರ್ಥಿಗಳು ದೇಶದ ಆಸ್ತಿ. ಪಾಲಿಟೆಕ್ನಿಕ್‌ನ ಸ್ವತ್ತನ್ನು ಸರಿಯಾಗಿ ಬಳಸಬೇಕು. ಡಿಪ್ಲೋಮಾ ಶಿಕ್ಷಣದಲ್ಲಿ ಕೌಶಲ್ಯ ತುಂಬಾ ಮುಖ್ಯ. ಸತತ ಅಭ್ಯಾಸದಿಂದ ಕೌಶಲ್ಯ ಪಡೆಯಬಹುದು ಎಂದರು. ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಮ್‌.ಬಿ.ಹುಡೇದ ಮಾತನಾಡಿ ಪಾಲಿಟೆಕ್ನಿಕ್ ಆರಂಭವಾಗಿ 8-10 ವರ್ಷಗಳ ನಂತರ ಎಲ್ಲ ವಿಭಾಗದ ಸೀಟುಗಳು ಭರ್ತಿಯಾಗಿ ಈ ವರ್ಷ ಇತಿಹಾಸ ನಿರ್ಮಿಸಿದ್ದಕ್ಕೆ ಪ್ರಥಮ ವರ್ಷದ ವಿದ್ಯಾರ್ಥಿಗಳೇ ಕಾರಣ. ಉತ್ತಮ ಕೌಶಲ್ಯ ಹೊಂದಿ, ಶ್ರಮ ವಹಿಸಿ, ಶೃದ್ಧೆ, ಭಕ್ತಿ ಮತ್ತು ಸಮಯ ಪಾಲನೆ ಮಾಡಿ ಉತ್ತಮ ಫಲಿತಾಂಶ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾತೂರ ಪ್ರೌಢಶಾಲೆ ಮುಖ್ಯಸ್ಥ ಅಶೋಕ ಶಂಕರಿಕೊಪ್ಪ ಮಾತನಾಡಿದರು. 

ವಿದ್ಯಾರ್ಥಿಗಳಾದ ಅರವಿಂದ ಹಾವೇರಿ, ನಿಖಿತಾ, ಸೈಯದ್ ಸಲಾವುದ್ದೀನ್, ಸೈಫ್ ಅಲಿಖಾನ್ ಅನಿಸಿಕೆ ವ್ಯಕ್ತಪಡಿಸಿದರು. ಕುಲಸಚಿವೆ ರೂಪಾ ಯಾವಗಲ್ಲ, ವಿಭಾಗಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ಅಮೃತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅರವಿಂದ ಹಾವೇರಿ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ವಂದಿಸಿದರು. 


ಸುದ್ದಿ ಓದಿ