ಜೆಡಿಎಸ್ ಅಭ್ಯರ್ಥಿ ಸೋಲಾಪುರೆ ಮತದಾರರಿಗೆ ಯಾರೆಂಬುದೆ ಗೊತ್ತಿಲ್ಲ; ಅಭ್ಯರ್ಥಿ ಬದಲಾವಣೆಗೆ ಮುಖಂಡರು ಪಟ್ಟು :ಸಚಿನ ಚಲವಾದಿ
ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ದಿಸುತ್ತಿರುವ ಅಭ್ಯರ್ಥಿ ಡಾ.ಸಿ.ಎಸ್.ಸೋಲಾಪುರೆ ಅವರ ವಿರುದ್ದ ಚುನಾವಣೆ ಪೂರ್ವದಲ್ಲಿಯೆ ಸ್ಥಳಿಯ ಮುಖಂಡರು ಕಾರ್ಯಕರ್ತರು ಅಸಮದಾನಗೋಂಡಿರುವದು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ಗೋಂದಲಕ್ಕೆ ಒಳಗಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಒಂದು ಭದ್ರ ನೆಲೆ ಇದೆ ಮೋದಲಿನಿಂದಲು ಜೆಡಿಎಸ್ ಪಕ್ಷದಿಂದ ದೇಶಮುಖ ಮನೆತನದವರು ಶಾಸಕರಾಗಿ, ಸಚಿವರಾಗಿ ಮತಕ್ಷೇತ್ರದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಇಂತಹ ಜೆಡಿಎಸ್ ಭದ್ರ ಕೋಟೆಯ ನೆಲದಲ್ಲಿ ಕ್ಷೇತ್ರದ ಸ್ಥಳಿಯ ಅಲ್ಲದ ಹೋರಗಿನ ಅಭ್ಯರ್ಥಿ ಆಗಿರುವ ಡಾ.ಸಿ.ಎಸ್.ಸೋಲಾಪುರೆ ಅವರಿಗೆ ಜೆಡಿಎಸ್ನಿಂದ ಟಿಕೆಟ್ ಘೋಷನೆ ಮಾಡಿರುವದು ಸ್ಥಳಿಯ ಕೆಲವು ಮುಖಂಡರಿಗೆ ಮತ್ತು ಕಾರ್ಯಕರ್ತರು ಇರುಸು ಮುರುಸು ಉಂಟಾಗಿರುವದು ಬಹಿರಂಗಗೊಂಡಿದೆ.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಕಾಂಗ್ರೇಸ್ ಬಿಟ್ಟರೆ ಜೆಡಿಎಸ್ ಮಾತ್ರ ಪರ್ಯಾಯ ಎಂಬುದು ಮತದಾರರಲ್ಲಿ ಕಾಲ ಉರುಳಿದಂತೆ ಬಿಜೆಪಿ ಬಲಾಡ್ಯವಾಗಿದೆ. ಜೆಡಿಎಸ್ ಪಕ್ಷ ತನ್ನ ಗತಕಾಲವನ್ನು ಮರುಕಳಿಸಲು ಅವಕಾಶವಿದ್ದರು ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ಘೋಷನೆ ಮಾಡುವದನ್ನು ಬಿಟ್ಟು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಪಡೆದು ಅಭ್ಯರ್ಥಿ ಘೋಷನೆ ಮಾಡಬೆಕಿತ್ತು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮೋದಲಿನಿಂದಲು ಲಿಂಗಾಯತರು, ಅಲ್ಪಸಂಖ್ಯಾತರು , ದಲಿತರು ಜೆಡಿಎಸ್ ಪಕ್ಷದ ಜೀವಾಳವಾಗಿದ್ದರು. ದೇಶಮುಖ ಮನೆತನದ ಹಿರಿಯರಾದ ದಿ.ವಿಮಲಾಬಾಯಿ ದೇಶಮುಖ ಅವರ ನಿದನದನಂತರ ಅವರ ಮನೆತನದವರು ಜೆಡಿಎಸ್ ಪಕ್ಷದಿಂದ ಯಾರು ಸ್ಪರ್ದೆ ಮಾಡದಿರುವದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಲ್ಲದಂತಾಗಿದೆ. ಈ ಸಮಯದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಬ್ಬ ಸ್ಥಳಿಯ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ ಪಕ್ಷದ ಬೆಳವಣಿಗೆಗೆ ಅನೂಕೂಲವಾಗುತ್ತಿತ್ತು.
ಸ್ಥಳಿಯರ ಜೋತೆ ಹೆಚ್ಚಿನ ಒಡನಾಟವಿಲ್ಲದ ಕ್ಷೇತ್ರದ ಜನರಿಗೆ ಪರಿಚಯವೆ ಇಲ್ಲದ ಡಾ.ಸಿ.ಎಸ್.ಸೋಲಾಪುರೆ ಅವರಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಘೋಷನೆ ಮಾಡಿರುವದನ್ನು ಹಲವಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ವಿರೋದ ಮಾಡಿದ್ದು. ಕೂಡಲೆ ಜೆಡಿಎಸ್ ವರಿಷ್ಠರು ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂಬ ಕೂಗಿಗೆ ವರಿಷ್ಠರು ಮಣೆ ಹಾಕುತ್ತಾರಾ ಎಂದು ಕಾದುನೋಡಬೇಕಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಬೆಕಿದ್ದರೆ ಕೂಡಲೆ ವರಿಷ್ಠರು ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಹಲವಾರು ಮುಖಂಡರು ಆಗ್ರಹಿಸಿದ್ದಾರೆ.
----
ಬಾಕ್ಸ
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಡಾ.ಸಿ.ಎಸ್.ಸೋಲಾಪುರೆ ಅವರು ಸಮರ್ಥ ಅಭ್ಯರ್ಥಿ ಅಲ್ಲ ಅವರಿಗೆ ಟಿಕೆಟ್ ಘೋಷನೆ ಮಾಡಿರುವದು ನಮಗೆ ಅಸಮದಾನವಾಗಿದೆ. ಸ್ಥಳಿಯರಲ್ಲದ ಸೋಲಾಪುರೆ ಅವರು ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುವ ಮನಸ್ಸಿಲ್ಲ ಅವರನ್ನೂ ಕೂಡಲೆ ಬದಲಾವಣೆ ಮಾಡಬೇಕು. ಅವರನ್ನು ಮುಮದುವರೆಸಿದರೆ ಪಕ್ಷಕ್ಕೆ ಠೇವಣಿ ಕೂಡಾ ಉಳಿಯುವದಿಲ್ಲ.- ಈರಣ್ಣ ತಾರನಾಳ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮುದ್ದೇಬಿಹಾಳ
-----
ಬಾಕ್ಸ
ಮುದ್ದೇಬಿಹಾಳ ಮತಕ್ಷೇತ್ರವು ಜೆಡಿಎಸ್ ಪಕ್ಷದ ಭದ್ರ ಕೋಟೆಯಾಗಿದೆ. ಹಿಂದುಳಿದವರು, ಅಲ್ಪಸಂಖ್ಯಾತರು, ಲಿಂಗಾಯತರು ಸೇರಿದಂತೆ ಬಡಜನರು ಜೆಡಿಎಸ್ ಪರವಾಗಿ ಇದ್ದಾರೆ. ಆದರೆ ಡಾ.ಸಿ.ಎಸ್.ಸೋಲಾಪುರೆ ಸ್ಥಳಿಯ ಅಭ್ಯರ್ಥಿ ಅಲ್ಲ ಅವರ ಪರವಾಗಿ ಕಾರ್ಯಕರ್ತರ, ಮುಖಂಡರ ಅಸಮದಾನವಿದೆ. ಅವರನ್ನೆ ಪಕ್ಷದ ಅಭ್ಯರ್ಥಿ ಎಂದು ಮುಂದುವರೆಸಿದರೆ ಬಹಳಷ್ಟು ಜನ ಪಕ್ಷ ಬಿಡುವ ಸಂಬವವಿದ್ದು ಕೂಡಲೆ ಅವರನ್ನು ಬದಲಾವಣೆ ಮಾಡಬೇಕು.- ಕೃಷ್ಣಾ ರಾಠೋಡ ಜೆಡಿಎಸ್ ಪಕ್ಷದ ಮುಖಂಡರು ಮುದ್ದೇಬಿಹಾಳ.